Advertisement

ಸ್ವರಭ್ರಾಮರಿ ಹಾಡಿನ ಲೋಕಾರ್ಪಣೆ, ಯುಎಇ ಕನ್ನಡ ಮಕ್ಕಳ ಗಾಯನ ಸ್ಪರ್ಧೆ

11:46 AM Nov 04, 2023 | Team Udayavani |

ದುಬೈ : ಬೆಂಗಳೂರು, ಮಂಗಳೂರು, ಬೆಳ್ತಂಗಡಿ ಮತ್ತು ದುಬೈಯಿಂದ ಕಾರ್ಯನಿರ್ವಹಿಸುತ್ತಿರುವ ಸ್ವರ ಭ್ರಾಮರಿ ಸಾಮಾಜಿಕ ಜಾಲತಾಣ ವೇದಿಕೆ, ದುಬೈಯಲ್ಲಿ ಮೊದಲ ಬಾರಿಗೆ ಕರಾಮದ ಎಸ್‌.ಎನ್‌.ಜಿ ಸಭಾಂಗಣದಲ್ಲಿ ಪ್ರತ್ಯಕ್ಷ ಕಾರ್ಯಕ್ರಮವನ್ನು ದಿನಾಂಕ ಅ.22ರಂದು ಯಶಸ್ವಿಯಾಗಿ ಆಯೋಜಿಸಿತ್ತು.

Advertisement

ಸ್ವರ ಭ್ರಾಮರಿ ತಂಡದ ದುಬೈ ವಿಭಾಗಾದ ಸಂಚಾಲಕರಾದ ಯುವರಾಜ್‌ ಕೆ. ದೇವಾಡಿಗ ಮತ್ತು ಪ್ರತಿಮಾ ಯುವರಾಜ್‌ ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ ಯುವರಾಜ್‌ ಅವರು ಸ್ವತಃ ರಾಗ ಸಂಯೋಜಿಸಿ ಹಾಡಿರುವ ದಾಸರಪದ “ಸಾವಧಾನದಿಂದಿರು ಮನವೇ’ ಎಂಬ ಹಾಡಿನ ಆಡಿಯೋ ಮತ್ತು ಸಂಸ್ಕೃತಿ ನೃತ್ಯ ಅಕಾಡೆಮಿಯ ಶಶಿರೇಖಾ ಅವರು ನಿರ್ದೇಶಿಸಿ ಅವರ ಶಿಶ್ಯವೃಂದ ನರ್ತಿಸಿದ ವೀಡಿಯೋವನ್ನು ಲೋಕಾರ್ಪಣೆ ಗೊಳಿಸಲಾಯಿತು.

ಅತಿಥಿಗಳಾದ ದಿನೇಶ್‌ ಚಂದ್ರಶೇಖರ ದೇವಾಡಿಗ, ಹರೀಶ್‌ ಬಂಗೇರ, ಕರ್ನಾಟಕ ಸಂಘ ದುಬೈಯ ಅಧ್ಯಕ್ಷರಾದ ಶಶಿಧರ್‌ ನಾಗರಾಜಪ್ಪ, ದಯಾ ಕಿರೋಡಿಯನ್‌, ಮನೋಹರ ಹೆಗ್ಡೆ, ಜಯಂತ್‌ ಶೆಟ್ಟಿ , ಕರ್ನಾಟಕ ಸಂಘ ಶಾರ್ಜಾದ ನೋಯೆಲ್‌ ಅಲ್ಮೇಡಾ, ಸುಗಂದರಾಜ್‌ ಬೇಕಲ್‌, ವಿಶ್ವನಾಥ್‌ ಶೆಟ್ಟಿ, ಕನ್ನಡ ಪಾಠ ಶಾಲೆಯ ಖಜಾಂಚಿ ನಾಗರಾಜ ರಾವ್‌, ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷರಾದ ಮಲ್ಲಿಕಾರ್ಜುನ ಗೌಡ, ಓ. ಎಂ .ಜಿ ಮೂವೀಸ್‌ನ ಮಮತಾ ಸೆಂಥಿಲ್‌, ಗಲ್ಫ್ ಗೆಳತಿಯರು ಬಳಗದ ಮೇಘ ಶೆಟ್ಟರ್‌, ಸಂಸ್ಕೃತಿ ನೃತ್ಯ ಅಕಾಡೆಮಿಯ ಶ್ರೀಕಾಂತ್‌ ಬೈಂದೂರ್‌ ಮತ್ತು ಸ್ವರ ಭ್ರಾಮರಿ ತಂಡದ ಪ್ರೋತ್ಸಾಹಕರಾದ ಸುರೇಶ್‌ ಶೆಟ್ಟಿ, ಮಹೇಶ್‌ ಅತ್ತಾವರ, ಅಶೋಕ್‌ ಅಂಚನ್‌, ಯಶ್‌ ಕರ್ಕೇರ, ಪ್ರತಾಪ್‌ ಶೆಟ್ಟಿ, ಆನಂದ್‌ ಪಿ., ಅಮರ್‌ ನಂತೂರ್‌, ಮನೋಜ್‌ ಕುಲಾಲ್‌, ಚೇತನ್‌ ಗೌಡ ಹಾಗೂ ಚಂದ್ರಗೌಡ ಲೋಕಾರ್ಪಣೆಗೈದರು.

ಈ ಸಂದರ್ಭದಲ್ಲಿ ಯುಎಇಯಲ್ಲಿ ನೆಲೆಸಿರುವ ಕನ್ನಡದ ಮಕ್ಕಳಿಗೆ ಗೀತ ಗಾಯನ ಸ್ಪರ್ಧೆ ಏರ್ಪಡಿಸಲಾಗಿತ್ತು. ಸೀನಿಯರ್‌ ಮತ್ತು ಜೂನಿಯರ್‌ ವಿಭಾಗದಲ್ಲಿ 25ಕ್ಕೂ ಹೆಚ್ಚು ಕರ್ನಾಟಕ ಮೂಲದ ಪುಟಾಣಿ ಹಾಡುಗಾರರು ಭಾಗವಹಿಸಿದ್ದರು. ಸಂಗೀತ ಸ್ಪರ್ಧೆಯ ತೀರ್ಪುಗಾರರಾಗಿ ಹಿರಿಯ ಸಂಗೀತ ಕಲಾವಿದೆ ವಿದುಷಿ ಸುಮಾ ನಾರಾಯಣ್‌, ವಿದುಷಿ ಮಧುರ ವಿಶ್ವನಾಥ್‌ ಮತ್ತು ರಜನೀಶ್‌ ಅಮೀನ್‌ ಅವರು ಭಾಗವಹಿಸಿದರು.

Advertisement

ಜೂನಿಯರ್‌ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಮಹಾದ್ಯುತ್‌ ಕೌಶಿಕ್‌, ದ್ವಿತೀಯ ಸ್ಥಾನವನ್ನು ಅನಿರುಧ್‌ ರಾವ್‌, ತೃತೀಯ ಬಹುಮಾನವನ್ನು ಆರಾಧನಾ ಭಟ್‌ ಮತ್ತು ಸಮಾಧಾನಕರ ಬಹುಮಾನಗಳನ್ನು ಆರ್ಯ ಐತಾಳ್‌ ಮತ್ತು ಧ್ಯಾನ್‌ ಗಣೇಶ್‌ ಅವರು ಪಡೆದುಕೊಂಡರು. ಸೀನಿಯರ್‌ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಲವಲೀನಾ ಸಂದೀಪ್‌, ದ್ವಿತೀಯ ಸ್ಥಾನವನ್ನು ಸನ್ನಿಧಿ ಶೆಟ್ಟಿ, ತೃತೀಯ ಸ್ಥಾನವನ್ನು ಶನಲ್‌ ಲೋಬೊ, ಸಮಾಧಾನಕರ ಬಹುಮಾನವನ್ನು ಶಾನೋನ್‌ ರುತ್‌ ವಾಸ್‌ ಹಾಗೂ ಧ್ರುವ ಬಾಳಿಗಾ ಪಡೆದುಕೊಂಡರು.

ಸ್ವರ ಭ್ರಾಮರಿ ವತಿಯಿಂದ ಯುವರಾಜ್‌, ಪ್ರತಿಮಾ ಯುವರಾಜ್‌ ಹಾಗೂ ಅವರ ಜತೆ ಸೌಮ್ಯ ಸುರೇಶ್‌ ಶೆಟ್ಟಿ, ಯಶೋಧ ಮಹೇಶ್‌, ದಿವ್ಯಾ ಪ್ರತಾಪ್‌ ಶೆಟ್ಟಿ, ವಿನುತಾ ಆನಂದ್‌ ಹಾಗೂ ಡಯಾನಾ ಯಶ್‌ ಅವರು ಕಾರ್ಯಕ್ರಮವನ್ನು ನಿರ್ವಹಿಸಿದ ಆರತಿ ಅಡಿಗರನ್ನು ಗೌರವಿಸಿ ಸಮ್ಮಾನಿಸಿದರು. ಗೋಲ್ಡನ್‌ ಸ್ಟಾರ್ಷ್‌ ಮ್ಯೂಸಿಕ್‌ ಅಂಡ್‌ ಫೈನ್‌ ಆರ್ಟ್‌ನ ವಿದ್ಯಾರ್ಥಿಗಳು ವೈವಿಧ್ಯಮಯ ಸಿನೆಮೀಯ ನೃತ್ಯಗಳನ್ನು ಮತ್ತು ಸಂಸ್ಕೃತಿ ನೃತ್ಯ ಅಕಾಡೆಮಿ, ಶಾಸ್ತ್ರೀಯ ನೃತ್ಯ ಪ್ರದರ್ಶಿಸಿ ಪ್ರೇಕ್ಷಕರ ಮನ ಗೆದ್ದರು. ಯುವರಾಜ್‌ ದೇವಾಡಿಗ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next