ಹೊಸದಿಲ್ಲಿ: ರಜನಿಕಾಂತ್ ಅವರಿಗೆ ರಾಜಕೀಯದ ಗಂಧಗಾಳಿ ಗೊತ್ತಿಲ್ಲ. ಅವರು ರಾಜಕೀಯ ಪ್ರವೇಶ ಮಾಡುವುದು ಬೇಡ.ಅವರ ಹಣಕಾಸು ಅವ್ಯವಹಾರದ ದಾಖಲೆಗಳು ನನ್ನ ಬಳಿ ಇದೆ ಎಂದು ಬಿಜೆಪಿ ನಾಯಕ ಸುಬ್ರಹ್ಮಣ್ಯನ್ ಸ್ವಾಮಿ ಹೊಸ ಬಾಂಬ್ ಸಿಡಿಸಿದ್ದಾರೆ.
ಸೂಪರ್‌ಸ್ಟಾರ್ ರಜನಿಕಾಂತ್ ಅವರು ರಾಜಕೀಯ ಪ್ರವೇಶಕ್ಕೆ ಸಿದ್ಧತೆ ನಡೆಸಿರುವ ವೇಳೆಯಲ್ಲಿ ಸ್ವಾಮಿ ಅವರು ಇಂಡಿಯಾ ಟುಡೇಗೆ ನೀಡಿದ ಸಂದರ್ಶನದಲ್ಲಿ ಈ ಹೇಳಿಕೆ ನೀಡಿ ತಲ್ಲಣ ಸೃಷ್ಟಿಸಿದ್ದಾರೆ.
‘ರಜನಿಕಾಂತ್ ಅವರ ಹಣಕಾಸು ಅವ್ಯವಹಾರದ ದಾಖಲೆಗಳು ನನ್ನ ಬಳಿ ಇವೆ. ಅದನ್ನು ಬಿಡುಗಡೆ ಮಾಡಿದರೆ ಅವರ ರಾಜಕೀಯ ಪ್ರವೇಶದ ಮಹತ್ವಾಕಾಂಕ್ಷೆ ನುಚ್ಚು ನೂರಾಗಲಿದೆ’ ಎಂದು ಸ್ವಾಮಿ ಹೇಳಿದ್ದಾರೆ.
ನಿಮ್ಮ ಈಗಿರುವ ಇಮೇಜ್ ಹಾಳಾಗಲಿದೆ ಯಾವುದೇ ಕಾರಣಕ್ಕೆ ರಾಜಕೀಯಕ್ಕೆ ಬರಬೇಡಿ ಎಂದು ಎಚ್ಚರಿಕೆ ನೀಡಿದರು.
Related Articles
ಈ ಹಿಂದೆ ರಜನಿಕಾಂತ್ ತಮಿಳಿಗನೇ ಅಲ್ಲ ಅವರಿಗೆ ತಮಿಳು ನಾಡಿನ ಮುಖ್ಯಮಂತ್ರಿಯಾಗುವ ಅರ್ಹತೆ ಇಲ್ಲ ಎಂದು ಮೇರು ನಟನ ಅಭಿಮಾನಿಗಳ ಆಕ್ರೋಶಕ್ಕೆ ಗುರಿಯಾಗಿದ್ದರು.