Advertisement

ಸ್ವಾಮಿತ್ವ ಯೋಜನೆಗೆ ಚಾಲನೆ

03:54 PM Oct 12, 2020 | Suhan S |

ರಾಮನಗರ: ಗ್ರಾಮೀಣ ಪ್ರದೇಶದ ಜಮೀನನ್ನು ಡ್ರೋಣ್‌ ತಂತ್ರಜ್ಞಾನಿಂದ ಭೂಮಾಪನ ಮಾಡಿಸಿ, ಆಸ್ತಿ ಕಾರ್ಡ್‌ ವಿತರಿಸುವ ಕೇಂದ್ರ ಸರ್ಕಾರದ “ಸ್ವಾಮಿತ್ವ’ ಯೋಜನೆಯಡಿ ರಾಜ್ಯದ ರಾಮನಗರದ ಫ‌ಲಾನುಭವಿಗಳು ಸೇರಿದಂತೆ ದೇಶದ ಆರು ರಾಜ್ಯಗಳ ಫ‌ಲಾನುಭವಿಗಳಿಗೆ ಕಾರ್ಡ್‌ ವಿತರಣೆ ಕಾರ್ಯಕ್ರಮವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಭಾನುವಾರ ವಿಡಿಯೋ ಕಾನ್ಫರೆನ್ಸ್‌ ಮೂಲಕ ಉದ್ಘಾಟಿಸಿದರು.

Advertisement

763 ಫ‌ಲಾನುಭವಿಗಳಿಗೆ ಕಾರ್ಡ್‌ ವಿತರಣೆ: ರಾಮನಗರ ಜಿಲ್ಲೆಯ 763 ಮಂದಿ ಫ‌ಲಾನು ಭವಿಗಳ ಮೊಬೈಲ್‌ಗೆ ಆಸ್ತಿ ಕಾರ್ಡಿನ ಡೌನ್‌ ಲೋಡ್‌ ಲಿಂಕ್‌ ಕಳುಹಿಸುವ ಮೂಲಕ ಪ್ರಧಾನ ಮಂತ್ರಿಗಳು ಸಾಮಿತ್ವ ಯೋಜನೆಯಡಿ ಆಸ್ತಿ ಕಾರ್ಡ್‌ ವಿತರಣೆ ಕಾರ್ಯಕ್ರಮ ಉದ್ಘಾಟಿಸಿದರು. 763 ಫ‌ಲಾನುಭವಿಗಳ ಪೈಕಿ ಜಿಲ್ಲೆಯ 4ಗ್ರಾಮಗಳ 157 ಮಂದಿ ಫ‌ಲಾನುಭವಿಗಳು ಡೌನ್‌ಲೋಡ್‌ ಮೂಲಕ ತಮ್ಮ ಆಸ್ತಿಪತ್ರಗಳನ್ನು ಪಡೆದುಕೊಂಡರು. ನಗರದ ಜಿಲ್ಲಾ ಪಂಚಾಯ್ತಿ ಭವನದಲ್ಲಿ ರುವ ಎನ್‌ಐಸಿ ಕಚೇರಿಯಲ್ಲಿಕಾರ್ಯಕ್ರಮದ ನೇರ ಪ್ರಸಾರ ಆಯೋಜನೆಯಾಗಿತ್ತು. ರಾಮನಗರ ತಾಲೂಕಿನ ಎಂ.ಜಿ ಪಾಳ್ಯ, ಸೀಬಕಟೆ r ಹಾಗೂ ಮಾಗಡಿ ತಾಲೂಕಿನಬಸವಾಪಟ್ಟಣ ಮತ್ತು ಶಂಭಯ್ಯನ ಪಾಳ್ಯಗ್ರಾಮಗಳಲ್ಲಿನ 157 ಫ‌ಲಾನುಭವಿಗಳು ತಮ್ಮ ಆಸ್ತಿ ಕಾರ್ಡ್‌ಗಳನ್ನು ಮೊಬೈಲ್‌ನಲ್ಲಿ ಡೌನ್‌ಲೋಡ್‌ ಲಿಂಕ್‌ ಮೂಲಕ ಸ್ವೀಕರಿಸಿದರು.

ಕಾರ್ಡ್‌ ವಿತರಣೆ: ಸ್ವಾಮಿತ್ವ ಕಾರ್ಡ್‌ ವಿತರಣೆಗೆ ಪ್ರಧಾನಿ ಮೋದಿ ಚಾಲನೆ ನೀಡಿದ ನಂತರ ನಗರದ ಎನ್‌ಐಸಿ ಕಚೇರಿಯಲ್ಲಿ ಆಯೋ ಜಿಸಲಾಗಿದ್ದ ಸರಳ ಕಾರ್ಯಕ್ರಮದಲ್ಲಿ ಜಿಪಂ ಸಿಇಒ ಇಕ್ರಂ ಸಾಂಕೇತಿಕವಾಗಿ ಕೆಲವು ಫ‌ಲಾನು ಭವಿಗಳಿಗೆ ಆಸ್ತಿ ಕಾರ್ಡ್‌ ವಿತರಿಸಿದರು. ಭೂದಾಖಲೆಗಳ ಉಪನಿರ್ದೇಶಕ ಬಿ.ಜಿ. ಉಮೇಶ ನೇತೃತ್ವದಲ್ಲಿ ಇನ್ನುಳಿದ ಎಲ್ಲಾ ಫ‌ಲಾನುಭವಿಗಳಿಗೆ ಗ್ರಾಪಂ ಸಿಬ್ಬಂದಿ ಮತ್ತು ಭೂಮಾಪನ ಇಲಾಖೆ ಸಿಬ್ಬಂದಿ ಭೌತಿಕವಾಗಿ ಆಸ್ತಿ ಕಾರ್ಡ್‌ ವಿತರಿಸಿದರು.

ಏನಿದು ಸ್ವಾಮಿತ್ವ ಯೋಜನೆ: ಸ್ವಾಮಿತ್ವ ಯೋಜನೆಯಡಿ ಗ್ರಾಮೀಣ ವಸತಿ ಪ್ರದೇಶಗಳಲ್ಲಿರುವ ವೈಯಕ್ತಿಕ ಆಸ್ತಿ ಗಡಿಗಳನ್ನು ಡ್ರೋಣ್‌ ಕ್ಯಾಮರಾ ಬಳಸಿಕೊಂಡು ಭೂಮಾಪನ ಮಾಡಿಸಿ ಆಸ್ತಿ ಮಾಲೀಕರಿಗೆ ನಕ್ಷೆ ಸಹಿತ ಆಸ್ತಿ ಕಾರ್ಡ್‌ ವಿತರಿಸುವುದು ಯೋಜನೆಯ ಮುಖ್ಯ ಉದ್ದೇಶ. ಮಾಲೀಕರ ಹೆಸರು, ಆಸ್ತಿ, ಕಟ್ಟಡದವಿಸ್ತೀರ್ಣ, ಹಾಗೂ ಋಣಭಾರಗಳು ಇದ್ದಲ್ಲಿ ಅದರ ವಿವರ ಮತ್ತು ನಕ್ಷೆಯ ವಿವರಗಳನ್ನುಆಸ್ತಿ ಕಾರ್ಡ್‌ ಹೊಂದಿರುತ್ತದೆ. ಆಸ್ತಿ ವಿವಾದಗಳು ಹಾಗೂ‌ ಕಟ್ಟಡ ಪರವಾನಗಿ ಪಡೆಯುವ ಪ್ರಕ್ರಿಯೆ ಸರಳವಾಗುತ್ತದೆ. ಸರ್ಕಾರಿ ಆಸ್ತಿಯಲ್ಲಿನ ಅಕ್ರಮ ಸ್ವಾಧೀನವನ್ನು ‌ ತೆರವುಗೊಳಿಸಲು ಸಹಾಯಕವಾಗುತ್ತದೆ. ರಾಮನಗರ ಜಿಲ್ಲೆಯಲ್ಲಿ ಮೊದಲ ಹಂತದಲ್ಲಿ 67 ಗ್ರಾಮಗಳ 24,804 ಆಸ್ತಿಗಳ ಗಡಿಗಳನ್ನು ಗುರುತಿಸಿ ಡ್ರೋಣ್‌ ಕ್ಯಾಮಾರಾ ಮೂಲಕ ನಕ್ಷೆ ಸಿದ್ಧಪಡಿಸಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next