ಸಿಡ್ನಿ: ಆಸ್ಟ್ರೇಲಿಯಾದ ಸಿಡ್ನಿಯಲ್ಲಿರುವ ಪ್ರಮುಖ ಹಿಂದೂ ದೇವಾಲಯದ ಮೇಲೆ ಶುಕ್ರವಾರ ಗೋಡೆಗಳ ಮೇಲೆ ಭಾರತ ವಿರೋಧಿ ಬರಹ ಬರೆದು ವಿರೂಪಗೊಳಿಸಲಾಗಿದೆ.
ಸಿಡ್ನಿಯ ರೋಸ್‌ಹಿಲ್‌ನಲ್ಲಿರುವ ಬಿಎಪಿಎಸ್ ಶ್ರೀ ಸ್ವಾಮಿನಾರಾಯಣ ಮಂದಿರದಲ್ಲಿ ಈ ಘಟನೆ ನಡೆದಿದ್ದು, ಸಮಯ ಇನ್ನೂ ತಿಳಿದುಬಂದಿಲ್ಲ. ದೇವಾಲಯದ ಅಧಿಕಾರಿಗಳು ಸಹ ಗೇಟ್ ಮೇಲೆ ನೇತಾಡುತ್ತಿರುವ ಖಲಿಸ್ಥಾನಿ ಧ್ವಜವನ್ನು ಕಂಡು, ನ್ಯೂ ಸೌತ್ ವೇಲ್ಸ್ (NSW) ಪೊಲೀಸರಿಗೆ ವಿಷಯವನ್ನು ವರದಿ ಮಾಡಿದ್ದಾರೆ ಎಂದು ಆಸ್ಟ್ರೇಲಿಯಾ ಟುಡೇ ಪತ್ರಿಕೆ ವರದಿ ಮಾಡಿದೆ.
“ಮಂದಿರದ ಗೋಡೆಗಳ ಮೇಲೆ ಸಮಾಜ ವಿರೋಧಿ ಶಕ್ತಿಗಳಿಂದ ಭಾರತ-ವಿರೋಧಿ ಬರಹದಿಂದ ನಾವು ತೀವ್ರ ದುಃಖಿತರಾಗಿದ್ದೇವೆ” ಎಂದು ದೇವಸ್ಥಾನವು ಹೇಳಿಕೆಯಲ್ಲಿ ತಿಳಿಸಿದೆ.
ಘಟನೆಯ ಸುತ್ತಲಿನ ಸಂದರ್ಭಗಳ ಬಗ್ಗೆ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.ಈ ವರ್ಷದ ಆರಂಭದಲ್ಲಿ ಮೆಲ್ಬೋರ್ನ್‌ನಲ್ಲಿ ಮೂರು ಹಿಂದೂ ದೇವಾಲಯಗಳು ಮತ್ತು ಬ್ರಿಸ್ಬೇನ್‌ನ ಎರಡು ಹಿಂದೂ ದೇವಾಲಯಗಳನ್ನು ಖಾಲಿಸ್ಥಾನ್ ಬೆಂಬಲಿಗರು ಧ್ವಂಸಗೊಳಿಸಿದ್ದರು.
ಮೇ 24 ರಂದು ಕ್ವಾಡ್ ಶೃಂಗಸಭೆಗಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಸಿಡ್ನಿಗೆ ಭೇಟಿ ನೀಡಲಿದ್ದಾರೆ.