ವಾಡಿ: ಸುಕ್ಷೇತ್ರ ನಾಲವಾರ ಕೋರಿಸಿದ್ದೇಶ್ವರ ಸಂಸ್ಥಾನ ಮಠದ ಪೀಠಾಧಿಧಿಪತಿ ಡಾ| ಸಿದ್ಧ ತೋಟೇಂದ್ರ ಮಹಾಸ್ವಾಮಿಗಳ ಪೂರ್ವಾಶ್ರಮದ ತಾಯಿ ಗೌರಮ್ಮ (85) ಮಂಗಳವಾರ ದೈವಾದೀನರಾದರು.
ನಾಲವಾರ ಶ್ರೀಮಠದ ಪೀಠಾಧಿಪತಿ ಡಾ| ಸಿದ್ಧ ತೋಟೇಂದ್ರ ಸ್ವಾಮೀಜಿ ಸೇರಿದಂತೆ ಇಬ್ಬರು ಪುತ್ರಿಯರು, ಬಂಧುಬಳಗ ಹಾಗೂ ಅಪಾರ ಸಂಖ್ಯೆಯ ಮಠದ ಭಕ್ತರನ್ನು ಅವರು ಅಗಲಿದ್ದಾರೆ. ಬುಧವಾರ ಮಧ್ಯಾಹ್ನ 2:30ಕ್ಕೆ ಮಠದ ಆವರಣದಲ್ಲಿ ಮೃತರ ಅಂತ್ಯಕ್ರಿಯೆ ನೆರವೇರಲಿದೆ.
ಸಂತಾಪ: ಸಂಸದ ಡಾ| ಮಲ್ಲಿಕಾರ್ಜುನ ಖರ್ಗೆ, ಮಾಜಿ ಮುಖ್ಯಮಂತ್ರಿ ಎನ್.ಧರ್ಮಸಿಂಗ್, ಸಚಿವರಾದ ಶರಣಪ್ರಕಾಶ ಪಾಟೀಲ, ಪ್ರಿಯಾಂಕ್ ಖರ್ಗೆ, ಈಶ್ವರ ಖಂಡ್ರೆ, ಶಾಸಕರಾದ ಬಿ.ಜಿ. ಪಾಟೀಲ, ಖಮರುಲ್ ಇಸ್ಲಾಂ, ಮಾಲಿಕಯ್ಯ ಗುತ್ತೇದಾರ, ಗುರುಗೌಡ ಪಾಟೀಲ,
ದತ್ತಾತ್ರೇಯ ಪಾಟೀಲ ರೇವೂರ, ಮಾಜಿ ಸಚಿವ ರೇವುನಾಯಕ ಬೆಳಮಗಿ, ಮಾಜಿ ಶಾಸಕ ವಾಲ್ಮೀಕಿ ನಾಯಕ, ಅಲ್ಲಮ ಪ್ರಭು ಪಾಟೀಲ, ರಾಜುಗೌಡ ಸುರಪುರ, ದೊಡ್ಡಪ್ಪಗೌಡ ನರಬೋಳಿ, ಲಿಂಗಾರಡ್ಡಿಗೌಡ ಬಾಸರೆಡ್ಡಿ, ವೀರಣ್ಣಗೌಡ ಪರಸರೆಡ್ಡಿ, ಡಾ| ಇಂಗಳೇಶ್ವರ ವಾಡಿ, ಭೀಮಣ್ಣ ಸಾಲಿ ಸಂತಾಪ ಸೂಚಿಸಿದ್ದಾರೆ.
ಕಲಬುರಗಿ: ಚಿತ್ತಾಪುರ ತಾಲೂಕಿನ ಸುಕ್ಷೇತ್ರ ನಾಲ್ವಾರದ ಕೋರಿಸಿದ್ದೇಶ್ವರ ಸಂಸ್ಥಾನ ಮಠದ ಪೀಠಾಧಿಪತಿ ಡಾ| ಸಿದ್ದ ತೋಟೆಂದ್ರ ಶಿವಾಚಾರ್ಯ ಮಹಾಸ್ವಾಮಿಗಳ ಪೂರ್ವಾಶ್ರಮದ ತಾಯಿ ಗೌರಮ್ಮಾ ತಾಯಿ ನಿಧನಕ್ಕೆ ಅಖೀಲ ಭಾರತ ವೀರಶೈವ ಶಿವಾಚಾರ್ಯರ ಸಂಘದ ಜಿಲ್ಲಾಧ್ಯಕ್ಷರು ಹಾಗೂ ಶ್ರೀನಿವಾಸ ಸರಡಗಿ ಚಿಕ್ಕವೀರೇಶ್ವರ ಸಂಸ್ಥಾನ ಹಿರೇಮಠದ ಪೀಠಾಧಿಪತಿ ರೇವಣಸಿದ್ದ ಶಿವಾಚಾರ್ಯರು ಶೋಕ ವ್ಯಕ್ತಪಡಿಸಿದ್ದಾರೆ.
ನಾಲ್ವಾರ ಶ್ರೀ ಮಠದ ಅನ್ನಪೂರ್ಣೇಶ್ವರಿ ಎಂದೇ ಕರೆಯಲ್ಪಡುತ್ತಿದ್ದ ಗೌರಮ್ಮಾ ತಾಯಿ ನಿಧನ ನಮ್ಮೆಲ್ಲರಿಗೂ ದಿಗಮೆ ಮೂಡಿಸಿದೆ. ಭಗವಂತ ಅವರ ಆತ್ಮಕ್ಕೆ ಚಿರಶಾಂತಿ ನೀಡಲಿ ಎಂದು ಕಾರ್ಯದರ್ಶಿಗಳು ಹಾಗೂ ಪಾಳಾದ ಗುರುಮೂರ್ತಿ ಶಿವಾಚಾರ್ಯರು, ಸ್ಟೇಷನ್ ಬಬಲಾದನ ರೇವಣಸಿದ್ದ ಶಿವಾಚಾರ್ಯರು,
ತೊನಸನಳ್ಳಿಯ ರೇವಣಸಿದ್ದ ಚರಂತೇಶ್ವರ ಶಿವಾಚಾರ್ಯರು, ಹೊನ್ನಕಿರಣಗಿಯ ಚಂದ್ರಗುಂಡ ಶಿವಾಚಾರ್ಯರು, ಮಹಾಗಾಂವದ ಗುರುಲಿಂಗ ಶಿವಾಚಾರ್ಯರು, ವೆಂಕಟಬೇನೂರಿನ ಸಿದ್ದರೇಣುಕ ಶಿವಾಚಾರ್ಯರು ಸೇರಿದಂತೆ ನಾಡಿನ ವಿವಿಧ ಮಠಾಧೀಶರು, ಹರ-ಗುರು-ಚರಮೂರ್ತಿಗಳು ಹಾಗೂ ಹೋರಾಟಗಾರ ನಾಗಲಿಂಗಯ್ಯ ಮಠಪತಿ ಶೋಕ ವ್ಯಕ್ತಪಡಿಸಿದ್ದಾರೆ.