ಹಾಸನ: ಕೋವಿಡ್ ಪರಿಣಾಮವಾಗಿ ಆಯೋಧ್ಯೆ ರಾಮ ಮಂದಿರ ನಿರ್ಮಾಣಕ್ಕೆ ನಿರೀಕ್ಷಿತ ಮಟ್ಟದಲ್ಲಿ ದೇಣಿಗೆ ಸಂಗ್ರಹವಾಗುತ್ತಿಲ್ಲ ಎಂದು ಆಯೋಧ್ಯೆ ರಾಮ ಮಂದಿರ ನಿರ್ಮಾಣ ಟ್ರಸ್ಟ್ ನಿರ್ದೇಶಕರಲ್ಲೊಬ್ಬರಾದ ಉಡುಪಿ ಪೇಜಾವರ ಮಠದ ಶ್ರೀವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ ತಿಳಿಸಿದರು.
ನಗರದ ಎಂ.ಜಿ.ರಸ್ತೆಯಲ್ಲಿರುವ ಶ್ರೀ ಗುರು ರಾಘವೇಂದ್ರ ಮಠಕ್ಕೆ ಶನಿವಾರ ಭೇಟಿ ನೀಡಿದ್ದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಮಜನ್ಮ ಭೂಮಿ ಯಲ್ಲಿ ಶೀರಾಮ ಮಂದಿರ ನಿರ್ಮಾಣಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಶಿಲಾ ನ್ಯಾಸ ನೆರವೇರಿಸಿದ್ದಾರೆ. ಕಾಮಗಾರಿ ಮುಂದುವರಿದಿದೆ. ಕೋವಿಡ್ ವ್ಯಾಪಕವಾಗಿ ಹರಡುತ್ತಿರುವುದರಿಂದ ಕಾಮಗಾರಿ ಮಂದಗತಿಯಲ್ಲಿದೆ. ನಾವುಗಳೂ ಅಲ್ಲಿಗೆ ಹೋಗಲಾಗುತ್ತಿಲ್ಲ ಸೋಂಕು ತಗ್ಗಿದ ಮೇಲೆ ಆಯೋಧ್ಯೆಗೆ ಭೇಟಿ ನೀಡುವುದಾಗಿ ತಿಳಿಸಿದರು.
ದೇಣಿಗೆ ಸಂಗ್ರಹಕ್ಕೆ ವಿಶೇಷ ಆಂದೋಲನ ನಡೆಸುವ ಚಿಂತನೆ ನಡೆದಿತ್ತು. ಆದರೆ, ಕೋವಿಡ್ ಹರಡುತ್ತಿರುವುದರಿಂದ ಅದು ಸಾಧ್ಯವಾಗಿಲ್ಲ. ಆದರೆ, ಎಲ್ಲರ ಸಹಕಾರವಿರುವುದರಿಂದ ನಿಗದಿತ ಸಮಯದಲ್ಲಿ ರಾಮ ಮಂದಿರ ನಿರ್ಮಾಣ ಸಂಪನ್ನಗೊಳ್ಳಲಿದೆ ಎಂಬ ವಿಶ್ವಾಸವನ್ನು ಸ್ವಾಮೀಜಿ ವ್ಯಕ್ತಪಡಿಸಿದರು.
ದೇಣಿಗೆ ಸಂಗ್ರಹಕ್ಕೆ ಆಂದೋ.ಲನ ನಡೆಯ ದಿದ್ದರೂ ವೈಯಕ್ತಿಕವಾಗಿ ದೇಣಿಗೆ ಸಂಗ್ರಹ ವಾಗುತ್ತಿದ್ದು, ಬ್ಯಾಂಕಿನಲ್ಲಿ ತೆರೆದಿರುವ ಖಾತೆಗೆ ದೇಣಿಗೆಯನ್ನು ಸಾರ್ವ ಜನಿಕರುಜಮಾಮಾಡಬಹುದು. ರಾಮಜನ್ಮಭೂಮಿ ಟ್ರಸ್ಟ್ ಜೊತೆಯಲ್ಲಿಯೇ ಮಂದಿರ ನಿರ್ಮಾಣಕೋಸ್ಕರ ಪ್ರತ್ಯೇಕ ಸಮಿತಿಯೊಂದನ್ನು ರಚಿಸಿ, ಅದಕ್ಕೆ ಎಲ್ಲಾ ಜವಾಬ್ದಾರಿಯನ್ನು ಕೊಡಲಾಗುತ್ತದೆ. ರಾಮ ಮಂದಿರ, ಬೃಂದಾವನದ ನಿರ್ಮಾಣ ಕಾರ್ಯ ನಿಗದಿಯಂತೆ ನಡೆಯುತ್ತದೆ ಎಂದು ಹೇಳಿದರು. ಎಸ್.ಪಿ.ಬಾಲಸುಬ್ರಮಣ್ಯಂ, ಕೇಂದ್ರ ಸಚಿವಸುರೇಶ್ ಅಂಗಡಿ ನಿಧನಕ್ಕೆ ಸಂತಾಪ ಸೂಚಿಸಿದ ಸ್ವಾಮೀಜಿ, ಅವರಿಬ್ಬರಿಗೂ ಸದ್ಗತಿ ದೊರೆಯಲೆಂದು ಪ್ರಾರ್ಥಿಸಿದರು.
ಕೋವಿಡ್ ಸಮುದಾಯಕ್ಕೆ ಹರಡುತ್ತಿದೆ. ಜನರು ಜಾಗೃತರಾಗಿರಬೇಕು. ಮಾಸ್ಕ್ ಧರಿಸುವುದು ಮತ್ತು ಸಾಮಾಜಿಕ ಅಂತರವನ್ನು ಕಾಪಾಡಿಕೊಂಡು ರೋಗ ಹರಡುವುದನ್ನು ತಡೆಯಬೇಕು. ಸಾಂಕ್ರಾಮಿಕ ರೋಗ ತೊಲಗಲಿ, ದೇಶದಲ್ಲಿ ಆರೋಗ್ಯ ನೆಲಸಲಿ ಎಂದು ನಮ್ಮ ಆಶಯ ತಿಳಿಸಿದರು.