Advertisement
ಸೋಮವಾರ ಮಂಗಳೂರು ವನ್ಯಜೀವಿ ವಿಭಾಗದ ಅಧಿಕಾರಿಗಳು ಪೇಜಾವರ ಮಠಕ್ಕೆ ಭೇಟಿ ನೀಡಿ ಶ್ರೀಪಾದರೊಂದಿಗೆ ಮಾತುಕತೆ ನಡೆಸಿದ್ದಾರೆ. ಈ ವೇಳೆ ನಿಮ್ಮ ನಿರ್ಧಾರಕ್ಕೆ ನಾವು ಬದ್ಧ. ಆದರೆ ಗರುಡನ ಆರೈಕೆಯಲ್ಲಿ ಲೋಪವಾಗಬಾರದು ಎಂದು ಪೇಜಾವರ ಶ್ರೀಗಳು ತಿಳಿಸಿದ್ದಾರೆ. ಇದಕ್ಕೆ ಅಧಿಕಾರಿಗಳು, ಗರುಡನ ಕಣ್ಣಿನ ಚಿಕಿತ್ಸೆ ಪೂರ್ಣಗೊಳ್ಳುವವರೆಗೆ ಮಠದಲ್ಲಿಯೇ ಆರೈಕೆಯಲ್ಲಿರಲಿ. ಬಳಿಕ ಪಿಲಿಕುಳಕ್ಕೆ ದಾಖಲಿಸಿ ಎಂದು ಪ್ರತಿಕ್ರಿಯಿಸಿರುವುದಾಗಿ ಪೇಜಾವರ ಮಠದ ಮೂಲಗಳು ತಿಳಿಸಿವೆ.
ಹೆಚ್ಚಿನ ವನ್ಯಜೀವಿಗಳಲ್ಲಿ ವಿಶೇಷ ಗುಣವೊಂದಿದೆ. ಒಮ್ಮೆ ಮನುಷ್ಯನ ಆರೈಕೆಯನ್ನು ಪಡೆದ ಅವು ಮತ್ತೆ ಕಾಡಿಗೆ ಅಥವಾ ತಮ್ಮ ಸಂಕುಲ ಇರುವಲ್ಲಿಗೆ ಹೋದರೆ ಇತರ ಪ್ರಾಣಿ, ಪಕ್ಷಿಗಳು ಅವನ್ನು ದೂರ ಮಾಡುತ್ತವೆ. ಕೊಲ್ಲುವ ಸಾಧ್ಯತೆಯೂ ಇದೆ ಎಂದು ಪಕ್ಷಿ ತಜ್ಞರು ಹೇಳಿದ್ದಾರೆ. ವನ್ಯಜೀವಿ ಅಧಿಕಾರಿಗಳು ಕೂಡ ಇದನ್ನೇ ಪುನರುಚ್ಚರಿಸಿದ್ದಾರೆ. ಹೀಗಾಗಿ ಆರೈಕೆಯಲ್ಲಿರುವ ಗರುಡನ ದೃಷ್ಟಿ ಮರಳಿದರೆ ಅದನ್ನು ಹಾರಿ ಬಿಡದೆ ಪಿಲಿಕುಳಕ್ಕೆ ದಾಖಲಿಸಲು ಸ್ವಾಮೀಜಿಯವರೂ ನಿರ್ಧರಿಸಿದ್ದಾರೆ ಎಂದು ತಿಳಿದುಬಂದಿದೆ.