Advertisement
ಮಠದ ಮುಂದೆ ಕೆಲ ವ್ಯಕ್ತಿಗಳು ಅನಗತ್ಯವಾಗಿ ಪ್ರತಿಭಟನೆ ಹಾಗೂ ದಾಂಧಲೆ ಮಾಡುತ್ತಿದ್ದಾರೆ. ಅಷ್ಟೇ ಅಲ್ಲದೇ, ಮಠದ ಬಾಗಿಲನ್ನು ಒಡೆಯಲು ಯತ್ನಿಸಿ ನಮ್ಮನ್ನು ಹೊರದೂಡಲು ಮಂದಾಗಿದ್ದಾರೆ ಎಂದು ಟ್ರಸ್ಟ್‌ನ ಸದಸ್ಯ ಮಹೇಶ್, ಬಸವರಾಜು ಮತ್ತು ರುದ್ರಾರಾಧ್ಯ ಸೇರಿದಂತೆ ಕೆಲವರ ವಿರುದ್ಧ ದೂರು ದಾಖಲಾಗಿದೆ.
Related Articles
Advertisement
ಅಲ್ಲದೇ, ಮಠದ ಆಸ್ತಿ ಹೊಡೆಯಲು ಸ್ವಾಮೀಜಿ ಕುಟುಂಬ ಹುನ್ನಾರ ನಡೆಸಿದ್ದು, ಅವರನ್ನು ಇಲ್ಲಿಂದ ಖಾಲಿ ಮಾಡಿಸಿ ಬೇರೆಯವರನ್ನು ನೇಮಕ ಮಾಡಬೇಕು ಎಂದು ಗ್ರಾಮಸ್ಥರು ಮತ್ತು ಟ್ರಸ್ಟಿಗಳು ಹಿರಿಯ ಮಠಾಧೀಶರಲ್ಲಿ ಮನವಿ ಮಾಡಿ¨ªಾರೆ.ಈ ಹಿಂದೆಯೂ ಮಠದಲ್ಲಿ ನಡೆಯುತ್ತಿದ್ದ ಅನೈತಿಕ ಚಟುವಟಿಕೆಗಳ ಬಗ್ಗೆ ಪೊಲೀಸರಿಗೂ ಕೂಡ ದೂರು ನೀಡಿ¨ªೆವು, ಆದರೆ, ಹಲವು ಗಣ್ಯರು ಪಂಚಾಯಿತಿ ನಡೆಸಿ ಸುಮ್ಮನಿರಿಸಿದ್ದರು. ಇದೀಗ ಸ್ವಾಮೀಜಿಯ ನೀಚ ಕೃತ್ಯಕ್ಕೆ ಇಡೀ ಗ್ರಾಮಕ್ಕೆ ಮತ್ತು ಸಮುದಾಯಕ್ಕೆ ಕೆಟ್ಟ ಹೆಸರು ಬಂತು. ತಕ್ಷಣ ವೀರಶೈವ ಸಮಾಜದ ಹಿರಿಯ ಮುಖಂಡರು, ಹಿರಿಯ ಸ್ವಾಮೀಜಿಗಳು ಮಧ್ಯ ಪ್ರವೇಶಿಸಿ ಈ ಸಮಸ್ಯೆಯನ್ನು ಬಗೆಹರಿಸಬೇಕು ಎಂದು ಗ್ರಾಮಸ್ಥರು, ಮಠದ ಟ್ರಸ್ಟಿಗಳು ಒತ್ತಾಯಿಸಿದರು. ಎರಡು ಬಣಗಳ ಪ್ರತಿಭಟನೆ: ಪ್ರತಿಭಟನಾಕಾರರಲ್ಲೇ ಎರಡು ಬಣಗಳು ಸೃಷ್ಟಿಯಾಗಿದ್ದು, ಒಂದು ಬಣ ದಯಾನಂದ ಸ್ವಾಮೀಜಿ ಪರವಾಗಿ ಹೋರಾಟ ಮಾಡುತ್ತಿದ್ದರೆ ಮತ್ತೂಂದ ಬಣ ಸ್ವಾಮೀಜಿಯ ಇಡೀ ಕುಟುಂಬವನ್ನು ಹೊರಹಾಕಬೇಕು ಎಂದು ಒತ್ತಾಯಿಸುತ್ತಿವೆ. ಇದೇ ವೇಳೆ ಗ್ರಾಮ ಪಂಚಾಯಿತಿ ಸದಸ್ಯ ರಾಮಯ್ಯ ಹಿಮಾಚಲಪತಿ ಎಂಬಾತನ ಮೇಲೆ ಹನಿಟ್ಯಾ†ಪ್ ಮಾಡಿಸಿದ್ದಿರಾ ಎಂದು ಆರೋಪಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ಹಿಮಾಚಲಪತಿಯ ಪತ್ನಿ ಶಾಂತ ರಾಮಯ್ಯನ ಮೇಲೆ ತಿರುಗಿ ಬಿದ್ದು ನನ್ನ ಪತಿಯ ಮೇಲೆ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ಪ್ರತ್ಯಾರೋಪ ಮಾಡಿದ್ದಾರೆ. ನಿವೃತ್ತ ಅಧಿಕಾರಿ ಮಿರ್ಜಿ ಮಧ್ಯಸ್ಥಿಕೆ
ನಿವೃತ್ತ ಐಪಿಎಸ್ ಅಧಿಕಾರಿ ಜ್ಯೋತಿಪ್ರಕಾಶ್ ಮಿರ್ಜಿ ಅವರ ಗಮನಕ್ಕೆ ಸ್ವಾಮೀಜಿಯ ರಾಸಲೀಲೆ ಕುರಿತು ತಿಳಿದಿತ್ತು. ಎರಡು ತಿಂಗಳ ಹಿಂದಷ್ಟೇ ಮಿರ್ಜಿ ಅವರು ಮಠದ ಟ್ರಸ್ಟಿಗಳು ಹಾಗೂ ಸಮುದಾಯದ ಮುಖಂಡರ ಜತೆ ಚರ್ಚಿಸಿ ಕೆಲವ ಸಲಹೆಗಳನ್ನು ನೀಡಿದ್ದರು. ಹಾಗೇ ಯಾವುದೇ ಸಂದರ್ಭದಲ್ಲಿಯೂ ಸಿಡಿ ಬಿಡುಗಡೆ ಮಾಡುವುದು ಬೇಡ. ಇದರಿಂದ ಮಠ ಹಾಗೂ ಸಮುದಾಯ ಮರ್ಯಾದೆ ಹಾಳಾಗಲಿದೆ ಎಂದು ಸೂಚಿಸಿದ್ದರು. ಆದಾಗ್ಯೂ ಕೆಲ ಕಿಡಿಗೇಡಿಗಳು ಹಣದಾಸೆಗೆ ಸಿಡಿ ಬಿಡುಗಡೆ ಮಾಡಿದ್ದಾರೆ ಎನ್ನಲಾಗಿದೆ. ಈ ಕುರಿತು ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ನಿವೃತ್ತ ಪೊಲೀಸ್ ಅಧಿಕಾರಿ ಜ್ಯೋತಿಪ್ರಕಾಶ್ ಮಿರ್ಜಿ, ಮಠದ ಆಸ್ತಿ ಸಂಬಂಧ ಜಗಳ ತೆಗೆದುಕೊಂಡು ನನ್ನ ಬಳಿಗೆ ಕೆಲವರು ಬಂದಿದ್ದರು. ಆಗ ಮಠದವರು ಕೂಡ ಬಂದಿದ್ದರು. ಆಗ ಕೆಲವರು ಪೀಠಾಧ್ಯಕ್ಷರಾಗಲು ಯೋಗ್ಯತೆ ಇಲ್ಲ. ಸಂಸ್ಕೃತ ಬರಲ್ಲ. ಅಲ್ಲದೇ ಮಹಿಳೆಯರ ಜತೆ ಅನೈತಿಕ ಸಂಬಂಧ ಹೊಂದಿದ್ದಾರೆ. ಈ ಕುರಿತು ಸಿಡಿ ಕೂಡ ಇದೆ. ಆದರೆ, ಸ್ವಾಮೀಜಿ ಸುಳ್ಳು ಸಿಡಿ ಸಿದ್ಧಪಡಿಸಿದ್ದು, ನಕಲಿ ಮಾಡಿದ್ದಾರೆ ಎಂದು ಆರೋಪಿಸಿದ್ದರು. ಆ ವೇಳೆ ಸಿಡಿಯನ್ನು ನಾನು ನೋಡಿರಲಿಲ್ಲ. ಇದೀಗ ಮಾಧ್ಯಮಗಳ ಮೂಲಕ ತಿಳಿದುಕೊಂಡೆ. ಆದರೆ, ಆಕ್ಷೇಪಾರ್ಹ ಸಿಡಿ ಇದ್ದರೆ ಬಿಡುಗಡೆ ಮಾಡುವುದು ಬೇಡ ಎಂದು ಸಲಹೆ ನೀಡಿದ್ದೆ. ನಂತರ ಯಾರು ಬರಲಿಲ್ಲ ಎಂದು ಹೇಳಿದರು.