ಗಂಗಾವತಿ: ಸ್ವಾಮಿವಿವೇಕಾನಂದರ ಆದರ್ಶದ ಬದುಕು ಯುವಕರಿಗೆ ದಾರಿದೀಪವಾಗೇಕು. ವೇಷಭೂಷಣಗಳಿಂದ ವಿವೇಕಾನಂದರಾಗಲು ಸಾಧ್ಯವಿಲ್ಲ. ಅವರ ಅಧ್ಯಾಯನ ಮಾರ್ಗದಲ್ಲಿ ನಡೆಯುವ ಮೂಲಕ ಸರ್ವರೂ ವಿವೇಕಾನಂದರಾಗಲು ಸಾಧ್ಯ ಎಂದು ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಸಿಂಗನಾಳ ವಿರೂಪಾಕ್ಷಪ್ಪ ಹೇಳಿದರು.
ಅವರು ಸ್ವಾಮಿ ವಿವೇಕಾನಂದ ಯುವಕ ಸಂಘದಲ್ಲಿ ಸ್ವಾಮಿ ವಿವೇಕಾನಂದರ 159 ನೇ ಜಯಂತೋತ್ಸವದಲ್ಲಿ ಪಾಲ್ಗೊಂಡು ಮಾತನಾಡಿದರು.
ಇತರ ಧರ್ಮ ಹಾಗೂ ಇತರರನ್ನು ಅಳಿಯದೇ ತಮ್ಮ ಧರ್ಮದ ಬಗ್ಗೆ ಸರ್ವರಿಗೂ ಹೆಮ್ಮೆಪಡುವಂತಹ ವರ್ತನೆಯಿಂದ ಸರ್ವರಲ್ಲೂ ಪರಿವರ್ತನೆ ತರಲು ಸಾಧ್ಯ. ಚಿಕಾಗೋ ಸಮ್ಮೇಳನದಲ್ಲಿ ವಿವೇಕಾನಂದರು ಅನ್ಯ ಧರ್ಮಗಳನ್ನು ಜರಿಯದೇ ಭಾರತೀಯ ಧರ್ಮದ ಬಗ್ಗೆ ವಿಶ್ವಕ್ಕೆ ಮನವರಿಕೆ ಮಾಡಿದ್ದರಿಂದ ಭಾರತದ ಹಿರಿಮೆ ಬೆಳಕಿಗೆ ಬಂದಿದೆ. ವಿವೇಕಾನಂದರನ್ನು ಅನುಸರಿಸುವವರು ಅವರ ವೇಷಭೂಷಣ ಹಾಕಿಕೊಳ್ಳದೇ ಅವರ ತತ್ವಾದರ್ಶಗಳನ್ನು ಜೀವನದಲ್ಲಿ ಪಾಲನೆಯಿಂದ ಆಂತರೀಕ ಬೆಳವಣಿಗೆ ಸಾಧ್ಯವಾಗುತ್ತದೆ ಎಂದರು.
ಪೌರಾಯುಕ್ತ ಅರವಿಂದ ಜಮಖಂಡಿ ಮಾತನಾಡಿ ಯುವಕರು ಸ್ವಾಮಿ ವಿವೇಕಾನಂದರನ್ನು ಆದರ್ಶವಾಗಿ ಸ್ವೀಕಾರ ಮಾಡಿ ಅವರಂತೆ ಆಧ್ಯಾಯನಶೀಲರಾಗಬೇಕು. ದುಶ್ಚಟಗಳಿಂದ ದೂರವಿದ್ದು ಬಡವರ ದೀನ ದಲಿತರ ಸೇವೆ ಮಾಡಬೇಕು. ಇತರರನ್ನು ಗೌರವಿಸುವ ಜತೆಗೆ ನ್ಯಾಯಧರ್ಮದ ಮಾರ್ಗದಲ್ಲಿ ನಡೆಯುವಂತೆ ಕರೆ ನೀಡಿದರು.
ಈ ಸಂದರ್ಭದಲ್ಲಿ ನಗರಸಭೆ ಸದಸ್ಯರಾದ ಉಮೇಶ ಸಿಂಗನಾಳ, ನವೀನಪಾಟೀಲ್, ಶಿವಪ್ಪ ಯಲಬುರ್ಗಿ, ಸಂಘದ ಅಧ್ಯಕ್ಷ ಯಂಕಪ್ಪ ಕಟ್ಟಿಮನಿ, ದೈ.ಶಿ.ಯಂಕಪ್ಪ ತಳವಾರ, ವಿನಯಪಾಟೀಲ್, ಟಿ.ಕುಮಾರ, ಆಂಜಿ, ಟಗರು ಬಾಷಾ, ಶಿವಪ್ಪ, ನಾಗಪ್ಪ ಬಡಿಗೇರ್ ಇದ್ದರು.