Advertisement
ಭಾರತವೆಂದರೆ ಕರಿಯರ ನಾಡು, ಭಾರತವೆಂದರೆ ಅನಾಗರಿಕರ ನಾಡು, ಭಾರತವೆಂದರೆ ಹಾವಾಡಿಗರ ನಾಡು ಎಂದೇ ಅರಿತಿದ್ದ, ಅದನ್ನೇ ಅಪಪ್ರಚಾರ ಪಡಿಸು ತ್ತಿದ್ದ ಪಾಶ್ಚಿಮಾತ್ಯರಿಗೆ ಭಾರತ ದೇಶದ ಸಿರಿ ಸಂಪತ್ತೇನು? ಈ ದೇಶದ ಬೌದ್ಧಿಕತೆಯ ಮಟ್ಟ ಏನು? ಎಂಬಿತ್ಯಾದಿಗಳ ಆಳ ಅರಿವನ್ನು ಪಶ್ಚಿಮದ ಜನರು ಒಪ್ಪುವ ಹಾಗೇ ಉಣಬಡಿಸಿದ ವ್ಯಕ್ತಿ ಯಾರೆಂದು ಪ್ರಶ್ನಿಸಿದರೆ ನಿಸ್ಸಂಶಯ ವಾಗಿ ಸಿಗುವ ಉತ್ತರ ಅದು ಸ್ವಾಮಿ ವಿವೇಕಾನಂದ.
Related Articles
Advertisement
ಇನ್ನು ಸನಾತನ ಧರ್ಮದ ಬಗೆಗೆ ಅವರಿಗಿದ್ದ ವಿಶ್ವಾಸ, ಗೌರವ ಅಪಾರ. ಭಕ್ತಿ ಯೋಗ, ರಾಜ ಯೋಗ, ಜ್ಞಾನಯೋಗಗಳ ಬಗ್ಗೆ ಆಳವಾದ ಅಧ್ಯಯನ ನಡೆಸಿದ್ದ ಇವರು ದೇವ ಸಾಕ್ಷಾತ್ಕಾರಕ್ಕೆ ಮನುಷ್ಯ ಹೇಗೆ ಬದಲಾಗಬೇಕು ಎಂಬುದನ್ನು ಇಲ್ಲಿ ಪ್ರಸ್ತಾಪಿಸಿದ್ದಾರೆ. ವಿದೇಶಿ ನೆಲದ ಮತಪಂಥಗಳು ಮುಕ್ತ ಆಲೋಚನೆಗೆ ನಮ್ಮನ್ನು ತೆರೆಸಿಕೊಳ್ಳದೆ ಅದು ಹೇಳಿದ್ದನ್ನೇ ನಂಬಬೇಕು ಎನ್ನುವ ಒತ್ತಾಸೆಗೆ ನಮ್ಮನ್ನು ಗುರಿಪಡಿಸುತ್ತದೆ ಮತ್ತು ಆ ಮೂಲಕ ನಮ್ಮ ಸಂಕುಚಿತತೆಗೆ ಕಾರಣವಾಗುತ್ತದೆ ಎಂಬುದು ವಿವೇಕಾನಂದರ ಅಭಿಪ್ರಾಯವಾಗಿತ್ತು. ಸನಾತನ ಧರ್ಮವೆಂದರೆ ಅದು ಮೂರ್ತಿ ಪೂಜೆ, ಬರೆ ಜಾತಿ ವ್ಯವಸ್ಥೆಯ ಒಂದು ಗುಂಪು ಎಂದೆಲ್ಲಾ ತಿರಸ್ಕರಿಸಲ್ಪಟ್ಟಿದ್ದ ಹಿಂದೂ ಧರ್ಮವನ್ನು ಹೊಸತಾಗಿ ನೋಡುವಂತೆ ಮಾಡಿದ ಕೀರ್ತಿ ಕೂಡ ವಿವೇಕಾನಂದರಿಗೆ ಸಲ್ಲಬೇಕು. ಮೂರ್ತಿ ಪೂಜೆಯೆಂದರೆ ಅದು ಬರೇ ಕಲ್ಲಿನ ಆರಾಧನೆಯಲ್ಲ, ಬದಲಾಗಿ ನಮ್ಮ ಕೇಂದ್ರ ಶಕ್ತಿಯನ್ನು ಉದ್ದೀಪನಗೊಳಿಸುವ ಸಾಧನ, ದೇವರ ಬಗ್ಗೆ ಅರಿವು ಮೂಡಿಸುವ ಪ್ರತಿಬಿಂಬವದು ಎಂದು ವಿದೇಶಿಯರ ಮುಂದೆ ಗಟ್ಟಿಯಾಗಿ ಹೇಳಿದ್ದೇ ಇವರು. ಇವರಿಗೆ ಅನ್ಯ ಮತದ ಮೇಲೆ ದ್ವೇಷವಿರಲಿಲ್ಲ. ಎಲ್ಲೂ ಯಾವ ಧರ್ಮವನ್ನೂ ಕೊಂಕು ತೆಗೆದು ಮಾತನಾಡಿದ್ದಿಲ್ಲ. ಇವರ ಚಿಂತನೆಗಳಿದ್ದದ್ದು, ಕಾಳಜಿಯಿದ್ದದ್ದು ಅದ್ಯಾಕೆ ಅಗಾಧ ಜ್ಞಾನ ಭಂಡಾರವನ್ನು ಹೊಂದಿರುವ ಹಿಂದೂ ಧರ್ಮವನ್ನು ಸಂಕುಚಿತವಾಗಿಸಿ ಮೂಲೆಗುಂಪಾಗಿಸಲಾಗಿದೆ ಈ ವಿಶ್ವದಲ್ಲಿ ಎನ್ನುವುದರ ಬಗ್ಗೆ. ಅಮೆರಿಕದ ನೆಲದ ಮೇಲೆ ನಿಂತು ನೀಡಿದ ಭಾಷಣ ಜಗದ್ವಿಖ್ಯಾತವಾಯಿತು ಎಂದರೆ ಅದಕ್ಕೆ ಕಾರಣ ಅವರು ಈ ನೆಲದ ಸಂಸ್ಕಾರವನ್ನು ಅಲ್ಲಿನ ವೇದಿ ಕೆಯ ಮೇಲೆ ಎತ್ತಿ ಹಿಡಿದಿರು ವುದು. ವಸುದೈವ ಕುಟುಂಬಕಂ ಎನ್ನುವುದರ ಇನ್ನೊಂದು ರೂಪ ವಾದ ಸಹೋದರ-ಸಹೋದರಿ ಯರು ಎಂಬ ಶಬ್ದವನ್ನೇ ಅವರು ಅಲ್ಲಿ ಸಂಭೋದಿಸಿದ್ದು. ತೊಟ್ಟಿದ್ದ ವೇಷ ಪಕೀರನದ್ದಾದರೂ ಅವರು ಅರಿತಿದ್ದ ವಿಚಾರ ಪಂಡಿತ ರದ್ದು ಎಂದೇ ಖ್ಯಾತರಾಗಿ ದ್ದರು ಆ ನೆಲದಲ್ಲಿ. ಇವರ ಬುದ್ಧಿಮತ್ತೆಯನ್ನು ಕಂಡ ಅಮೆರಿಕದ ಅಂದಿನ ಖ್ಯಾತ ಪೊ›ಫೇಶರ್ ಜೋನ್ ಹೆನ್ರಿ ವೆಟ್‌ರವರು ವಿವೇಕಾನಂದೆ ಬಗ್ಗೆ ಹೇಳುತ್ತ ‘more learned than all our learned Professor put together’ ಎಂದು ಅಭಿಪ್ರಾಯಪಟ್ಟಿದ್ದಾರೆ. ಒಟ್ಟಿನಲ್ಲಿ ವಿವೇಕಾನಂದರಿಗೆ ಇದ್ದ ಧಾರ್ಮಿಕ ಕಾಳಜಿ, ಯೋಗದ ಬಗೆಗೆ ಇದ್ದ ಕಾಳಜಿ ಅಮೋಘವಾದದ್ದು. ಬಡಿ-ಕಡಿ-ಕೊಲ್ಲು ಎನ್ನುವ ಧರ್ಮ ಬೋಧನೆಗಿಂತ ವಿಶ್ವ ಭಾತೃತ್ವವನ್ನು ಬೋಧಿಸುವ ಸನಾತನ ಧರ್ಮವೇ ಶ್ರೇಷ್ಠ ಎನ್ನುವ ಅಭಿಮತ ಇವರದಾಗಿತ್ತು. ಅದೇ ರೀತಿ ತೋರಿಕೆಯ ಧರ್ಮ ಪಾಲನೆಯನ್ನು ಕೂಡ ಅವರು ಕಟುವಾಗಿ ಟೀಕಿಸಿದ್ದರು. ಧರ್ಮದ ವಿಚಾರದಲ್ಲಿ ಢಾಂಬಿಕನಾಗಿರುವುದಕ್ಕಿಂತ ನಾಸ್ತಿಕನಾಗಿರುವುದೇ ಹೆಚ್ಚು ಶ್ರೇಷ್ಠ ಎಂದರು ಇವರು! ಧರ್ಮ ಅಧ್ಯಾತ್ಮದ ವಿಚಾರದಲ್ಲಿ ಯಾರೂ ಯಾವುದನ್ನೂ ಅನುಭವಿಸದೆ ತರ್ಕಿಸಬಾರದು ಎನ್ನುವುದು ಇವರ ಅಭಿಮತವಾಗಿತ್ತು. ಹಿಂದಿನ ಸಂತ ಶ್ರೇಷ್ಠರುಗಳು ಅದ್ಯಾವುದೆಲ್ಲಾ ಗುಹ್ಯಾ ವಿಚಾರಗಳನ್ನು ಅನುಭವಕ್ಕೆ ಪಡೆದಿದ್ದರೋ ಅದೆಲ್ಲವನ್ನೂ ಈ ಕಾಲದಲ್ಲೂ ಪ್ರಯತ್ನಿಸಿದರೆ ಅನುಭವ ವೇದ್ಯಗೊ ಳಿಸಬಹುದು ಎನ್ನುವ ಸ್ಪಷ್ಟ ಸಂದೇಶ ಇವರದ್ದು. ಅಂತಹ ಅನುಭವವನ್ನು ಪಡೆಯಲು ನೆರವಾಗುವ ದೀವಟಿ ಗೆಯೇ ಯೋಗ ಎಂದು ಕರೆಯುತ್ತಾರೆ ವಿವೇಕಾನಂದರು. ಅದ್ಯಾರೋ ಸಂತ ಹೇಳಿದ್ದಾನೆ ಎಂದು ಕಣ್ಣು ಮುಚ್ಚಿ ನಂಬುವುದು ದೊಡ್ಡ ಮೂರ್ಖತನ. ಭಗವದ್ಗೀತೆಯಲ್ಲಿ ಶ್ರೀಕೃಷ್ಣ ಹೇಳಿದಂತೆ ವಿಮೃಶ್ಚೆçವ ದಶೇಷೇಣಃ ಯಥೇಚ್ಚಸಿ ತಥಾ ಕುರು ಎಂಬಂತೆ ನಾವು ಎಂತಹ ಆಳ ವಿಚಾರವಾದರೂ ಸರಿ, ನಮ್ಮ ಬುದ್ಧಿಮಟ್ಟದಲ್ಲಿ ಅರ್ಥೈಸಿ ಕೊಂಡು ಸತ್ಯಾಸತ್ಯಗಳ ಬಗ್ಗೆ ಅನುಭವ ವೇದ್ಯ ಪಡೆಯುತ್ತಾ ವಿಚಾರಗಳನ್ನು ತರ್ಕಿಸಬೇಕು. ಯಾವುದು ಸರಿಯೋ ಅದನ್ನೇ ಅನುಸರಿಸಬೇಕು ಎನ್ನುವುದು ವಿವೇಕಾನಂದರ ಬೋಧನೆಗಳ ಒಟ್ಟು ಸಾರ. – ಪ್ರಸಾದ್ ಕುಮಾರ್, ಮಾರ್ನಬೈಲ್