Advertisement

ಸ್ವಾಮಿ ಸಮರ್ಥ ಪಾಲಿಟೆಕ್ನಿಕ್‌ ಕಾಲೇಜಿನಲ್ಲಿ ಇಂಗ್ಲಿಷ್‌ ಚರ್ಚಾಗೋಷ್ಠಿ

04:09 PM Feb 16, 2017 | |

ಸೊಲ್ಲಾಪುರ: ಮಾಹಿತಿ ತಂತ್ರಜ್ಞಾನದ ಜೊತೆಗೆ ನೈತಿಕ ಮೌಲ್ಯವು  ಶಿಕ್ಷಕ ವೃತ್ತಿಯಲ್ಲಿ ತುಂಬಾ ಮಹತ್ವದ್ದಾಗಿದೆ ಎಂದು ವಿಜಯಪುರದ ನಿವೃತ್ತ ಇಂಗ್ಲಿಷ್‌ ಪ್ರಾಧ್ಯಾಪಕ ರಮೇಶ್‌ ಜೋಶಿ ಹೇಳಿದರು.

Advertisement

ಅಕ್ಕಲಕೋಟ ತಾಲೂಕು ಇಂಗ್ಲಿಷ್‌ ಶಿಕ್ಷಕ ಸಂಘಟನೆ ಹಾಗೂ ತಾಲೂಕು ಪಂಚಾಯತ್‌ ಶಿಕ್ಷಣ ವಿಭಾಗದ ಸಂಯುಕ್ತ ಆಶ್ರಯದಲ್ಲಿ ಇತ್ತೀಚೆಗೆ  ಅಕ್ಕಲ್‌ಕೋಟೆಯ ಸ್ವಾಮಿ ಸಮರ್ಥ ಪಾಲಿಟೆಕ್ನಿಕ್‌ ಕಾಲೇಜಿನಲ್ಲಿ ನಡೆದ ಇಂಗ್ಲಿಷ್‌ ಚರ್ಚಾ

ಗೋಷ್ಠಿಯಲ್ಲಿ ಉಪನ್ಯಾಸ ನೀಡಿದ ಅವರು, ವಿದ್ಯಾರ್ಥಿ ಎಂದರೆ ದೇವರು, ಶಾಲೆ ಎಂದರೆ ಮಂದಿರ, ಶಿಕ್ಷಕ ಎಂದರೆ ಪೂಜಾರಿ ಎಂದು ತಿಳಿದು ಜ್ಞಾನದ ಜತೆಗೆ ನೈತಿಕ ಮೌಲ್ಯವು ಅಳವಡಿಸಿಕೊಳ್ಳಬೇಕು. ಇಂಗ್ಲಿಷ್‌ ಪಾಶ್ಚಿಮಾತ್ಯ ಭಾಷೆಯಾಗಿದ್ದರೂ ಇಂದು ಜ್ಞಾನದ ಖಜಾನೆಯಾಗಿದೆ. ಶಿಕ್ಷಕರು ಇಂಗ್ಲಿಷ್‌ ಭಾಷೆಯ ಬಗ್ಗೆ ವಿದ್ಯಾರ್ಥಿಗಳಿಗೆ ಆಸಕ್ತಿ ಹೆಚ್ಚಿಸಬೇಕು. ಬೋಧನೆ ಮಾಡುವಾಗ ಹೊಸ-ಹೊಸ ಪದ್ಧತಿಗಳನ್ನು ಅಳವಡಿಸಿಕೊಳ್ಳಬೇಕು. ಹೊಸದಾಗಿ ಪರಿಚಯವಾಗಿರುವ ಜ್ಞಾನ ರಚನಾವಾದ ಪದ್ದತಿಯನ್ನು ರೂಢಿಸಿಕೊಳ್ಳಬೇಕು. ವಿದ್ಯಾರ್ಥಿಗಳ ಅನುಭವ ಮೇಲೆ ಪಾಠ ಹೇಳಬೇಕು. ಅಲ್ಲದೆ ಶಿಕ್ಷಕರ ಪಾತ್ರ ಮಾರ್ಗದರ್ಶಕ, ಪ್ರೇರಕ, ಸಹಾಯಕ, ನಿರ್ದೇಶಕ ಹಾಗೂ ಮಿತ್ರನದ್ದಾಗಿದೆ ಎಂದರು.

ಸುರೇಖಾ ಹೋಳಿಕಟ್ಟಿ ಅವರು ಮಾತನಾಡಿ, ಶಿಕ್ಷಕರು ಇಂಗ್ಲಿಷ್‌ ಮಾತನಾಡುವ ಕೌಶಲವನ್ನು ಬೆಳಿಸಿಕೊಳ್ಳಬೇಕು. ಇದಕ್ಕಾಗಿ ಹೆಚ್ಚು ಶ್ರವಣದ ಆವಶ್ಯಕತೆ ಇದೆ. ದಿನನಿತ್ಯದ ಸಂಭಾಷಣೆಗಳನ್ನು ವಿದ್ಯಾರ್ಥಿಗಳಿಗೆ ತಿಳಿ ಹೇಳಿದರೆ ಅವರಲ್ಲಿ ಮಾತನಾಡುವ ಕೌಶಲ ಹೆಚ್ಚಾಗುತ್ತದೆ ಎಂದರು.

ಈ ಸಂದರ್ಭದಲ್ಲಿ ಎಸ್‌. ಎಂ. ಜಾಧವ್‌, ನೀಲಕಂಠ ಪಾಟೀಲ್‌, ಸಚಿನ್‌ ಕಾಟೆ ಅವರನ್ನು ಸಮ್ಮಾನಿಸಲಾಯಿತು. ವಟವೃಕ್ಷ ಸ್ವಾಮಿ ಸಮರ್ಥ ದೇವಸ್ಥಾನದ ಅಧ್ಯಕ್ಷ ಮಹೇಶ ಇಂಗಳೆ, ಅನ್ನಛತ್ರ ಮಂಡಳದ ವಿಶ್ವಸ್ತ ಅಮೋಲ ಭೋಸಲೆ, ಕ್ಷೇತ್ರ ಶಿಕ್ಷಣಾಧಿಕಾರಿ ಮಲ್ಲಿನಾಥ ಸ್ವಾಮಿ, ತಾಲೂಕು ಇಂಗ್ಲೀಷ್‌ ಶಿಕ್ಷಕ  ಸಂಘಟನೆ ಉಪಾಧ್ಯಕ್ಷ ಶ್ರೀಶೈಲ ಮಮಾಣೆ ಮೊದಲಾದವರು ಪಾಲ್ಗೊಂಡಿದ್ದರು.
ಅಕ್ಕಲ್‌ಕೋಟೆ ತಾಲೂಕು ಇಂಗ್ಲೀಷ್‌ ಶಿಕ್ಷಕ ಸಂಘಟನೆಯ ಅಧ್ಯಕ್ಷ ಬಸಯ್ಯ ಹಿರೇಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿ. ಜೆ. ಪೂಜಾರಿ  ಕಾರ್ಯಕ್ರಮ ನಿರೂಪಿಸಿದರು. ಪ್ರಕಾಶ ಅತನೂರೆ ವಂದಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next