Advertisement

Swachh survekshan ಸಮೀಕ್ಷೆ: ಕುಂದಾಪುರಕ್ಕೆ 6ನೇ ಸ್ಥಾನ

11:21 PM Jan 12, 2024 | Team Udayavani |

ಕುಂದಾಪುರ: ಕೇಂದ್ರ ಸರಕಾರದ ಸ್ವಚ್ಛ ಸರ್ವೇಕ್ಷಣ-2023ರ ಸಮೀಕ್ಷೆಯಲ್ಲಿ ಕುಂದಾಪುರ ಪುರಸಭೆಗೆ ರಾಜ್ಯದಲ್ಲಿ 6ನೇ ಸ್ಥಾನ ಲಭಿಸಿದೆ.

Advertisement

ಕೇಂದ್ರ ಸರಕಾರದ ವಸತಿ ಮತ್ತು ನಗರ ವ್ಯವಹಾರಗಳ ಮಂತ್ರಾಲಯವು ವಾರ್ಷಿಕ ಸcತ್ಛತಾ ಸಮೀಕ್ಷೆ ನಡೆಸುತ್ತದೆ. ಪ್ರಸ್ತುತ ಸಾಲಿನ ಸ್ವತ್ಛ ಸರ್ವೇಕ್ಷಣ್‌-2023ರ ಸಮೀಕ್ಷೆಯಲ್ಲಿ 1 ಲಕ್ಷ ಜನಸಂಖ್ಯೆಯ ಒಳಗಿನ ಹಾಗೂ 1 ಲಕ್ಷ ಜನಸಂಖ್ಯೆ ಮೇಲ್ಪಟ್ಟ ನಗರಗಳೆಂದು ವರ್ಗೀಕರಿಸಿ ಶ್ರೇಯಾಂಕಗಳನ್ನು ನೀಡಲಾಗಿದೆ. 4 ಹಂತಗಳಲ್ಲಿ ಪರಿಶೀಲನೆ ನಡೆದಿತ್ತು. ಸೇವಾ ಮಟ್ಟದ ಪ್ರಗತಿ, ನಾಗರಿಕರ ಧ್ವನಿ ಅಡಿಯಲ್ಲಿ ಸ್ಥಳೀಯಾಡಳಿತ ಸಂಸ್ಥೆಗಳು ಉತ್ತಮವಾಗಿ ನಿರ್ವಹಿಸಿದ್ದು, ಸಾರ್ವಜನಿಕರು ಸಮೀಕ್ಷೆಯಲ್ಲಿ ಭಾಗವಹಿಸಿದ್ದರು.

ಇತರ ಸಂಸ್ಥೆಗಳು ಗಳಿಸಿದ ಸ್ಥಾನದ ವಿವರ ಇಂತಿದೆ.
ರಾಜ್ಯದಿಂದ 311 ಮತ್ತು ದೇಶದಿಂದ 4,477 ನಗರಾಡಳಿತಗಳನ್ನು ಸಮೀಕ್ಷೆ ಆಯ್ದುಕೊಳ್ಳಲಾಗಿತ್ತು.

ನಗರಾಡಳಿತ ರಾಜ್ಯದ ರ್‍ಯಾಂಕ್‌ ದೇಶದ ರ್‍ಯಾಂಕ್‌
ಮಂಗಳೂರು ಮನಪಾ 9  253
ಉಡುಪಿ ನಗರಸಭೆ 10   278
ಕಾಪು ಪುರಸಭೆ 23   1,858
ಕಾರ್ಕಳ ಪುರಸಭೆ 25   1,900
ಪುತ್ತೂರು ನಗರಸಭೆ 36   2,042
ಉಳ್ಳಾಲ ಪುರಸಭೆ 75   2,610
ಮೂಡುಬಿದಿರೆ ಪುರಸಭೆ 78   2,649
ಮೂಲ್ಕಿ ಪ.ಪಂ. 107   2,891
ಸಾಲಿಗ್ರಾಮ ಪ.ಪಂ. 195   3,354
ವಿಟ್ಲ ಪ.ಪಂ. 196   3,360
ಬಂಟ್ವಾಳ ಪುರಸಭೆ 204   3,383
ಸುಳ್ಯ ಪ.ಪಂ. 206   3,389
ಬೆಳ್ತಂಗಡಿ ಪ.ಪಂ. 236   3,540
ಬೈಂದೂರು ಪ.ಪಂ. 249   3,673
ಕಿನ್ನಿಗೋಳಿ ಪ.ಪಂ. 263   3,772
ಬಜಪೆ ಪ.ಪಂ. 285   3,938

Advertisement

Udayavani is now on Telegram. Click here to join our channel and stay updated with the latest news.

Next