Advertisement

ಕಸದ ಗುಡ್ಡ ತೆರವು, ಕಲುಷಿತ ನೀರು ನದಿ ಸೇರದಂತೆ ತಡೆ

01:57 AM Oct 03, 2021 | Team Udayavani |

ಉಡುಪಿ: ಉಡುಪಿ ನಗರ ಬಿಜೆಪಿ ಆಶ್ರಯದಲ್ಲಿ ಸೇವೆ ಮತ್ತು ಸಮರ್ಪಣ ಅಭಿಯಾನದ ಪ್ರಯುಕ್ತ “ಸ್ವಚ್ಛ ಭಾರತ-ಸ್ವಚ್ಛ ಉಡುಪಿ’ ಧ್ಯೇಯ ದಡಿ ಬೀಚ್‌ ಶುಚಿತ್ವ ಕಾರ್ಯಕ್ರಮ ಮಲ್ಪೆ ಸೀವಾಕ್‌ನಲ್ಲಿ ಶನಿವಾರ ನಡೆಯಿತು.

Advertisement

ಮೋದಿ ಸ್ಫೂರ್ತಿ
ವಿಧಾನ ಪರಿಷತ್‌ ಸದಸ್ಯ ಪ್ರತಾಪಸಿಂಹ ನಾಯಕ್‌ ಮಾತನಾಡಿ, ಮೋದಿಯವರ ನಿರಂತರ ಶ್ರಮ, ಹುಮ್ಮಸ್ಸು, ಕೆಲಸದ ತುಡಿತ ಯುವ ಜನತೆಗೆ ಸ್ಫೂರ್ತಿಯಾಗಿದೆ ಎಂದರು.

ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್‌ ನಾಯಕ್‌ ಅವರು ಸ್ವಚ್ಛತೆ ಮತ್ತು ಸ್ವಾಸ್ಥ್ಯಕ್ಕೆ ಕೇಂದ್ರ ಸರಕಾರ ಸಾಕಷ್ಟು ಒತ್ತು ನೀಡುತ್ತಿರುವುದಲ್ಲದೆ, ದೇಶದ ಎಲ್ಲ ಸಮಸ್ಯೆಗಳಿಗೆ ಸೂಕ್ತ ಉತ್ತರ ಕಂಡುಕೊಳ್ಳುವ ನಿಟ್ಟಿನಲ್ಲಿ ಮುಂದೆ ಸಾಗುತ್ತಿದೆ ಎಂದರು.

ವಿಭಾಗ ಪ್ರಭಾರಿ ಕಿದಿಯೂರು ಉದಯ ಕುಮಾರ್‌ ಶೆಟ್ಟಿ, ಎಸ್‌ಸಿ ಮೋರ್ಚಾ ರಾಜ್ಯ ಕಾರ್ಯದರ್ಶಿ ದಿನಕರ ಬಾಬು, ನಗರಸಭೆ ಅಧ್ಯಕ್ಷೆ ಸುಮಿತ್ರಾ ಆರ್‌. ನಾಯಕ್‌, ಉಪಾಧ್ಯಕ್ಷೆ ಲಕ್ಷ್ಮೀ ಮಂಜು ಕೊಳ, ಸಂಚಾಲಕ ವೆಂಕಟರಮಣ ಕಿದಿಯೂರು, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೆ. ರಾಘವೇಂದ್ರ ಕಿಣಿ, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ನಗರಸಭೆ ಸದಸ್ಯೆ ಎಡ್ಲಿನ್‌ ಕರ್ಕಡ, ನಾಮನಿರ್ದೇಶಿತ ಸದಸ್ಯ ವಿಜಯ ಕುಂದರ್‌ ಉಪಸ್ಥಿತರಿದ್ದರು.

ಇದನ್ನೂ ಓದಿ:ಗಾಂಧೀಜಿ ನೈತಿಕ ಭಾರತ ಕಟ್ಟುವ ಶಕ್ತಿ: ಬೊಮ್ಮಾಯಿ

Advertisement

ಸಾವಿರ ಮಂದಿಗೆ ಚಹಾ
ಅಭಿಯಾನ ಪ್ರಯುಕ್ತ ಬೀಚ್‌ನಲ್ಲಿ ಮೋದಿ ಚಾಯ್‌ ಸ್ಟಾಲ್‌ ತೆರೆದು 1 ಸಾವಿರ ಮಂದಿಗೆ ಚಹಾ ವಿತರಿಸಲಾಯಿತು. ಬೀಚ್‌ ಸ್ವಚ್ಛತೆ ಮಾಡಲಾಯಿತು. ನಗರ ಬಿಜೆಪಿ ಅಧ್ಯಕ್ಷ ಮಹೇಶ್‌ ಠಾಕೂರ್‌ ಸ್ವಾಗತಿಸಿ, ಪ್ರಸ್ತಾವನೆಗೈದರು. ನಗರಸಭೆ ಸ್ಥಾಯೀ ಸಮಿತಿ ಅಧ್ಯಕ್ಷ ಗಿರೀಶ್‌ ಅಂಚನ್‌ ನಿರೂಪಿಸಿದರು. ನಗರಸಭೆ ಸದಸ್ಯ ಮಂಜುನಾಥ ಮಣಿಪಾಲ ಸ್ವಚ್ಛತಾ ಪ್ರತಿಜ್ಞಾ ವಿಧಿ ಬೋಧಿಸಿ, ವಂದಿಸಿದರು.

ಇಂದ್ರಾಣಿ ನದಿ ನೈರ್ಮಲ್ಯ ಕಾಪಾಡಲು ಸಂಕಲ್ಪ
ಪ್ರಧಾನಿ ನರೇಂದ್ರ ಮೋದಿಯವರು ಗಾಂಧೀಜಿಯವರ ಕನಸಾದ ಸ್ವತ್ಛತೆ ಮತ್ತು ಸ್ವದೇಶಿ ಅಭಿಯಾನ ಬಲಪಡಿಸುವ ನಿಟ್ಟಿ ನಲ್ಲಿ ಸಂದೇಶ ನೀಡಿದ್ದಾರೆ. ಕಸದ ಗುಡ್ಡ ತೆರವುಗೊಳಿಸುವುದು ಮತ್ತು ನದಿ ಗಳಿಗೆ ಕಲುಷಿತ ನೀರು ಬಿಡದಂತೆ ಮಾಡುವ ಬಗ್ಗೆ ಜನತೆ ಪಣ ತೊಡಬೇಕಿದೆ. ಉಡುಪಿ ಬಿಜೆಪಿಯು ಇಂದ್ರಾಣಿ ಸಹಿತ ವಿವಿಧ ನದಿ ಗಳಿಗೆ ಕಲುಷಿತ ನೀರು ಬಿಡದಂತೆ ಮಾಡುವುದು, ಅಲೆವೂರು ಗ್ರಾ.ಪಂ. ಕರ್ವಾಲಿನಲ್ಲಿರುವ ಕಸದ ಗುಡ್ಡ (ಡಂಪಿಂಗ್‌ ಯಾರ್ಡ್‌) ತೆರವುಗೊಳಿಸುವ ಸಂಕಲ್ಪ ತೊಟ್ಟಿದೆ ಎಂದು ಶಾಸಕ ಕೆ. ರಘುಪತಿ ಭಟ್‌ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next