Advertisement

ಸ್ವಚ್ಛ ಭಾರತ ಅಭಿಯಾನದಿಂದ ವರ್ಷಕ್ಕೆ 3 ಲಕ್ಷ ಜೀವ ರಕ್ಷಣೆ: WHO ವರದಿ

11:39 AM Aug 04, 2018 | udayavani editorial |

ವಾಷಿಂಗ್ಟನ್‌ : ಸ್ವಚ್ಛ  ಭಾರತ ಅಭಿಯಾನದಿಂದ ವರ್ಷಕ್ಕೆ ಮೂರು ಲಕ್ಷ ಅಮೂಲ್ಯ ಜೀವಗಳನ್ನು ಉಳಿಸಲು ಸಾಧ್ಯ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯು ಎಚ್‌ಓ) ಹೇಳಿದೆಯಲ್ಲದೆ ಆರೋಗ್ಯಕರ ಭಾರತದೆಡೆಗೆ ಸಾಗುವ ಈ ಯೋಜನೆಯನ್ನು ಬಹುವಾಗಿ ಮೆಚ್ಚಿಕೊಂಡಿದೆ. 

Advertisement

ಪ್ರಧಾನಿ ನರೇಂದ್ರ ಮೋದಿ ಅವರು 2014ರ ಅಕ್ಟೋಬರ್‌ 2ರಂದು ಸ್ವಚ್ಛ  ಭಾರತ ಅಭಿಯಾನಕ್ಕೆ ಚಾಲನೆ ನೀಡಿದ್ದರು. 2019ರೊಳಗೆ ಇಡಿಯ ದೇಶವನ್ನು ಬಯಲು ಶೌಚ ಮುಕ್ತವಾಗಿರಿಸುವ ಗುರಿಯನ್ನು ಈ ಮಹತ್ವಾಕಾಂಕ್ಷಿ ಯೋಜನೆಯು ಹೊಂದಿದೆ. 

2019ರ ಗುರಿಯ ಪ್ರಕಾರ ಭಾರತವು ಬಯಲು ಶೌಚ ಮುಕ್ತವಾದರೆ ಜನರು ಡಯೋರಿಯಾ ಮುಂತಾದ ಕಾಯಿಲೆಗಳಿಗೆ ಗುರಿಯಾಗುವುದನ್ನು ತಪ್ಪಿಸಬಹುದಾಗಿದೆ. ಮಾತ್ರವಲ್ಲದೆ ವರ್ಷಕ್ಕೆ  ಮೂರು ಲಕ್ಷ ಜನರು ಸಾಯುವುದನ್ನು ತಪ್ಪಿಸಬಹುದಾಗಿದೆ.ಜತೆಗೆ 1.40 ಕೋಟಿ ಜನರು ಆರೋಗ್ಯಕರ ಜೀವನ ನಡೆಸುವುದು ಸಾಧ್ಯವಾಗುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆ  ತನ್ನ ವರದಿಯಲ್ಲಿ ಹೇಳಿದೆ. 

ಸ್ವಚ್ಛ  ಭಾರತ ಗ್ರಾಮೀಣ ಅಭಿಯಾನದಿಂದ ಹಳ್ಳಿಗರ ಆರೋಗ್ಯ ಸುಧಾರಿಸುವುದಲ್ಲದೆ ಅವರು ದೀರ್ಘಾಯುಗಳಾಗಲು ಸಾಧ್ಯ ಎಂದೂ ವಿಶ್ವ ಆರೋಗ್ಯ ಸಂಸ್ಥೆ  ಹೇಳಿದೆ. 

Advertisement

Udayavani is now on Telegram. Click here to join our channel and stay updated with the latest news.

Next