Advertisement
ವಂಡ್ಸೆ ಗ್ರಾ.ಪಂ.ನಲ್ಲಿ ಆರಂಭಗೊಂಡಿರುವ ಎಸ್.ಎಲ್.ಆರ್.ಎಂ. ಘಟಕವನ್ನು ವೀಕ್ಷಿಸಲು ಆ. 20ರಂದು ಇಲ್ಲಿಗೆ ಆಗಮಿಸಿದ ಸಚಿವರು ಸುದ್ದಿಗಾರರೊಡನೆ ಮಾತನಾಡುತ್ತಾ ಈ ಭಾಗದಲ್ಲಿ ಬಹಳಷ್ಟು ಯಶಸ್ಸು ಕಂಡುಕೊಂಡಿರುವ ಈ ಯೋಜನೆಯ ಅನುಷ್ಠಾನ ಕ್ರಮ ಇತರ ಗ್ರಾ.ಪಂ.ಗಳಿಗೆ ಮಾದರಿಯಾಗಿದೆ ಎಂದರು.ಸರಕಾರವು ರಾಜ್ಯದ ಎಲ್ಲ ಗ್ರಾಮಗಳಲ್ಲಿ ಎಸ್.ಎಲ್.ಆರ್.ಎಂ. ಘಟಕವನ್ನು ಆರಂಭಿಸುವ ಬಗ್ಗೆ ಕ್ರಮ ಕೈಗೊಳ್ಳುವುದು. ಕೇವಲ ಸರಕಾರದ ಅನುದಾನವನ್ನೇ ಅವಲಂಬಿಸದೇ ಈ ಒಂದು ಘಟಕದ ನಿರ್ವಹಣೆ ಯಿಂದ ಬರುವ ಆರ್ಥಿಕ ವ್ಯವಸ್ಥೆಯನ್ನು ಬಳಸಿದಲ್ಲಿ ಹೆಚ್ಚಿನ ಗುರಿ ಸಾಧನೆಗೆ ಸಾಧ್ಯ ಎಂದು ಸಚಿವರು ಹೇಳಿದರು.
ಕಸವನ್ನು ತೆಗೆದು ಸಂಪನ್ಮೂಲವಾಗಿಸುವುದರೊಡನೆ ಮಹಿಳೆಯರಿಗೆ ಉದ್ಯೋಗಾವಕಾಶ ಕಲ್ಪಿಸಿರುವುದು ಉತ್ತಮ ಬೆಳವಣಿಗೆ. ಮೊದಮೊದಲು ಪೇಟೆಯ ಸಮಸ್ಯೆಯಾಗಿದ್ದ ಕಸ ವಿಲೇವಾರಿ ಈಗ ಗ್ರಾಮೀಣ ಪ್ರದೇಶಕ್ಕೂ ಚಾಚಿರುವುದರಿಂದ ಸಾರ್ವತ್ರಿಕವಾಗಿ ಇದಕ್ಕೊಂದು ಶಾಶ್ವತ ಪರಿಹಾರ ಕಂಡುಕೊಳ್ಳುವಲ್ಲಿ ಅಧ್ಯಯನ ನಡೆಸುತ್ತಿದ್ದು ವಂಡ್ಸೆ ಗ್ರಾ.ಪಂ.ನ ಈ ವ್ಯವಸ್ಥೆಯನ್ನು ವೀಕ್ಷಿಸುವುದರೊಡನೆ ಹೆಚ್ಚಿನ ಮಾಹಿತಿ ದೊರಕಿದೆ ಎಂದರು. ಈ ಸಂದರ್ಭದಲ್ಲಿ ಜಿ.ಪಂ. ಮುಖ್ಯ ಕಾರ್ಯನಿರ್ವಹಣಾದಿಕಾರಿ ಶಿವಾನಂದ ಕಾಪಸಿ, ಪಂಚಾಯತ್‌ರಾಜ್ ಮತ್ತು ಗ್ರಾಮೀಣಾಭಿವೃದ್ಧಿ ನಿರ್ದೇಶಕರಾದ ಕೆಂಪೇಗೌಡ, ಭುವನಹಳ್ಳಿ ನಾಗರಾಜ, ಬೈಂದೂರು ಶಾಸಕ ಬಿ.ಎಂ. ಸುಕುಮಾರ ಶೆಟ್ಟಿ, ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ, ವಂಡ್ಸೆ ಗ್ರಾ.ಪಂ. ಅಧ್ಯಕ್ಷ ಉದಯ ಕುಮಾರ್ ಶೆಟ್ಟಿ, ಉಪಾಧ್ಯಕ್ಷೆ ಶಾರದಾ ರುದ್ರಯ್ಯ ಆಚಾರ್ಯ, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಕಿರಣ್ ಪಡೆ°àಕರ್, ತಾ.ಪಂ. ಸದಸ್ಯ ಉದಯ ಜಿ. ಪೂಜಾರಿ, ಪಿಡಿಒ ಶಂಕರ ಆಚಾರ್ಯ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜನಾರ್ದನ ತೊನ್ಸೆ, ಗ್ರಾ.ಪಂ. ಸದಸ್ಯರು, ರಾಜು ಪೂಜಾರಿ, ವಂಡಬಳ್ಳಿ ಜಯರಾಮ ಶೆಟ್ಟಿ, ಇಲಾಖೆಯ ಅಧಿಕಾರಿಗಳು, ಗ್ರಾಮಸ್ಥರು ಉಪಸ್ಥಿತರಿದ್ದರು.
Related Articles
ಭಾರೀ ಗಾಳಿ ಮಳೆಯಿಂದ ತೆಂಕೊಡ್ಗಿಯಲ್ಲಿ ಗುಡ್ಡ ಕುಸಿದು ಜಖಂಗೊಂಡ ಮನೆಗೆ ಭೇಟಿ ನೀಡಿದ ಸಚಿವರು ಮಾಹಿತಿ ಸಂಗ್ರಹಿಸಿದರು.
Advertisement
ಮಾಹಿತಿ, ಸ್ಪಷ್ಟ ಚಿತ್ರಣ ಇಲ್ಲ ರಾಜ್ಯದಲ್ಲಿ 45 ಲಕ್ಷ ಶೌಚಾಲಯ ನಿರ್ಮಿಸಲಾಗಿದ್ದು ಇನ್ನೂ 4 ಲಕ್ಷ ಶೌಚಾಲಯ ನಿರ್ಮಾಣ ಕಾರ್ಯ ಬಾಕಿ ಇದೆ. ಬಯಲು ಮುಕ್ತ ಶೌಚಾಲಯ ಜಿಲ್ಲೆಯಾಗಿರುವ ಉಡುಪಿಯನ್ನೇ ಆಧಾರವಾಗಿಟ್ಟು ಬಯಲು ಮುಕ್ತ ಶೌಚಾಲಯಗಳ ರಾಜ್ಯವಾಗಿಸುವಲ್ಲಿ ಪ್ರಯತ್ನಿಸಲಾಗುವುದು.
– ಕೃಷ್ಣ ಭೈರೇಗೌಡ,ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಚಿವ