Advertisement

ಹೊಕ್ಕಾಡಿಗೋಳಿ ಶಾಲೆಯಲ್ಲಿ ‘ಸ್ವಚ್ಛ ಗೆಳತಿ’ ಕಾರ್ಯಕ್ರಮ ಉದ್ಘಾಟನೆ

09:31 PM Jul 28, 2018 | Team Udayavani |

ಸಿದ್ಧಕಟ್ಟೆ: ಹೊಕ್ಕಾಡಿಗೋಳಿ ಶಾಲೆಯಲ್ಲಿ ‘ಸ್ವಚ್ಛ ಗೆಳತಿ’ ಕಾರ್ಯಕ್ರಮ ಶನಿವಾರದಂದು ಉದ್ಘಾಟನೆಗೊಂಡಿತು. ಹೊಸಂಗಡಿ ಕ್ಷೇತ್ರದ ತಾಲೂಕು ಪಂಚಾಯತ್ ಸದಸ್ಯರಾದ ಓಬಯ್ಯ ಅವರು ದೀಪ ಬೆಳಗುವ ಮೂಲಕ ಈ ವಿನೂತನ ಯೋಜನೆಗೆ ಚಾಲನೆ ನೀಡಿದರು. ಆರಂಬೋಡಿ ಗ್ರಾಮಪಂಚಾಯತ್ ಅಧ್ಯಕ್ಷರಾದ ಪ್ರಭಾಕರ ಹೆಚ್. ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.

Advertisement

ವೇದಿಕೆಯಲ್ಲಿ ಪಂಚಾಯತ್ ಉಪಾಧ್ಯಕ್ಷೆ ಆಶಾ ಶೆಟ್ಟಿ, ಶಾಲಾ SDMC ಅಧ್ಯಕ್ಷರಾದ ಸದಾಶಿವ ಹುಲಿಮೇರು, ಮುಖ್ಯಶಿಕ್ಷಕರಾದ ರಾಜೇಶ್ ನೆಲ್ಯಾಡಿ, ಪಂಚಾಯತ್ ಕಾರ್ಯದರ್ಶಿ ಸೋಮಶೇಖರ್, ಆಶಾ ಕಾರ್ಯಕರ್ತೆ ಗುಲಾಬಿ, ಶಾಲಾ ಶಿಕ್ಷಕರು, ‌ಹಳೆವಿದ್ಯಾರ್ಥಿ ಸಂಘದ ಶಶಿಧರ ಕಲ್ಲಾಪು, ಸುರೇಶ್, ಪದ್ಮನಾಭ ಅಬ್ಬಂಜಾಲು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಶಾಲಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಮೆಟಿಲ್ಡಾ ಡಿಸೋಜ ವಂದಿಸಿ, ಸುಚಿತ್ರಾ ಕಾರ್ಯಕ್ರಮವನ್ನು ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next