ಕ್ರಮವೂ ಇದೇವೇಳೆ ನೆರವೇರಿತು.
Advertisement
ಮುಂಜಾನೆ ಉಜಿರೆ ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನದ ಮುಂಭಾಗದಲ್ಲಿ ಚಾಲನೆ ನೀಡಲಾಯಿತು. ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ| ಬಿ. ಯಶೋವರ್ಮ, ಉಜಿರೆ ದೇವಸ್ಥಾನದ ಆಡಳಿತ ಮೊಕ್ತೇಸರ ವಿಜಯ ರಾಘವ ಪಡ್ವೆಟ್ನಾಯ, ಪ್ರತಾಪ್‌ಸಿಂಹ ನಾಯಕ್, ಮಹಾವೀರ ಅಜ್ರಿ ಪಾಲ್ಗೊಂಡಿದ್ದರು.
ಡಾ| ಹೆಗ್ಗಡೆ ಅವರ ಅಭಿಮಾನಿಗಳು ಕ್ಷೇತ್ರಕ್ಕೆ ಆಗಮಿಸಿ ಗೌರವ ಸಲ್ಲಿಸಿ, ಆಶೀರ್ವಾದ ಪಡೆದರು. ಕೆ. ಪ್ರತಾಪಸಿಂಹ ನಾಯಕ್, ಎಸ್‌ಬಿಐ ಮಹಾಪ್ರಬಂಧಕ ಇಂದು ಶೇಖರ್, ಪರಿಷತ್ ಸದಸ್ಯ ಕೆ. ಹರೀಶ್ ಕುಮಾರ್, ಸ್ವಾತಂತ್ರ ಹೋರಾಟಗಾರ ಪಡಂಗಡಿ ಭೋಜರಾಜ ಹೆಗ್ಡೆ, ಪ್ರೊ| ಎಂ. ರಾಮಚಂದ್ರ, ಬಿಳಿಯೂರು ಧನ್ಯಕುಮಾರ್ ರೈ ಶುಭ ಹಾರೈಸಿದರು. ಜತೆಗೆ ಉಜಿರೆಯ ಎಸ್‌ಡಿಎಂ ಪ್ರಕೃತಿ ಚಿಕಿತ್ಸಾ ಮತ್ತು ಯೋಗ ವಿಜ್ಞಾನ ಕಾಲೇಜಿನಲ್ಲಿ ಕಲಿಯುತ್ತಿರುವ ವಿವಿಧ ರಾಜ್ಯಗಳ ವಿದ್ಯಾರ್ಥಿಗಳು ಡಾ| ಹೆಗ್ಗಡೆ ಅವರಿಗೆ ಕೇಕ್ ನೀಡಿ ಶುಭಾಶಯ ಕೋರಿದರು.
Related Articles
ಸ್ವತ್ಛತಾ ಕಾರ್ಯದಲ್ಲಿ ಡಾ| ಹೆಗ್ಗಡೆ ಅವರ ಅಭಿಮಾನಿಗಳು, ವಿವಿಧ ಕ್ಷೇತ್ರಗಳ ಗಣ್ಯರು, ಜನಪ್ರತಿನಿಧಿಗಳು, ಸಂಘ-ಸಂಸ್ಥೆಯವರು, ಕಾಲೇಜಿನ ವಿದ್ಯಾರ್ಥಿಗಳು, ಗ್ರಾ.ಪಂ. ಸದಸ್ಯರು, ತಾಲೂಕಿನ ಸ್ವತ್ಛತಾ ಸೇನಾನಿಗಳು, ಜನಜಾಗೃತಿ ವೇದಿಕೆ ಸದಸ್ಯರು, ಪ್ರಗತಿ ಬಂಧು ಒಕ್ಕೂಟ ಸದಸ್ಯರು ಸೇರಿ 350ಕ್ಕೂ ಅಧಿಕ ಮಂದಿ ಪಾಲ್ಗೊಂಡಿದ್ದರು. ಒಟ್ಟು 408 ಗೋಣಿಚೀಲಗಳಲ್ಲಿ ಕಸ ಸಂಗ್ರಹವಾಗಿದ್ದು, ಎರಡು ಕಸ ಸಂಗ್ರಹ ವಾಹನಗಳ ಮೂಲಕ ವಿಲೇವಾರಿ ಮಾಡಲಾಯಿತು. ಬೆಳ್ತಂಗಡಿ ಸರಕಾರಿ ಆಸ್ಪತ್ರೆಯವರು 400 ಕೈಚೀಲ (ಗ್ಲೌಸ್)ಗಳನ್ನು ನೀಡಿದ್ದು, ಉಜಿರೆ ರಾಮಚಂದ್ರ ಶೆಟ್ಟಿ ಅವರು ಗೋಣಿಚೀಲಗಳ ವ್ಯವಸ್ಥೆ ಮಾಡಿದ್ದರು.
Advertisement