Advertisement

ಸ್ವಾಮಿಲ ಪದವು: ವಿದ್ಯುತ್‌ ಕಂಬಕ್ಕೆ ಟಿಪ್ಪರ್‌ ಢಿಕ್ಕಿ 

10:48 AM Mar 08, 2017 | |

ಬಜಪೆ: ಇಲ್ಲಿಗೆ ಸಮೀಪದ ಸ್ವಾಮಿಲ ಪದವಿನ ರಾಜ್ಯ ಹೆದ್ದಾರಿ 67ರಲ್ಲಿ ಮಂಗಳವಾರ ಬೆಳಗ್ಗೆ ಟಿಪ್ಪರ್‌ವೊಂದು ಚಾಲಕನ ನಿಯಂತ್ರಣ ತಪ್ಪಿ ವಿದ್ಯುತ್‌ ಕಂಬಕ್ಕೆ ಢಿಕ್ಕಿ ಹೊಡೆದ ಪರಿಣಾಮ ಎರಡು ವಿದ್ಯುತ್‌ ಕಂಬಗಳು ತುಂಡಾಗಿವೆ.

Advertisement

ಟಿಪ್ಪರ್‌ ಜಲ್ಲಿಕಲ್ಲನ್ನು ಹೇರಿಕೊಂಡು ಬಜಪೆ ಕಡೆಗೆ ಸಾಗುತ್ತಿತ್ತು. ಎದುರಿಂದ ಬಂದ ಕಾರೊಂದು ವೇಗವಾಗಿ ಸ್ವಾಮಿಲ ಪದವಿಗೆ ಹೋಗು ರಸ್ತೆಗೆ ತಿರುಗಿಸಿದ ಕಾರಣ ಟಿಪ್ಪರ್‌ ಚಾಲಕ ನಿಯಂತ್ರಣ ತಪ್ಪಿ ವಿದ್ಯುತ್‌ ಕಂಬಕ್ಕೆ ಢಿಕ್ಕಿ ಹೊಡೆಯಿತು.
ಈ ಘಟನೆಯಿಂದಾಗಿ ಎರಡು ವಿದ್ಯುತ್‌ ಕಂಬಗಳು ತುಂಡಾಗಿವೆ ಹಾಗೂ ಟಿಪ್ಪರ್‌ ಲಾರಿಗೂ ಹಾನಿಯಾಗಿದೆ.

ಬಸ್‌ ನಿಲ್ದಾಣದ ಸಮೀಪವಿರುವ ಈ ವಿದ್ಯುತ್‌ ಕಂಬಕ್ಕೆ ಟಿಪ್ಪರ್‌ ಢಿಕ್ಕಿ ಹೊಡೆದಾಗ ಬಸ್ಸಿಗಾಗಿ ಕಾದು ನಿಂತಿದ್ದ ಮಹಿಳೆ ಹಿಂದಕ್ಕೆ ಓಡಿದ ಕಾರಣ ಸಂಭಾವ್ಯ ಅಪಾಯದಿಂದ ಪಾರಾದರು. ಇಲ್ಲಿನ ರಾಜ್ಯ ಹೆದ್ದಾರಿಯೂ ನೇರವಾಗಿದ್ದು, ಹೊಸದಾಗಿ ಡಾಮರು 
ಹಾಕಲಾಗಿದೆ. ಇದರಿಂದಾಗಿ ವಾಹನಗಳು ಅತೀ ವೇಗವಾಗಿ ಸಂಚರಿಸುತ್ತಿದ್ದು,  ಅಪಘಾತಗಳು ಸಂಭವಿಸುತ್ತಿವೆ. ಅಲ್ಲಿ ರಸ್ತೆ ಉಬ್ಬು ನಿರ್ಮಿಸಬೇಕು ಇಲ್ಲವೇ ಬ್ಯಾರಿಕೇಡ್‌ ಅಳವಡಿಸಬೇಕು ಎಂದು ಸ್ಥಳೀಯರು  ಮನವಿ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next