Advertisement

ಜಿಕ್ಸರ್‌ ಇಂಡಿಯಾ ಡಬಲ್‌ ಸೆಂಚುರಿ ಹೊಡೆದ ಸುಝುಕಿ!

11:45 AM Aug 20, 2019 | Sriram |

ದಿನನಿತ್ಯದ ಬಳಕೆಗೆ ಮತ್ತು ರೇಸಿಂಗ್‌ ಎರಡಕ್ಕೂ ಹೊಂದುವಂತಿತ್ತು ಸುಝುಕಿಯ ನೇಕೆಡ್‌ ಸ್ಪೋರ್ಟ್ಸ್ ಬೈಕಾದ ಜಿಕ್ಸರ್‌ 150. ಬಹಳ ಸಮಯದಿಂದ ದ್ವಿಚಕ್ರವಾಹನ ಪ್ರೇಮಿಗಳು ಸುಝುಕಿಯಿಂದ 250 ಸಿಸಿ ರೇಂಜಿನ ಬೈಕನ್ನು ಎದುರು ನೋಡುತ್ತಿದ್ದರು. ಇದೀಗ ಜಿಕ್ಸರ್‌ 250 ಭಾರತದಲ್ಲಿ ಬಿಡುಗಡೆಯಾಗಿದೆ.

Advertisement

ಭಾರತದಲ್ಲಿ ವರ್ಷಗಳ ಹಿಂದೆ ಜಿಕ್ಸರ್‌ 150 ಸಿಸಿ ದ್ವಿಚಕ್ರ ವಾಹನವನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸುವ ಮೂಲಕ ಸುಝುಕಿ ತನ್ನ ಅಧಿಪತ್ಯವನ್ನು ಮರು ಸಂಪಾದಿಸಿತ್ತು. ವಿದೇಶಗಳಲ್ಲಿ ಪ್ರಖ್ಯಾತಿ ಪಡೆದ ಜಿಕ್ಸರ್‌ ರೇಸ್‌ ಬೈಕುಗಳಿಂದ ಪ್ರೇರಣೆ ಪಡೆದು ಭಾರತದ ಮಾರುಕಟ್ಟೆಗೆ ತಕ್ಕಂತೆ ವಿನ್ಯಾಸ ಮತ್ತು ತಂತ್ರಜ್ಞಾನದ ವಿಷಯದಲ್ಲಿ ಮಾರ್ಪಾಡುಗಳನ್ನು ಮಾಡಿಕೊಂಡಿತ್ತು. ನೇಕೆಡ್‌ ಸ್ಪೋರ್ಟ್ಸ್ ಮಾದರಿಯ ಈ ಬೈಕು, ಕಾಲೇಜು ತರುಣರನ್ನು ಮನದಲ್ಲಿರಿಸಿಕೊಂಡು ತಯಾರಾದ ಬೈಕ್‌ ಆಗಿತ್ತು. ದಿನನಿತ್ಯದ ಬಳಕೆಗೆ ಮತ್ತು ರೇಸಿಂಗ್‌ ಎರಡಕ್ಕೂ ಹೊಂದುವಂತಿತ್ತು ಆ ಬೈಕು. ಬಹಳ ಸಮಯದಿಂದ ದ್ವಿಚಕ್ರವಾಹನ ಪ್ರೇಮಿಗಳು ಸುಝುಕಿಯಿಂದ 250 ಸಿಸಿ ರೇಂಜಿನ ಬೈಕನ್ನು ಎದುರು ನೋಡುತ್ತಿದ್ದರು. ಇದೀಗ ಜಿಕ್ಸರ್‌ 150ಯ ಹಿರಿಯ ಸಹೋದರ ಜಿಕ್ಸರ್‌ 250 ಬಿಡುಗಡೆಯಾಗಿದೆ.

ಮಾಡೆಲ್‌ ಮತ್ತು ಬೆಲೆ
ಪ್ಲಾಟಿನಂ ಸಿಲ್ವರ್‌ ಮತ್ತು ಕಪ್ಪು ಬಣ್ಣಗಳ ಆಯ್ಕೆಯನ್ನು ಸಂಸ್ಥೆ ನೀಡುತ್ತಿದೆ. ಎರಡು ಟೈರ್‌ಗಳಲ್ಲೂ ಡಿಸ್ಕ್ ಬ್ರೇಕುಗಳನ್ನು ನೀಡಲಾಗಿದೆ. ಇನ್ನು ಎಬಿಎಸ್‌(ಅÂಂಟಿ ಲಾಕ್‌ ಬ್ರೇಕ್‌ ಸಿಸ್ಟಮ್‌) ಸವಲತ್ತನ್ನು ಒದಗಿಸಲಾಗಿದೆ. ಇದು ಸವಾರರಿಗೆ ಸುರಕ್ಷಿತ ಬ್ರೇಕಿಂಗ್‌ ವ್ಯವಸ್ಥೆಯನ್ನು ಒದಗಿಸುತ್ತದೆ. ಅಂದಹಾಗೆ, ಜಿಕ್ಸರ್‌ 150ಯಲ್ಲಿ ಇದ್ದಂತೆಯೇ 250 ಸಿ.ಸಿ ಯಲ್ಲೂ ಎಸ್‌ಎಫ್ ಮಾಡೆಲ್‌ ಲಭ್ಯವಿದೆ. ಜಿಕ್ಸರ್‌ 250ಯ ಬೆಲೆ 1.60 ಲಕ್ಷ ರು. ನಿಗದಿ ಪಡಿಸಿದ್ದರೆ, 250 ಸಿಸಿಯ ಜಿಕ್ಸರ್‌ ಎಸ್‌ ಎಫ್ ಮಾಡೆಲ್‌ಗೆ 1.70 ಲಕ್ಷ ರು. ನಿಗದಿ ಪಡಿಸಲಾಗಿದೆ. ಅಂದರೆ ಜಿಕ್ಸರ್‌ 150ಗೆ ಹೋಲಿಸಿದರೆ ಜಿಕ್ಸರ್‌ 250ಗೆ, 60,000 ರು. ಹೆಚ್ಚಿನ ಬೆಲೆ ಕಡಬೇಕಾಗುತ್ತದೆ.

ವ್ಯತ್ಯಾಸಗಳೇನು?
ವಿನ್ಯಾಸದ ಬಗ್ಗೆ ಹೇಳುವುದಾದರೆ ಜಿಕ್ಸರ್‌ 250 ಬಹುತೇಕ ಜಿಕ್ಸರ್‌ 150ಅನ್ನೇ ಹೋಲುತ್ತದೆ. ಹೆಚ್ಚಿನ ವ್ಯತ್ಯಾಸ ಕಂಡುಬರುವುದು ಹೆಡ್‌ಲೈಟಿನಲ್ಲಿ. ಯಾವ ಕೋನದಿಂದಲೂ 250ರ ಹೆಡ್‌ಲೈಟ್‌ 150ಅನ್ನು ಹೋಲುವುದಿಲ್ಲ. ಆದುನಿಕ ಬೈಕ್‌ಗಳಲ್ಲಿ ಟ್ರೆಂಡ್‌ ಎನ್ನಿಸಿಕೊಂಡಿರುವ ಟ್ರಾಪೆಝಾಯಿಡ್‌ ಆಕಾರವನ್ನು ಇದು ಹೊಂದಿದೆ. ಕೆ.ಟಿ.ಎಂ ಡ್ನೂಕ್‌ 250 ಮತ್ತು ಯಮಹಾ ಎಫ್ಝೀ25 ಬೈಕುಗಳಿಗೆ ಪ್ರತಿಸ್ಪರ್ಧೆಯನ್ನು ಒಡ್ಡಲಿದೆ ಸುಝುಕಿ ಜಿಕ್ಸರ್‌ 250. ಅಲ್ಲದೆ ಬಜಾಜ್‌ ಡಾಮಿನಾರ್‌ 400 ಬೈಕಿಗೂ ಇದು ಸ್ಪರ್ಧೆ ಒಡ್ಡಲಿದೆ ಎಂದು ಪರಿಣತರು ಅಭಿಪ್ರಾಯ ಪಟ್ಟಿದ್ದಾರೆ.

ಎಕ್ಸ್‌ಟ್ರಾ ಸಲಕರಣೆಗಳು

Advertisement

ಜಿಕ್ಸರ್‌ 250 ಸವಾರರು ತಮ್ಮ ಅಗತ್ಯಕ್ಕೆ ತಕ್ಕಂತೆ ಕೊಳ್ಳಬಹುದಾದ ಎಕ್ಸ್‌ಟ್ರಾ ಅÂಕ್ಸೆಸರಿಗಳನ್ನು ಸಂಸ್ಥೆಯೇ ಕೊಡಮಾಡುತ್ತಿದೆ. (ಇವುಗಳಿಗೆ ಬೆಲೆ ಪ್ರತ್ಯೇಕ.)
1. ಸ್ಯಾಡೆಲ್‌ ಬ್ಯಾಗ್‌- ದೂರ ಪ್ರಯಾಣ ಹೊರಡುವಾಗ ಇದು ಸಹಾಯಕ್ಕೆ ಬರಲಿದೆ.
2. ನಕಲ್‌ ಗಾರ್ಡ್‌- ರೈಡ್‌ ಮಾಡುವಾಗ ಕೈಗೆ ಏಟಾಗದಂತೆ ರಕ್ಷಿಸುವ ಗಾರ್ಡ್‌ ಇದು.
3. ಬಂಪರ್‌ ಬ್ರಾಕೆಟ್‌- ಲೆಗ್‌ ಗಾರ್ಡ್‌ ಎಂದೇ ಹೆಸರಾಗಿರುವ ಈ ಸಲಕರಣೆ, ಸವಾರರ ಕಾಲುಗಳಿಗೆ ರಕ್ಷಣೆ ಒದಗಿಸುತ್ತದೆ
4. ಸ್ಕಿಡ್‌ ಪ್ಲೇಟ್‌- ಎಂಜಿನ್‌ನ ತಳಭಾಗದಲ್ಲಿ ಅಳವಡಿಸಲ್ಪಡುವ ಸ್ಕಿಡ್‌ಪ್ಲೇಟ್‌ ರಸ್ತೆಯ ಕಲ್ಲುಗಳು, ಎತ್ತರದ ಸ್ಪೀಡ್‌ ಬ್ರೇಕರ್‌ಗಳಿಂದ ಎಂಜಿನ್‌ಅನ್ನು ರಕ್ಷಿಸುವುದು
5. ಡಿ.ಸಿ. ಸಾಕೆಟ್‌- ಹ್ಯಾಂಡಲ್‌ಬಾರ್‌ನಲ್ಲಿ ಅಳವಡಿಸಲಾಗುವ ಡಿ.ಸಿ ಸಾಕೆಟ್‌ನಿಂದ ಎಲೆಕ್ಟ್ರಾನಿಕ್‌ ವಸ್ತುಗಳನ್ನು ಚಾರ್ಜ್‌ ಮಾಡಬಹುದಾಗಿದೆ.

38 ಕಿ.ಮೀ. ಮೈಲೇಜ್‌
6 ಸ್ಪೀಡ್‌ ಗೇರ್‌
12 ಲೀಟರ್‌ ಟ್ಯಾಂಕ್‌
ಆಯಿಲ್‌ಕೂಲ್ಡ್‌ ಎಂಜಿನ್‌
ಎಬಿಎಸ್‌ ಸವಲತ್ತು

-ಹವನ

Advertisement

Udayavani is now on Telegram. Click here to join our channel and stay updated with the latest news.

Next