Advertisement

Belagavi ಸಾಂಸ್ಕೃತಿಕ ವೈಭವಕ್ಕೆ ಸಾಕ್ಷಿಯಾದ ಸುವರ್ಣ ವಿಧಾನಸೌಧ

10:56 PM Dec 12, 2023 | Team Udayavani |

ಬೆಳಗಾವಿ: ಒಂದು ವಾರದಿಂದ ಗಡಿ ಜಿಲ್ಲೆ ಬೆಳಗಾವಿಯಲ್ಲಿ ರಾಜಕೀಯ ಸೌಧವಾಗಿ‌ ಮಾರ್ಪಟ್ಟಿದ್ದ ಸುವರ್ಣ ವಿಧಾನಸೌಧ ಮಂಗಳವಾರ ರಾತ್ರಿ ಸಾಂಸ್ಕೃತಿಕ ವೈಭವಕ್ಕೆ ಸಾಕ್ಷಿಯಾಯಿತು. ಇಡೀ ಸುವರ್ಣ ವಿಧಾನ ಸೌಧ ಆವರಣ ವರ್ಣರಂಜಿತವಾಗಿ ಕಂಗೊಳಿಸಿತು.

Advertisement

ಸುವರ್ಣ ಸಂಭ್ರಮಾಚರಣೆ ಹಿನ್ನೆಲೆಯಲ್ಲಿ ಮಂಗಳವಾರ ರಾತ್ರಿ ಸುವರ್ಣ ವಿಧಾನಸೌಧ ಆವರಣದಲ್ಲಿ ಮೂಡಬಿದರೆಯ ಆಳ್ವಾಸ ನುಡಿಸಿರಿಯ ಖ್ಯಾತನಾಮ ಕಲಾವಿದರು ಪ್ರಸ್ತುತ ಪಡಿಸಿದ ಸಾಂಸ್ಕೃತಿಕ ವೈಭವ ಮನಸೂರೆಗೊಂಡಿತು. ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಖ್ಯಾತಿಯ ಕಲಾವಿದರು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ರಂಜಿಸಿದರು.

ದುರ್ಗಾ ನೃತ್ಯ, ನವದುರ್ಗೆ, ಬಂಜಾರಾ ನೃತ್ಯ, ಸ್ಟಿಕ್ ಡ್ಯಾನ್ಸ್, ಮಲ್ಲಕಂಬ, ದಾಂಡಿಯಾ, ಶ್ರೀಲಂಕಾ ಡ್ಯಾನ್ಸ್, ಪುರಲಿಯೋ, ವಂದೇ ಮಾತರಂಗುಜರಾತಿ ನೃತ್ಯ, ಯಕ್ಷಗಾನ, ಡೊಳ್ಳು ಸೇರಿದಂತೆ ಭಾರತೀಯ ಸಂಸ್ಕೃತಿ ಬಿಂಬಿಸುವ ಎಲ್ಲ‌ ರಾಜ್ಯಗಳ‌ ಸಾಂಸ್ಕೃತಿಕ ಕಲರದವ ಮೂಡಿಬಂತು. ಕಲಾವಿದರು ಪ್ರಸ್ತುತ ಪಡಿಸಿದ ನೃತ್ಯಗಳು ರೋಮಾಂಚನಗೊಳಿಸಿದವು.

ರಾಜಕಾರಣಿಗಳು, ಅಧಿಕಾರಿಗಳು, ಪೊಲೀಸರು, ಸಿಬ್ಬಂದಿ ಸಾಂಸ್ಕೃತಿಕ ಕಾರ್ಯಕ್ರಮ ನೋಡಿ ಸಂತಸಪಟ್ಟರು.

Advertisement

Udayavani is now on Telegram. Click here to join our channel and stay updated with the latest news.

Next