Advertisement

ಸುವರ್ಣ ತ್ರಿಭುಜ ಬೋಟ್‌: ದುರಂತಕ್ಕೆ ಮೂರು ವರ್ಷ

12:03 AM Dec 15, 2021 | Team Udayavani |

ಉಡುಪಿ: ಸುವರ್ಣ ತ್ರಿಭುಜ ಬೋಟ್‌ ದುರಂತ ಸಂಭವಿಸಿ 3 ವರ್ಷಗಳೇ ಸಂದರೂ ಘಟನೆ ಹೇಗಾಯಿತು ಎಂಬ ಯಕ್ಷ ಪ್ರಶ್ನೆಯ ಬಗ್ಗೆ ಯಾರೂ ಚಕಾರವೆತ್ತಿಲ್ಲ.

Advertisement

2018ರ ಡಿ. 13ರಂದು ಮಲ್ಪೆ ಕಡಲ ತೀರದಿಂದ ಮೀನುಗಾರಿಕೆಗೆ ಹೊರಟ ಏಳು ಮಂದಿಯ ತಂಡ ಕಾಣ ಸಿಗದೇ ಮರೆಯಾಗಿತ್ತು. ಡಿ. 15ರಂದು ಬೋಟ್‌ ನಾಪತ್ತೆ ಸುದ್ದಿ ಹರಿದಾಡಿತ್ತು.

ಊಹೆಗೆ ತಕ್ಕಂತೆ ಹೇಳಿಕೆ ಚಂದ್ರಶೇಖರ ಕೋಟ್ಯಾನ್‌ ತೊಟ್ಟಂ ಮಲ್ಪೆ ಅವರ ಒಡೆತನದ “ಸುವರ್ಣ ತ್ರಿಭುಜ’ ಬೋಟ್‌ ಆಳ ಸಮುದ್ರದಲ್ಲಿ ಮುಳುಗಿ ಚಂದ್ರ ಶೇಖರ ಕೋಟ್ಯಾನ್‌ ಸಹಿತ ಏಳು ಮಂದಿ ನಾಪತ್ತೆಯಾಗಿದ್ದರು. ಅಂದಿನ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮ್‌ ಮುತುವರ್ಜಿಯಿಂದ ಬೋಟ್‌ ಕಾಣೆಯಾದ ತಾಣದಲ್ಲಿ
ಮುಳುಗು ತಜ್ಞರ ಮೂಲಕ ಶೋಧ ನಡೆಸಿ ಅದು ಮುಳುಗಡೆಯಾಗಿದ್ದು ಹೌದು ಎಂಬುದನ್ನು ಖಚಿತೆ ಮಾಡಿಸಿದರು.

ಆದರೆ ಆ ಬೋಟ್‌ನ ಅನತಿ ದೂರದಲ್ಲಿ ಒಬ್ಬ ವ್ಯಕ್ತಿಯ ಕುರುಹೂ ಪತ್ತೆಯಾಗದೇ ಇದ್ದಾಗ ಅವರವರ ಊಹೆಗೆ ತಕ್ಕಂತೆ ಒಬ್ಬೊಬ್ಬರು ಒಂದೊಂದು ರೀತಿಯ ಹೇಳಿಕೆ ನೀಡತೊಡಗಿದರು.

ಇನ್ನೂ ಯಕ್ಷಪ್ರಶ್ನೆ ಯಾಗಿಯೇ ಉಳಿದ ಈ ದುರಂತ ಕಥೆಗೆ ಅಂದಿನ ಸಮ್ಮಿಶ್ರ ಸರಕಾರ ಹಾಗೂ ಮಾಜಿ
ಮುಖ್ಯಮಂತ್ರಿ ಬಿ.ಎಎಸ್‌. ಯಡಿಯೂರಪ್ಪ ನೇತೃತ್ವದ ಸರಕಾರದಲ್ಲಿ ರಾಜ್ಯ ಸರಕಾರದ ವತಿ ಯಿಂದ ತಕ್ಕಮಟ್ಟಿನ ಸಹಾಯದ ಚೆಕ್‌ ಜೀವನೋಪಾಯಕ್ಕಾಗಿ ನೀಡಿತ್ತು. ಆದರೆ ಇದುವರೆಗೆ ಕೇಂದ್ರದಿಂದ ಯಾವುದೇ ಸಹಾಯ ಬಂದಿಲ್ಲ. ಕೇವಲ ಬೋಟ್‌ ಗುರುತಿಸಿದ್ದು ಬಿಟ್ಟರೆ, ಯಾಕೆ ಅದು ಮುಳುಗಿತು ಎಂಬ ವಿಚಾರ ನಿಗೂಢವಾಗಿಯೇ ಇದೆ.

Advertisement

ಇದನ್ನೂ ಓದಿ:ಖಡಕ್‌ ಟೀ ಆಗದ್ದಕ್ಕೆ ನೆಟ್ಟಿಗರ ಕೋಪ; ಎನ್‌ಆರ್‌ಐ ವೈದ್ಯ ಸಂಜಯ ಗುಪ್ತಾರಿಂದ ಮಕ್ಕಳಿಗೆ ಪಾಠ

ತುರ್ತು ಜಾರಿಯಾಗಲಿ
ನೊಂದ ಕುಟುಂಬಗಳಿಗೆ ಸರಕಾರದ ವತಿಯಿಂದ ಸಹಾಯಧನ, ದೃಢೀಕರಣ ಪತ್ರ ಹಾಗೂ ಇನ್ನಿತರ ಸೌಲಭ್ಯಗಳನ್ನು ತತ್‌ಕ್ಷಣ ಜಾರಿಮಾಡಬೇಕು. ಸುವರ್ಣ ತ್ರಿಭುಜ 1.10 ಕೋ.ರೂ. ಮೌಲ್ಯ ಹೊಂದಿದ್ದು, ವಿಮೆ ಮೂಲಕ 40 ಲ.ರೂ. ಮಾತ್ರ ಲಭಿಸಿದೆ. ಸರಕಾರದಿಂದ ಪರಿಹಾರ ಸಿಕ್ಕಿಲ್ಲ ಎಂದು ಚಂದ್ರಶೇಖರ್‌ ಅವರ ಸಹೋದರರಾದ ಗಣೇಶ್‌ ಕೋಟ್ಯಾನ್‌, ನಿತ್ಯಾನಂದ ಕೋಟ್ಯಾನ್‌ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next