ಮಂಗಳೂರು: ಪಠ್ಯದ ಜತೆಗೆ ಸಂಸ್ಕೃತಿ, ಧರ್ಮ, ಇತಿಹಾಸ ಮತ್ತು ಪ್ರಕೃತಿಯ ಬಗ್ಗೆ ಮಕ್ಕಳಿಗೆ ತಿಳಿಸಿಕೊಡಬೇಕು. ಸತ್‌ಚಿಂತನೆಗಳನ್ನು ಮಕ್ಕಳ ಮನಸ್ಸಿನಲ್ಲಿ ಬಿತ್ತುವುದರಿಂದ ಆರೋಗ್ಯಕರ ಸಮಾಜ ನಿರ್ಮಾಣ ಸಾಧ್ಯ ಎಂದು ಶಾಸಕ ಜೆ.ಆರ್. ಲೋಬೊ ಹೇಳಿದರು.
ಕೊಡಿಯಾಲಬೈಲ್ ಶಾರದಾ ವಿದ್ಯಾಲಯದ ಬೆಳ್ಳಿಹಬ್ಬದ ಅಂಗವಾಗಿ ವಿದ್ಯಾಲಯದ ಪ್ರಾಂಗಣದಲ್ಲಿ ನಡೆದ ಹೊನಲು ಬೆಳಕಿನ ಕ್ರೀಡೋತ್ಸವವನ್ನು ಅವರು ಶನಿವಾರ ಉದ್ಘಾಟಿಸಿ ಮಾತನಾಡಿದರು. ಮನುಷ್ಯನ ಉಳಿವು ಪ್ರಕೃತಿಯನ್ನು ಅವಲಂಬಿಸಿದೆ. ಪ್ರಕೃತಿಯನ್ನು ಉಳಿಸಿ ಬೆಳೆಸುವ ಅರಿವನ್ನು ಮಕ್ಕಳಿಗೆ ನೀಡಬೇಕು. ನಮ್ಮ ಸಂಸ್ಕೃತಿ, ಧರ್ಮವನ್ನು ಪ್ರೀತಿಸುವುದರ ಜತೆಗೆ ಇತರರ ಸಂಸ್ಕೃತಿ, ಧರ್ಮಗಳನ್ನು ಗೌರವಿಸುವುದನ್ನೂ ಮಕ್ಕಳಿಗೆ ಹೇಳಿಕೊಡಬೇಕು. ಇಂತಹ ಉತ್ತಮ ಮಾರ್ಗದರ್ಶನ ದೊರೆತರೆ ಸಮಾಜದಲ್ಲಿ ಸಮಸ್ಯೆಗಳೇ ಉದ್ಭವಿ ಸುವುದಿಲ್ಲ ಎಂದು ಅವರು ಅಭಿಪ್ರಾಯಪಟ್ಟರು.
ಮಂಗಳೂರು ನಗರ ಪೊಲೀಸ್ ಆಯುಕ್ತ ಟಿ. ಆರ್. ಸುರೇಶ್, ಕಟೀಲು ಕ್ಷೇತ್ರದ ಮುಖ್ಯ ಅರ್ಚಕ ಶ್ರೀಹರಿನಾರಾಯಣದಾಸ ಆಸ್ರಣ್ಣ, ಎ. ಜೆ. ಸಮೂಹ ಸಂಸ್ಥೆಯ ಅಧ್ಯಕ್ಷ ಎ. ಜೆ. ಶೆಟ್ಟಿ, ಉಡುಪಿ ಅದಾನಿ ಪವರ್ ಕಾರ್ಪೊರೇಶನ್‌ನ ಕೆ. ಕಿಶೋರ್ ಆಳ್ವ, ಕ್ಯಾಂಪ್ಕೋ ಅಧ್ಯಕ್ಷ ಎಸ್. ಆರ್. ಸತೀಶ್ಚಂದ್ರ, ಡಿಡಿಪಿಐ ವೈ. ಶಿವ ರಾಮಯ್ಯ, ಮಾಜಿ ಸಚಿವ ಬಿ. ನಾಗರಾಜ ಶೆಟ್ಟಿ, ಮಾಜಿ ಶಾಸಕ ರಘುಪತಿ ಭಟ್, ಉದ್ಯಮಿಗಳಾದ ವಿಲಾಸ್ ನಾಯಕ್, ಕೆ. ರಾಮ ಕಾಮತ್, ಬಿ. ರಘುನಾಥ ಸೋಮಯಾಜಿ, ಕೆನರಾ ಹೈಸ್ಕೂಲ್ ಅಸೋಸಿಯೇಶನ್‌ನ ಎಂ. ಪದ್ಮನಾಭ ಪೈ, ವಿದ್ಯಾರತ್ನ ಶಿಕ್ಷಣ ಸಂಸ್ಥೆಯ ಆಡಳಿತ ನಿರ್ದೇಶಕ ರವೀಂದ್ರ ಶೆಟ್ಟಿ ಉಳಿದೊಟ್ಟು, ಭಾರತೀಯ ಕಬಡ್ಡಿ ತಂಡದ ಆಟ ಗಾರರಾದ ಜಗದೀಶ್ ಕುಂಬ್ಳೆ, ಸುಖೇಶ್ ಹೆಗ್ಡೆ, ಎನ್‌ಐಟಿಕೆ ಪ್ರೊಫೆಸರ್ ಎಂ. ಅರುಣ್ ಇಸೂರ್, ಹಿರಿಯ ನ್ಯಾಯವಾದಿ ಮಟ್ಟಾರು ರತ್ನಾಕರ ಹೆಗ್ಡೆ ಗೌರವ ಅತಿಥಿಗಳಾಗಿದ್ದರು.
ಪ್ರಮುಖರಾದ ಸುನಿಲ್ ಸುಬ್ರಹ್ಮಣ್ಯ, ಸೀತಾರಾಮ ಶಾಸ್ತ್ರಿ, ಶಾರದಾ ವಿದ್ಯಾಲಯ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷ ಕೆ. ಎಸ್. ಕಲ್ಲೂರಾಯ, ಕಾರ್ಯದರ್ಶಿ ಎಂ. ಎಸ್. ಶಾಸ್ತ್ರಿ, ಟ್ರಸ್ಟಿಗಳಾದ ಎಸ್. ಪ್ರದೀಪ ಕುಮಾರ ಕಲ್ಕೂರ, ಎಚ್. ಸೀತಾರಾಮ ಆಚಾರ್ಯ ಮೊದಲಾದವರು ಉಪ ಸ್ಥಿತರಿದ್ದರು. ಶಾರದಾ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಪ್ರೊ| ಎಂ. ಬಿ. ಪುರಾಣಿಕ್ ಪ್ರಸ್ತಾವನೆಗೈದರು.