ಉಳ್ಳಾಲ : ಇಲ್ಲಿನ ಕೆ.ಸಿ.ರೋಡ್ ನ ಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ನಲ್ಲಿ ಇಬ್ಬರ ಭದ್ರತಾ ಸಿಬಂದಿಗಳು ಸಹಿತ ಮೂವರು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಸೋಮವಾರ ರಾತ್ರಿ ನಡೆದಿದೆ.
ಭದ್ರತಾ ಸಿಬಂದಿಗಳೊಂದಿಗೆ ಮಲಗಲು ಬಂದ ಇನ್ನೋರ್ವ ವ್ಯಕ್ತಿಯೂ ಮೃತ ಪಟ್ಟಿದ್ದು , ಮಂಗಳವಾರ ಬೆಳಗ್ಗೆ ಮೂವರು ಮಲಗಿದ್ದಲ್ಲೇ ಶವವಾಗಿ ಪತ್ತೆಯಾಗಿದ್ದಾರೆ.
ಮೃತರನ್ನು ಸೋಮನಾಥ್, ಉಮೇಶ್ ಮತ್ತು ಸಂತೋಷ್ ಎಂದು ತಿಳಿದು ಬಂದಿದೆ.
ನಿನ್ನೆ ರಾತ್ರಿ ಸಿಡಿಲು ಮಳೆಗೆ ವಿದ್ಯುತ್ ಕೈಕೊಟ್ಟ ವೇಳೆ ಜನರೇಟರ್ ಆನ್ ಮಾಡಿ ಮಲಗಿದ ಕಾರಣ ಅದರಿಂದ ಹೊರ ಬಂದ ವಿಷ ಗಾಳಿ (ಕಾರ್ಬನ್ ಮೊನೋಕ್ಸೈಡ್ )ಯಿಂದ ಸಾವನ್ನಪ್ಪಿದ್ದಾರೆ ಎಂದು ಶಂಕಿಸಲಾಗಿದ್ದು, ಸ್ಥಳಕ್ಕಾಗಮಿಸಿರುವ ಉಳ್ಳಾಲ ಠಾಣಾ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನುಪರಿಶೀಲಿಸುತ್ತಿದ್ದಾರೆ.
ಬ್ಯಾಂಕ್‌ನಲ್ಲಿ ದರೋಡೆ ನಡೆದ ಬಳಿಕ ರಾತ್ರಿ ಪಾಳಿಯಲ್ಲಿ ಇಬ್ಬರು ಕಾವಲುಗಾರರನ್ನು ನೇಮಿಸಿಕೊಳ್ಳಲಾಗಿತ್ತು.
ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ.