Advertisement

“ಯುಎಸ್‌ ಓಪನ್‌ ಆಡುವುದು ಅನುಮಾನ’

10:29 PM Jun 17, 2020 | Sriram |

ನ್ಯೂಯಾರ್ಕ್‌: ಕೋವಿಡ್‌-19 ಹತೋಟಿಗೆ ಬಾರದ ಕಾರಣ ನ್ಯೂಯಾರ್ಕ್‌ನಲ್ಲಿ ನಡೆಯಲಿರುವ ಯುಎಸ್‌ ಓಪನ್‌ ಟೆನಿಸ್‌ ಪಂದ್ಯಾವಳಿಯಲ್ಲಿ ತಾನು ಭಾಗವಹಿಸುವ ಯಾವುದೇ ಸಾಧ್ಯತೆ ಇಲ್ಲ ಎಂಬುದಾಗಿ ರೊಮೇನಿಯಾದ ಸ್ಟಾರ್‌ ಆಟಗಾರ್ತಿ ಸಿಮೋನಾ ಹಾಲೆಪ್‌ ಹೇಳಿದ್ದಾರೆ.

Advertisement

ಸಂಘಟಕರೂ ಎಷ್ಟೇ ಮುನ್ನೆಚ್ಚರಿಕೆ ವಹಿಸಬಹುದು, ವೀಕ್ಷಕರನ್ನೂ ನಿರ್ಬಂಧಿಸಬಹುದು, ಆದರೆ ಈಗಿನ ಸ್ಥಿತಿಯಲ್ಲಿ ನ್ಯೂಯಾರ್ಕ್‌ ಕೂಟದಲ್ಲಿ ಪಾಲ್ಗೊಳ್ಳುವುದು ಬಹಳ ರಿಸ್ಕ್, ಹೀಗಾಗಿ ತಾನು ಇಲ್ಲಿ ಆಡುವ ಯಾವುದೇ ಸಾಧ್ಯತೆ ಇಲ್ಲ ಎಂಬುದಾಗಿ ಸಿಮೋನಾ ಹಾಲೆಪ್‌ ಹೇಳಿದ್ದಾರೆ. ಅವರ ಕೋಚ್‌ ಡ್ಯಾರೆನ್‌ ಕಾಹಿಲ್‌ ಕೂಡ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇದರೊಂದಿಗೆ ಯುಎಸ್‌+ ಓಪನ್‌ ಪಂದ್ಯಾವಳಿಯಿಂದ ದೂರ ಉಳಿಯುವ ಸ್ಟಾರ್‌ ಆಟಗಾರರ ಸಂಖ್ಯೆ ಹೆಚ್ಚುತ್ತಲೇ ಇದೆ. ಈಗಾಗಲೇ ನೊವಾಕ್‌ ಜೊಕೋವಿಕ್‌, ಆ್ಯಶ್ಲಿ ಬಾರ್ಟಿ, ರಫೆಲ್‌ ನಡಾಲ್‌ ನ್ಯೂಯಾರ್ಕ್‌ನಲ್ಲಿ ಆಡದಿರುವ ನಿರ್ಧಾರವನ್ನು ಪ್ರಕಟಿಸಿದ್ದಾರೆ. ರೋಜರ್‌ ಫೆಡರರ್‌ ಶಸ್ತ್ರಚಿಕಿತ್ಸೆಗೆ ಒಳಗಾಗುವ ಕಾರಣ ಇಲ್ಲಿ ಆಡುವುದಿಲ್ಲ ಎಂದಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next