Advertisement
ನಿವೃತ್ತಿಗೆ ಕೇವಲ ಮೂರು ತಾಸು ಬಾಕಿ ಇರುವಾಗ ಪ್ರಾಮಾಣಿಕ ಅಧಿಕಾರಿಯೊಬ್ಬರನ್ನು ಅಮಾನತುಗೊಳಿಸಿರುವುದು ಅಧಿಕಾರಿಗಳ ವಲಯದಲ್ಲಿ ಹುಬ್ಬೇರಿಸುವಂತೆ ಮಾಡಿದೆ. ಉನ್ನತ ಅಧಿಕಾರಿಗಳ ಮಟ್ಟದಲ್ಲಿ ತೀವ್ರ ಚರ್ಚೆಗೂ ಗ್ರಾಸವಾಗಿದೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳ ಕಚೇರಿಯು ಪ್ರಕರಣದ ಬಗ್ಗೆ ಸಮಗ್ರ ವರದಿ ಸಲ್ಲಿಸುವಂತೆ ಸೂಚಿಸಿದ್ದು, ಬುಧವಾರ ಇದನ್ನು ಪರಿಶೀಲನೆ ನಡೆಸಲು ಉದ್ದೇಶಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಕೊನೆಯ ಗಳಿಗೆಯಲ್ಲಿ ಅಮಾನತು ಮಾಡಿದ್ದು ಯಾಕೆ? ಅಮಾನತಿಗೆ ನೀಡಿದ ಪ್ರಕರಣ ಯಾವುದು? ಅದರ ಗಂಭೀರತೆ ಎಷ್ಟಿದೆ ಎನ್ನುವುದುಸೇರಿದಂತೆ ಹಲವು ಅಂಶಗಳನ್ನು ವರದಿಯಲ್ಲಿ ಕೇಳಲಾಗಿದೆ. ಅದರಂತೆ ಸಮಗ್ರ ವರದಿ ಸಿದ್ಧ ಪಡಿಸಿ, ಮುಖ್ಯಮಂತ್ರಿಗಳ ಕಚೇರಿಗೆ ಬುಧವಾರ ನೀಡಲಾಗುತ್ತಿದೆ ಎಂದು ಹಿರಿಯ ಅಧಿಕಾರಿಯೊಬ್ಬರು “ಉದಯವಾಣಿ’ಗೆ ತಿಳಿಸಿದ್ದಾರೆ. Advertisement
ನಿವೃತ್ತಿಗೆ 3 ತಾಸು ಮುನ್ನ ಅಮಾನತು: ವರದಿಗೆ ಸೂಚನೆ
12:30 AM Mar 13, 2019 | |
Advertisement
Udayavani is now on Telegram. Click here to join our channel and stay updated with the latest news.