Advertisement

ಉಗ್ರ ನಿಗ್ರಹದಲ್ಲಿ ಪಾಕ್‌ ವಿಫ‌ಲ; ಸೇನಾ ನೆರವು ಅಮಾನತು: ಟ್ರಂಪ್‌

11:27 AM Nov 20, 2018 | udayavani editorial |

ವಾಷಿಂಗ್ಟನ್‌ : ‘ಪಾಕಿಸ್ಥಾನ ತನ್ನ ನೆಲದಲ್ಲಿ ಉಗ್ರರು ಹೊಂದಿರುವ ಸುರಕ್ಷಿತ ತಾಣಗಳನ್ನು  ನಾಶ ಮಾಡುವಲ್ಲಿ ಯಾವುದೇ ನಿರ್ಣಾಯಕ ಕ್ರಮಗಳನ್ನು ತೆಗೆದುಕೊಂಡಿಲ್ಲ: ಅಮೆರಿಕದ ನಿರೀಕ್ಷೆಯ ಮಟ್ಟದಲ್ಲಿ ಉಗ್ರ ನಿಗ್ರಹ ಮಾಡುವಲ್ಲಿ ಪಾಕಿಸ್ಥಾನ ವಿಫ‌ಲವಾಗಿದೆ; ಹಾಗಾಗಿ ನಾವು ಪಾಕಿಸ್ಥಾನಕ್ಕೆ ನೀಡುತ್ತಿದ್ದ ಸೇನಾ ನೆರವನ್ನು ಅಮಾನತುಗೊಳಿಸಿದ್ದೇವೆ’ ಎಂದು ಟ್ರಂಪ್‌ ಆಡಳಿತೆ ಹೇಳಿದೆ.

Advertisement

ಉಗ್ರ ನಿಗ್ರಹಕ್ಕಾಗಿ ಅಮೆರಿಕದ ನಿರೀಕ್ಷೆಯ ಮಟ್ಟದಲ್ಲಿ ಪಾಕಿಸ್ಥಾನ ಏನನ್ನೂ ಮಾಡಿಲ್ಲ ಎಂದು ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹೇಳಿರುವುದನ್ನು ಅನುಸರಿಸಿ ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ಸಂಬಂಧಗಳಲ್ಲಿ ಸುಧಾರಣೆ ಕಂಡು ಬಂದಿಲ್ಲ. ಟ್ರಂಪ್‌ ಮತ್ತು ಪಾಕ್‌ ನೂತನ ಪ್ರಧಾನಿ ಇಮ್ರಾನ್‌ ಖಾನ್‌ ನಡುವೆ ಮುಖಾಮುಖೀ ಭೇಟಿಗೆ ಇದುವೇ ದೊಡ್ಡ ಅಡೆತಡೆಯಾಗಿದೆ ಎಂದು ವರದಿಗಳು ತಿಳಿಸಿವೆ. 

ಅಮೆರಿಕದ ಕ್ರಮಕ್ಕೆ ಪ್ರತಿಯಾಗಿ ಪಾಕ್‌ ಪ್ರಧಾನಿ ಇಮ್ರಾನ್‌ ಖಾನ್‌ ಅವರು, “ಉಗ್ರ ನಿಗ್ರಹಕ್ಕಾಗಿ ನಮ್ಮಿಂದ ಏನು ಸಾಧ್ಯವೋ ಅದನ್ನು ಮಾಡಿದ್ದೇವೆ. ಆದರೆ ಇನ್ನು ಮುಂದೆ ನಾವು ನಮಗೆ ಮತ್ತು ನಮ್ಮ ದೇಶದ ಜನರಿಗೆ ಏನು ಬೇಕೋ ಅದನ್ನು ಮಾಡುವೆವು ಹೊರತು ಅಮೆರಿಕಕ್ಕೆ ಏನು ಬೇಕೋ ಅದನ್ನಲ್ಲ’ ಎಂದು ಖಂಡತುಂಡವಾಗಿ  ಹೇಳಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next