Advertisement
ಸದ್ಯ ನಗರದಲ್ಲಿ ಕೋವಿಡ್ ಸೋಂಕಿತರ ಪ್ರಾಥಮಿಕ, ದ್ವಿತೀಯ ಸಂಪರ್ಕಿತರನ್ನು ನಗರದ ಹೋಟೆಲ್‌ಗಳಲ್ಲಿ ಕ್ವಾರಂಟೈನ್ ಮಾಡಲಾಗುತ್ತಿದ್ದು, ಸುದೀರ್ಘ ಲಾಕ್‌ಡೌನ್‌ನಿಂದ ತತ್ತರಿಸಿದ್ದ ಹೋಟೆಲ್‌ಗಳಿಗೆ ತಕ್ಕಮಟ್ಟಿಗೆ ಆದಾಯ ಹರಿದುಬರುತ್ತಿದೆ. ಸಾಮಾನ್ಯವಾಗಿ ತಾರಾ ಹೋಟೆಲ್‌ಗಳಲ್ಲಿ ದಿನಕ್ಕೆ 3-4 ಸಾವಿರ ರೂ. ಬಾಡಿಗೆ ಇರುತ್ತದೆ. ಆದರೆ, ಒಂದೂವರೆ ತಿಂಗಳಿಂದ ಗ್ರಾಹಕರಿಲ್ಲದೆ ಐಷಾರಾಮಿ ಹೋಟೆಲ್‌ಗಳು ಕಂಗಾಲಾಗಿದ್ದವು. ಈಗ ನಿತ್ಯ 1,200 ರೂ. ದರದಲ್ಲಿ “ಕ್ವಾರಂಟೈನ್ ಅತಿಥಿ’ಗಳು ಆಗಮಿಸುತ್ತಿದ್ದಾರೆ. ಅಂದಾಜು 7 ಸಾವಿರಕ್ಕೂ ಹೆಚ್ಚು ಜನ ಬೆಂಗಳೂರು ಹಾಗೂ ಬೆಂಗಳೂರು ಹೊರವಲಯದ ಫೈವ್‌ಸ್ಟಾರ್, ತ್ರಿಸ್ಟಾರ್ ಸೇರಿದಂತೆ ಅವರ ಆರ್ಥಿಕ ಅನುಕೂಲಕ್ಕೆ ಅನುಗುಣವಾಗಿ ಹೋಟೆಲ್‌ಗಳನ್ನು ಆಯ್ಕೆಮಾಡಿಕೊಳ್ಳಲು ಸರ್ಕಾರ ಅನುಮತಿ ನೀಡಿದೆ. ಇದರಿಂದ ಕೆಲವು (ವಸತಿ ವ್ಯವಸ್ಥೆ ಇರುವ) ಹೋಟೆಲ್, ಲಾಡ್ಜ್ಗಳ ಮಾಲಿಕರಿಗೆ ಮರು ಭೂಮಿಯಲ್ಲಿ ಒಯಾಸಿಸ್ ಕಂಡಂತಾಗಿದೆ.
ರೂಮ್‌ಗಳಲ್ಲಿ ಬಳಸಿದ ಬೆಡ್‌ಶೀಟ್, ಊಟಕ್ಕೆ ಬಳಸಿದ ವಸ್ತು ಹಾಗೂ ರೂಮ್ ಸ್ವಚ್ಛತೆ ಸವಾಲಿನ ಕೆಲಸ. ಅಲ್ಲದೆ, ನಿರ್ದಿಷ್ಟ ಹೋಟೆಲ್‌ಗಳನ್ನು ಕ್ವಾರಂಟೈನ್‌ಗೆ ಬಳಸಲಾಗಿತ್ತು ಎಂದು ತಿಳಿದು ಬಂದರೆ ಮುಂದಿನ ದಿನಗಳಲ್ಲಿ ಈ ಹೋಟೆಲ್‌ಗೆ ಗ್ರಾಹಕರು ಬರುವ ಸಾಧ್ಯತೆ ತೀರಾ ಕಡಿಮೆ. ಅಲ್ಲದೆ, ಇತ್ತೀಚೆಗೆ ಶಿವಾಜಿನಗರದ ಹೋಟೆಲ್‌ವೊಂದರಲ್ಲಿ ಕ್ವಾರಂಟೈನ್‌ಗೆ ಒಪ್ಪಿಗೆ ನೀಡಿದ್ದ ಹೋಟೆಲ್‌ನಲ್ಲಿದ್ದ ಒಬ್ಬ ಸಹಾಯಕ ಸಿಬ್ಬಂದಿಗೂ ಕೋವಿಡ್ ಸೋಂಕು ತಗುಲಿದ್ದು, ಸಹಜವಾಗಿಯೇ ಆತಂಕ ಹೆಚ್ಚಾಗಿದೆ. ನಗರದ ಹೊರವಲಯಗಳಲ್ಲಿನ ಕೆಲವು ಪಿಜಿಗಳನ್ನು ಅವಶ್ಯಕತೆಗೆ ಅನುಗುಣವಾಗಿ ಪಾಲಿಕೆ ಕೋವಿಡ್ ಸೋಂಕಿತರ ಸಂಪರ್ಕದಲ್ಲಿದ್ದವರನ್ನು ಕ್ವಾರಂಟೈನ್ ವ್ಯವಸ್ಥೆಗೆ ಬಳಸಿಕೊಂಡಿದೆ. ಸಣ್ಣ ಹೋಟೆಲ್‌ಗಳಿಗೆ ತೀವ್ರ ಆರ್ಥಿಕ ಸಂಕಷ್ಟ: ಲಾಕ್‌ಡೌನ್‌ನಿಂದ ಸಣ್ಣ ಹೋಟೆಲ್‌ಗಳು ತೀವ್ರ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿವೆ. ಈ ಸಂಬಂಧ “ಉದಯವಾಣಿ’ಯೊಂದಿಗೆ ಮಾತನಾಡಿದ ರಾಜ್ಯ ಹೋಟಲ್ ಉದ್ಯಮಿಗಳ ಒಕ್ಕೂಟದ ಅಧ್ಯಕ್ಷ ಚಂದ್ರಶೇಖರ್ ಹೆಬ್ಟಾರ್, ನಗರದಲ್ಲಿ ಅಂದಾಜು 5 ಸಾವಿರ ಹಾಗೂ ರಾಜ್ಯದಲ್ಲಿ 30 ಸಾವಿರಕ್ಕೂ ಹೆಚ್ಚು ಹೋಟೆಲ್‌ಗಳಿವೆ. ಲಾಕ್‌ಡೌನ್‌ನಿಂದ ಈಗಾಗಲೇ ಸಂಕಷ್ಟ ಅನುಭವಿಸಿದ್ದು, ಈಗ ಕಾರ್ಮಿಕರ ಕೊರತೆ ಸೃಷ್ಟಿಯಾಗಿದೆ.
Related Articles
ಬೇಡವಾದರೆ ಹೋಟೆಲ್‌ಗಳನ್ನು ಬುಕ್ ಮಾಡಿಕೊಳ್ಳಬಹುದಾಗಿದೆ.
ಬಿ.ಎಚ್.ಅನಿಲ್‌ಕುಮಾರ್, ಬಿಬಿಎಂಪಿ ಆಯುಕ್ತ
Advertisement
– ಹಿತೇಶ್ ವೈ