ಶಿವಮೊಗ್ಗ: ಉದ್ಯಮಿಯೊಬ್ಬರಿಗೆ ಬೆದರಿಕೆ ಹಾಕಿ ಹಣ ವಸೂಲಿ ಮಾಡಿದ ಪ್ರಕರಣದಲ್ಲಿ ಭಟ್ಕಳದ ಶಂಕಿತ ಉಗ್ರ ಸದ್ದಾಂ ಹುಸೇನ್ ಪತ್ನಿ ಶಾಹಿರಾ ಎಂಬಾಕೆಯನ್ನು ನಗರದ ಪೊಲೀಸರು ಬಂಧಿಸಿದ್ದಾರೆ.
ಶಿವಮೊಗ್ಗದ ಉದ್ಯಮಿ ಶರತ್ ಕುಮಾರ್ ಎಂಬುವರಿಗೆ ಜುಲೈನಲ್ಲಿ ಇಂಟರ್‌ನೆಟ್ ಕರೆ ಮಾಡಿದಾತ, ನಾನು ಹೆಬ್ಬೆಟ್ಟು ಮಂಜ, ನನಗೆ 5 ಲಕ್ಷ ಹಣ ಕೊಡಬೇಕು’ ಎಂದು ತಿಳಿಸಿದ್ದಾನೆ. ಹಣ ಇಲ್ಲ ಎಂದಾಗ ನಿನ್ನ ನಂಬರ್ ಸಿಕ್ಕಿದೆ ಎಂದರೆ ನಿನ್ನ ಬಳಿ ಬರುವುದು ಕಷ್ಟವೇನಲ್ಲ.
ಮನೆ ಹತ್ತಿರ ಹುಡುಗರನ್ನು ಕಳಿಸುತ್ತೇನೆ. ನಾನು ಏನೆಂದು ನಿನಗೆ ಸ್ಯಾಂಪಲ್ ತೋರಿಸುತ್ತೇನೆ’ ಎಂದು ಬೆದರಿಕೆ ಹಾಕಿದ ಹಿನ್ನೆಲೆ ಭಯದಿಂದ ಅವರು ಕೊಟ್ಟ ಅಕೌಂಟ್ ನಂಬರ್‌ಗೆ 50 ಸಾವಿರ ಹಣ ಜಮಾ ಮಾಡಿದ್ದರು.
ನಂತರ ಕೂಡ ಬೆದರಿಕೆ ಕರೆಗಳು ಮುಂದುವರೆದಿದ್ದವು. ದಿಕ್ಕು ತೋಚದೆ ಸೈಬರ್ ಠಾಣೆಗೆ ದೂರು ದಾಖಲಿಸಿದ್ದರು. ತನಿಖೆ ಕೈಗೊಂಡ ಪೊಲೀಸರಿಗೆ ಅದೊಂದು ಮಹಿಳೆಯ ಅಕೌಂಟ್ ಎಂಬುದು ತಿಳಿದುಬಂದಿದೆ.
ಹೆಚ್ಚಿನ ವಿಚಾರಣೆ ಮಾಡಿದಾಗ ಆಕೆ ಬೆಂಗಳೂರು ಸೊ#àಟ ಪ್ರಕರಣದಲ್ಲಿ ಬಂ ಧಿಯಾಗಿ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಸದ್ದಾಂ ಹುಸೇನ್ ಪತ್ನಿ ಎಂದು ತಿಳಿದುಬಂದಿದೆ. ಶಿವಮೊಗ್ಗ ಪೊಲೀಸರು ಆಕೆಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಸದ್ದಾಂ ಹುಸೇನ್ ಜೈಲಿನಲ್ಲಿ ಇದ್ದರೂ ಕರೆ ಬಂದಿದ್ದು ಹೇಗೆ ಎಂಬ ಬಗ್ಗೆಯೂ ತನಿಖೆ ನಡೆಯುತ್ತಿದೆ.
ಅಲ್ಲದೇ ಆತ ಹೆಬ್ಬೆಟ್ಟು ಮಂಜ ಹೆಸರು ಬಳಸಿದ್ದು ಯಾಕೆ ಎಂದು ಸಹ ತನಿಖೆ ನಡೆಯುತ್ತಿದೆ. ಮೂಲಗಳ ಪ್ರಕಾರ ಆ ಕರೆಗಳು ಜೈಲಿನಿಂದಲೇ ಬಂದಿವೆ ಎನ್ನಲಾಗಿದೆ. ತುಮಕೂರಿನ ರೌಡಿಶೀಟರ್ ನೆರವಿನಿಂದ ಜೈಲಿನಿಂದಲೇ ಕರೆ ಮಾಡಿ ಪತ್ನಿ ಅಕೌಂಟ್ ಹಣ ಹಾಕಿಸಿದ್ದಾನೆ. ಬೆಂಗಳೂರಿನಿಂದ ಕರೆಗಳು ಬಂದಿರುವ ಹಿಂದೆ ಬೃಹತ್ ಜಾಲವಿದ್ದು ಅದನ್ನು ಪೊಲೀಸರು ಕೂಲಂಕಷವಾಗಿ ತನಿಖೆ ನಡೆಸುತ್ತಿದ್ದಾರೆ.