Advertisement

ಜಮ್ಮು-ಕಾಶ್ಮೀರ; ತ್ರಾಲ್ ಪ್ರದೇಶದ ಇಬ್ಬರನ್ನು ಅಪಹರಿಸಿ ಹತ್ಯೆಗೈದ ಉಗ್ರರು

09:44 AM Aug 28, 2019 | Team Udayavani |

ಜಮ್ಮು-ಕಾಶ್ಮೀರ: ಶಂಕಿತ ಉಗ್ರರು ಇಬ್ಬರನ್ನು ಅಪಹರಿಸಿ ಹತ್ಯೆಗೈದಿರುವ ಘಟನೆ ಜಮ್ಮು-ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ನಡೆದಿದೆ ಎಂದು ವರದಿ ತಿಳಿಸಿದೆ.

Advertisement

ಆಗಸ್ಟ್ 19-20ರಂದು ಅಪರಿಚಿತ ಉಗ್ರರು ಇಬ್ಬರನ್ನು ಅಪಹರಿಸಿದ್ದರು. ಸೋಮವಾರ ಒಬ್ಬ ವ್ಯಕ್ತಿಯ ಶವ ಅರಣ್ಯಪ್ರದೇಶದಲ್ಲಿ ಪತ್ತೆಯಾಗಿರುವುದಾಗಿ ವರದಿ ಹೇಳಿದೆ.

ಉತ್ತರ ತ್ರಾಲ್  ಸಮೀಪದ ಮನ್ಸಾರ್ ಭಾಯ್ಕ್ ನ ಪರ್ವತಶ್ರೇಣಿ ತಪ್ಪಲಲ್ಲಿ ಈ ಘಟನೆ ನಡೆದಿದೆ. ಲಾಚಿಟಾಪ್ ನ ಬೇಹಾಕ್ ನ ನಿವಾಸಿ ಹಾಗೂ ಮನ್ಸಾರ್ ಬೇಹಾಕ್ ನ ನಿವಾಸಿಯನ್ನು ನಾಗ್ ಬೆಹ್ರಾನ್ ಅರಣ್ಯದಲ್ಲಿ ಅಪಹರಿಸಿಕೊಂಡು ಹೋಗಿರುವುದಾಗಿ ವರದಿ ವಿವರಿಸಿದೆ. ಶೋಧ ಕಾರ್ಯಾಚರಣೆಯ ಬಳಿಕ ಮತ್ತೊಬ್ಬ ವ್ಯಕ್ತಿಯ ಶವ ಪತ್ತೆಯಾಗಿರುವುದಾಗಿ  ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ 370ನೇ ವಿಧಿಯನ್ನು ಕೇಂದ್ರ ಸರಕಾರ ರದ್ದುಗೊಳಿಸಿದ ನಂತರ ನಡೆದ ಕಣಿವೆ ರಾಜ್ಯದಲ್ಲಿ ನಡೆದ ಉಗ್ರರ ಮೊದಲ ದಾಳಿಯಾಗಿದೆ ಎಂದು ವರದಿ ತಿಳಿಸಿದೆ.

ಮತ್ತೊಂದು ಘಟನೆಯಲ್ಲಿ ಡೇಲಿನಾ ಚೌಕ್ ಪ್ರದೇಶದಲ್ಲಿ ಜಮ್ಮು-ಕಾಶ್ಮೀರ ಪೊಲೀಸ್ ಹಾಗೂ ಸೇನೆಯ ಜಂಟಿ ಚೆಕ್ ಪೋಸ್ಟ್ ನಲ್ಲಿ ತಪಾಸಣೆ ನಡೆಸುತ್ತಿದ್ದ ವೇಳೆ ಟ್ರಕ್ ಮೇಲೆ ಗುಂಡಿನ ದಾಳಿ ನಡೆಸಿದ್ದ ಉಗ್ರನೊಬ್ಬನನ್ನು ಬಂಧಿಸಲಾಗಿದೆ. ಮತ್ತೊಬ್ಬ ಉಗ್ರ ಈ ಪ್ರದೇಶದೊಳಗೆ ನುಸುಳಿದ್ದು, ಆತನಿಗಾಗಿ ಕೂಂಬಿಂಗ್ ಕಾರ್ಯಾಚರಣೆ ಮುಂದುವರಿದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next