ಮುಂಬಯಿ: ಇಲ್ಲಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಶಂಕಿತ ಐಸಿಸ್ ಉಗ್ರನೊಬ್ಬನನ್ನು ಉತ್ತರಪ್ರದೇಶ ಎಟಿಎಸ್ ಪೊಲೀಸರು ಶನಿವಾರ ರಾತ್ರಿ ಬಂಧಿಸಿದ್ದಾರೆ.
ಅಬು ಝೈದ್ ಎಂಬಾತ ಬಂಧಿತನಾಗಿದ್ದು, ಸೌದಿ ಅರೇಬಿಯಾದಿಂದ ಬಂದಿಳಿಯುತ್ತಿದ್ದಂತೆ ವಶಕ್ಕೆ ಪಡೆಯಲಾಗಿದೆ. ಲಕ್ನೋಗೆ ಕರೆದೊಯ್ಯಲಾಗಿದ್ದು, ನ್ಯಾಯಾಲಯದ ಮುಂಜೆ ಹಾಜರುಪಡಿಸಲಾಗುತ್ತಿದೆ.
ರಿಯಾದ್‌ನಿಂದ ಸಾಮಾಜಿಕ ಜಾಲತಾಣಗಳ ಮೂಲಕ ಯುವಕರನ್ನು ಐಸಿಸ್ ಉಗ್ರ ಸಂಘಟನೆಯತ್ತ ಸೆಳೆಯುವ ಕೆಲಸ ಅಬು ಮಾಡುತ್ತಿದ್ದ ಎನ್ನಲಾಗಿದೆ.
ಈ ಹಿಂದೆ ಬಂಧಿತರಾಗಿದ್ದ ಕೆಲ ಶಂಕಿತ ಉಗ್ರರೊಂದಿಗೆ ಸಂಪರ್ಕ ಹೊಂದಿರುವುದು ಕಂಡು ಬಂದ ಹಿನ್ನಲೆಯಲ್ಲಿ ವಶಕ್ಕೆ ಪಡೆಯಲಾಗಿದೆ ಎಂದು ಎಟಿಎಸ್ ಮೂಲಗಳು ತಿಳಿಸಿವೆ.
ಗುರುವಾರವಷ್ಟೇ ಕೇರಳ ಪೊಲೀಸರು ಪಿಎಫ್ಐ ಸಂಘಟನೆಯ 6 ಸದಸ್ಯರು ಸಿರಿಯಾದಲ್ಲಿ ಐಸಿಸ್‌ಗೆ ಸೇರ್ಪಡೆಯಾಗಿರುವುದನ್ನು ಧೃಡಪಡಿಸಿದ್ದರು.
ಸದ್ಯ 100 ಕ್ಕೂ ಹೆಚ್ಚು ಭಾರತೀಯ ಯುವಕರು ಸಿರಿಯಾ ಮತ್ತು ಇರಾಕ್‌ನಲ್ಲಿ ಐಸಿಸ್‌ನಲ್ಲಿ ಸಕ್ರಿಯವಾಗಿದ್ದಾರೆ ಎಂದು ಹೇಳಲಾಗಿದೆ.