Advertisement

ಹಕ್ಕಿ ಢಿಕ್ಕಿ: ಕೋಲ್ಕತ ನಿಲ್ದಾಣಕ್ಕೆ ಮರಳಿದ ಇಂಡಿಗೋ ವಿಮಾನ

07:26 PM Sep 21, 2017 | Team Udayavani |

ಕೋಲ್ಕತ : ಕೋಲ್ಕತದಿಂದ ಬ್ಯಾಂಕಾಕ್‌ಗೆ ಹಾರುತ್ತಿದ್ದ ಇಂಡಿಗೋ ವಿಮಾನ ಟೇಕಾಫ್ ಆದ ಒಂದು ತಾಸಿನ ಬಳಿಕ ಎನ್‌ಎಸ್‌ಸಿಬಿಐ ವಿಮಾನ ನಿಲ್ದಾಣಕ್ಕೆ ಮರಳಿದ ಘಟನೆ ಇಂದು ನಡೆದಿದೆ. ವಿಮಾನವು ಗಗನಕ್ಕೇರುವ ಸಂದರ್ಭದಲ್ಲಿ  ವಿಮಾನಕ್ಕೆ ಪಕ್ಷಿಯೊಂದು ಢಿಕ್ಕಿಯಾಗಿರುವುದನ್ನು ಪೈಲಂಟ್‌ ಶಂಕಿಸಿದ್ದೇ ವಿಮಾನವನ್ನು ಮರಳ ನಿಲ್ದಾಣಕ್ಕೆ ತರಲು ಕಾರಣವಾಯಿತು.

Advertisement

6ಇ 0075 ಹಾರಾಟ ಸಂಖ್ಯೆಯ ಇಂಡಿಗೋ ವಿಮಾನ ಇಂದು ಗುರುವಾರ ಬೆಳಗ್ಗೆ 10.58ಕ್ಕೆ ಕೋಲ್ಕತದಿಂದ ಬ್ಯಾಂಕಾಕ್‌ಗೆ ಹೋಗಲು ಆಗಸವನ್ನೇರಿತ್ತು. 10.59ರ ಹೊತ್ತಿಗೆ ವಿಮಾನಕ್ಕೆ ಹಕ್ಕಿ ಢಿಕ್ಕಿಯಾಗಿರುವುದನ್ನು ಪೈಲಟ್‌ ಶಂಕಿಸಿದ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ಮರಳಿ ಕೋಲ್ಕತ ವಿಮಾನ ನಿಲ್ದಾಣಕ್ಕೆ ಬಂದ ವಿಮಾನವು 11.59ರ ಹೊತ್ತಿಗೆ  ಸುರಕ್ಷಿತವಾಗಿ ಇಳಿಯಿತು. ವಿಮಾನಕ್ಕೆ ಯಾವುದೇ ಹಾನಿ ಉಂಟಾಗಿಲ್ಲ ಎಂದು ಪೈಲಟ್‌ ಹೇಳಿದ್ದು ವಿಮಾನ ಇಳಿದೊಡನೆಯೇ ರನ್‌ ವೇ ತಪಾಸಣೆ ಮಾಡಲಾಗಿ ಚಿಕ್ಕದೊಂದು ಹಕ್ಕಿ ಬಿದ್ದಿರುವುದು ಪತ್ತೆಯಾಯಿತು ಎಂದು ಅಧಿಕಾರಿ ಹೇಳಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next