Advertisement

ಸುಷ್ಮಾ ಪಾರ್ಥೀವ ಶರೀರದ ಮುಂದೆ ಭಾವುಕರಾದ ಪ್ರಧಾನಿ ನರೇಂದ್ರ ಮೋದಿ

09:10 AM Aug 08, 2019 | Nagendra Trasi |

ನವದೆಹಲಿ:ಕೇಂದ್ರದ ಮಾಜಿ ವಿದೇಶಾಂಗ ಸಚಿವೆ, ಬಿಜೆಪಿ ಹಿರಿಯ ನಾಯಕಿ ಸುಷ್ಮಾ ಸ್ವರಾಜ್ ಅವರು ಮಂಗಳವಾರ ರಾತ್ರಿ ನಿಧನ ಹೊಂದಿದ್ದು, ಬುಧವಾರ ಬೆಳಗ್ಗೆ ಪ್ರಧಾನಿ ನರೇಂದ್ರ ಮೋದಿ ಸುಷ್ಮಾ ಸ್ವರಾಜ್ ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆದಿದ್ದು, ಈ ವೇಳೆ ಪ್ರಧಾನಿ ಭಾವುಕರಾಗಿ ಗದ್ಗದಿತರಾದರು.

Advertisement

ಇಂದು ಮಧ್ಯಾಹ್ನ ಸಕಲ ಸರಕಾರಿ ಗೌರವಗಳೊಂದಿಗೆ ಸುಷ್ಮಾ ಸ್ವರಾಜ್ ಅಂತ್ಯಕ್ರಿಯೆ ನೆರವೇರಲಿದೆ ಎಂದು ವರದಿ ತಿಳಿಸಿದೆ. ರಾಷ್ಟ್ರಪತಿ ರಾಮನಾಥ ಕೋವಿಂದ್ , ಹಿರಿಯ ಮುಖಂಡ ಎಲ್.ಕೆ.ಅಡ್ವಾಣಿ, ಬಾಬಾ ರಾಮದೇವ್, ಮುಖ್ತಾರ್ ಅಬ್ಬಾಸ್ ನಖ್ವಿ ರಾಜನಾಥ ಸಿಂಗ್, ಅಮಿತ್ ಶಾ ಸೇರಿದಂತೆ ಗಣ್ಯಾತೀಗಣ್ಯರು ದೆಹಲಿಯ ನಿವಾಸದಲ್ಲಿ ಇರಿಸಿದ್ದ ಸುಷ್ಮಾ ಸ್ವರಾಜ್ ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆದರು.

ಮಂಗಳವಾರ ರಾತ್ರಿ ತೀವ್ರ ಹೃದಯಾಘಾತಕ್ಕೆ ತುತ್ತಾದ ಅವರನ್ನು ಏಮ್ಸ್ ಆಸ್ಪತ್ರೆಗೆ ಸೇರಿಸಲಾಯಿತು. ಆದರೆ ರಾತ್ರಿ 11ರ ವೇಳೆ ಅವರ ನಿಧನದ ಸುದ್ದಿ ಮಾಧ್ಯಮಗಳಲ್ಲಿ ಬರಲಾರಂಭಿಸಿದ್ದು, ರಾತ್ರಿ 11.10ರ ಸುಮಾರಿಗೆ ಅವರ ಸಾವಿನ ಸುದ್ದಿ ಅಧಿಕೃತವಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next