Advertisement
ಅಂತರ್‌ಶಾಲಾ ಪ್ರತಿಭಾ ಸ್ಪರ್ಧೆ ಯಲ್ಲಿ ಶ್ರೀಮತಿ ಸುಶೀಲಾ ಸೀತಾರಾಮ ಶೆಟ್ಟಿ ಸ್ಮಾರಕ ಪ್ರಶಸ್ತಿಯನ್ನು ಡೊಂಬಿವಲಿ ಕರ್ನಾಟಕ ಸಂಘ ಸಂಚಾಲಿತ ಮಂಜುನಾಥ ವಿದ್ಯಾಲಯ ಮುಡಿಗೇರಿಸಿಕೊಂಡರೆ, ದ್ವಿತೀಯ ಪ್ರಶಸ್ತಿ ಯನ್ನು ಬಿಲ್ಲವರ ಅಸೋಸಿ ಯೇಶನ್ ಸಂಚಾಲಿತ ಗುರು ನಾರಾಯಣ ರಾತ್ರಿ ಶಾಲೆ ಸಾಂತಾಕ್ರೂಜ್ ತನ್ನದಾಗಿಸಿಕೊಂಡಿದೆ.
Related Articles
Advertisement
ರಸಪ್ರಶ್ನೆ ಸ್ಪರ್ಧೆಯಲ್ಲಿ ಚೆಂಬೂರು ಕರ್ನಾಟಕ ಶಾಲೆಯ ಅಭಿಷೇಕ್ ಮತ್ತು ಸೋನಾಲಿ ತಂಡ ಪ್ರಥಮ, ವಿಪಿಎಂ ಶಾಲೆಯ ಪ್ರೀತಿ ಮತ್ತು ಮನು ತಂಡ ದ್ವಿತೀಯ ಹಾಗೂ ಮಂಜುನಾಥ ವಿದ್ಯಾಲಯದ ಧನುಶ್ ಮತ್ತು ಅನುಷಾ ತಂಡ ತೃತೀಯ ಬಹುಮಾನಕ್ಕೆ ಭಾಜನರಾದರು. ಹರೀಶ್ ಶೆಟ್ಟಿ ಮೆಮೋರಿಯಲ್ ಶೀಲ್ಡ್‌ನ್ನುಮಂಜುನಾಥ ವಿದ್ಯಾಲಯ ತನ್ನದಾಗಿಸಿಕೊಂಡಿತು.
ಅಂತಿಮವಾಗಿ ಶ್ರೀಮತಿ ಸುಶೀಲಾ ಎಂ. ಶೆಟ್ಟಿ ಸ್ಮಾರಕ ಸಮಗ್ರ ಪ್ರಶಸ್ತಿಯನ್ನು ಮಂಜುನಾಥ ವಿದ್ಯಾಲಯ ಡೊಂಬಿವಲಿ ಪಡೆದರೆ, ಗುರುನಾರಾಯಣ ರಾತ್ರಿಶಾಲೆ ದ್ವಿತೀಯ ಪ್ರಶಸ್ತಿಗೆ ಭಾಜನವಾಯಿತು. ಪ್ರತಿಭಾ ಸ್ಪರ್ಧೆಯ ತೀರ್ಪುಗಾರರಾಗಿ ಶಾರದಾ ವಿಜಾಪೂರೆ, ಹೇಮಾ ಹೆಗಡೆ, ಚಂದ್ರಾ ಎನ್. ನಾಯ್ಕ ಅವರು ಸಹಕರಿಸಿದರು. ವಿಜೇತ ತಂಡಗಳಿಗೆ ಗಣ್ಯರು ಪ್ರಶಸ್ತಿಯನ್ನು ಪ್ರದಾನಿಸಿ ಶುಭಹಾರೈಸಿದರು.
ಉದ್ಯಮಿ, ಸಮಾಜ ಸೇವಕ ನಲ್ಯಗುತ್ತು ಪ್ರಕಾಶ್ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಹರೀಶ್ ಎಸ್. ಪೂಜಾರಿ, ಸಂಘದ ಅಧ್ಯಕ್ಷ ರಮೇಶ್ ಎ. ಶೆಟ್ಟಿ, ಯಂಗ್‌ಮೆನ್ಸ್ ರಾತ್ರಿಶಾಲೆ ಹಾಗೂ ಜನತಾ ಶಿಕ್ಷಣ ಸಂಸ್ಥೆಯ ಮಾಜಿ ಕಾರ್ಯದರ್ಶಿ, ನಿವೃತ್ತ ಶಿಕ್ಷಕ ಸುಂದರ ಮೊಲಿ, ಗೌರವ ಪ್ರಧಾನ ಕಾರ್ಯದರ್ಶಿ ಬಾಬು ಕೆ. ಮೊಗವೀರ, ಕೋಶಾಧಿಕಾರಿ ಚಂದ್ರ ಎನ್. ನಾಯ್ಕ, ಸಂಘಟನ ಕಾರ್ಯದರ್ಶಿ ಸಂತೋಷ್ ಪಿ. ಶೆಟ್ಟಿ ಉಪಸ್ಥಿತರಿದ್ದರು. ಸಂಘಟನಾ ಜತೆ ಕಾರ್ಯದರ್ಶಿ ಸುರೇಂದ್ರ ಆರ್. ನಾಯ್ಕ ಮತ್ತು ಕಾರ್ಯಕಾರಿ ಸಮಿತಿಯ ಸದಸ್ಯ ಸಂತೋಷ್ ಬಿ. ಪುತ್ರನ್ ಅವರು ಉಪಸ್ಥಿತರಿದ್ದರು.
ತಾರಾನಾಥ ಎಸ್. ಅಮೀನ್, ರಾಜು ಆರ್. ಸುವರ್ಣ, ಉಮೇಶ್ ಡಿ. ಸುವರ್ಣ, ಸನತ್ ಕುಮಾರ್ ಜೈನ್, ಸದಾಶಿವ ಶ್ರೀಯಾನ್, ಎಲ್. ಆರ್. ಮೂಲ್ಯ, ಉಮೇಶ್ ಡಿ. ಸುವರ್ಣ, ಆನಂದ ಕೆ. ಪೂಜಾರಿ, ಸುಕುಮಾರ್ ಎನ್. ಶೆಟ್ಟಿ, ಜಯಕರ ಟಿ. ಶೆಟ್ಟಿ ಪಡುಕುಡೂರು, ರಮೇಶ್ ಎ. ಶೆಟ್ಟಿ, ರಾಜು ಆರ್. ಸುವರ್ಣ, ಸಂದೀಪ್ ಕೋಟ್ಯಾನ್ ಅವರು ಸಹಕರಿಸಿದರು.
ವಸಂತ ಎನ್. ಸುವರ್ಣ ಅವರು ಕಾರ್ಯಕ್ರಮ ನಿರ್ವಹಿಸಿದರು. ಸಂಘದ ಗೌರವ ಪ್ರಧಾನ ಕಾರ್ಯದರ್ಶಿ ಬಾಬು ಕೆ. ಮೊಗವೀರ ವಂದಿಸಿದರು.