ನವದೆಹಲಿ: ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ವಿಖ್ಯಾತ ಕುಸ್ತಿಪಟು ಸುಶೀಲ್ ಕುಮಾರ್, ಜಾಮೀನಿಗಾಗಿ ಮನವಿ ಸಲ್ಲಿಸಿದ್ದಾರೆ.
ಹೆಚ್ಚುವರಿ ಸೆಷನ್ಸ್ ನ್ಯಾಯಾಲಯದಲ್ಲಿ ಮನವಿ ಮಾಡಿರುವ ಸುಶೀಲ್, ಉದಯೋನ್ಮುಖ ಕುಸ್ತಿಪಟು ಸಾಗರ್ ಧಂಕರ್ ಮರಣವನ್ನಿಪ್ಪಿರುವುದು ದುರದೃಷ್ಟಕರ. ಆದರೆ ಈ ಪ್ರಕರಣವನ್ನು ಅತಿಯಾಗಿ ವಿಜೃಂಭಿಸಲಾಗಿದೆ, ತನ್ನನ್ನು ಬಲಿ ಪಶುವಾಗಿಸಲು ಇದನ್ನು ಬಳಸಿಕೊಳ್ಳಲಾಗಿದೆ ಎಂದು ಹೇಳಿದ್ದಾರೆ. ಆದರೆ ಅವರ ಮನವಿಯನ್ನು ದೂರುದಾರ ಸೋನು ವಿರೋಧಿಸಿದ್ದಾರೆ.
ಸುಶೀಲ್‌ರನ್ನು ಜಾಮೀನಿನ ಮೇಲೆ ಹೊರತರ ಬಾರದು. ಈ ಕೊಲೆ ಪ್ರಕರಣದಲ್ಲಿ ಹಲವು ಕಿಡಿಗೇಡಿಗಳು ಇನ್ನೂ ಬಂಧನಕ್ಕೊಳಗಾಗಿಲ್ಲ. ಒಂದು ವೇಳೆ ಸುಶೀಲ್ ಹೊರಹೋದರೆ ಸಾಕ್ಷಿಗಳ ಮೇಲೆ ಪ್ರಭಾವ ಬೀರುವ ಸಾಧ್ಯತೆಯಿದೆ ಎಂದು ವಾದಿಸಿದ್ದಾರೆ.
ಇದನ್ನೂ ಓದಿ: ಬಿಜೆಪಿ ಇಂದು ಗೋಡ್ಸೆಯ ವಕ್ತಾರರಂತೆ ವರ್ತಿಸುತ್ತಿದೆ: ದಿನೇಶ್ ಗುಂಡೂರಾವ್
ಈ ವರ್ಷ ಮೇನಲ್ಲಿ ಸುಶೀಲ್ ಮತ್ತವರ ಸಂಗಡಿಗರು; ದೆಹಲಿಯ ಛತ್ರಸಾಲ ಮೈದಾನದಲ್ಲಿ ಸಾಗರ್ ಧಂಕರ್ ಮೇಲೆ ಮಾಡಿ ಅವರ ಸಾವಿಗೆ ಕಾರಣವಾಗಿದ್ದಾರೆ ಎಂದು ಆರೋಪಿಸಲಾಗಿದೆ. ಇದೇ ಹಿನ್ನೆಲೆಯಲ್ಲಿ ಸುಶೀಲ್ ಕುಮಾರ್ ಜೈಲು ಪಾಲಾಗಿದ್ದಾರೆ