Advertisement

“ಜಿಎಸ್‌ಟಿ ತಾಂತ್ರಿಕ ಅಡಚಣೆಗೆ ಇನ್ಫೋಸಿಸ್‌ ಕಾರಣವಲ್ಲ’

12:13 PM Sep 17, 2017 | Team Udayavani |

ಬೆಂಗಳೂರು: “ಜಿಎಸ್‌ಟಿ ರಿಟರ್ನ್ಸ್ ಸಲ್ಲಿಕೆಗೆ ಸಂಬಂಧಿಸಿದ ಬಹುತೇಕ ತಾಂತ್ರಿಕ ಅಡಚಣೆಗಳು ಅಕ್ಟೋಬರ್‌ 30ರೊಳಗೆ ಬಗೆಹರಿಯಲಿದೆ’ ಎಂದು ಜಿಎಸ್‌ಟಿ ಅನುಷ್ಠಾನ ಕುರಿತ ಸಚಿವರ ಸಮಿತಿ ಅಧ್ಯಕ್ಷರೂ ಆಗಿರುವ ಬಿಹಾರ ಉಪ ಮುಖ್ಯಮಂತ್ರಿ ಸುಶೀಲ್‌ ಮೋದಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Advertisement

ಶನಿವಾರ ವಿಧಾನಸೌಧದಲ್ಲಿ ಜಿಎಸ್‌ಟಿಎನ್‌ ಸಾಫ್ಟ್ವೇರ್‌ ಅಭಿವೃದಿಟಛಿಪಡಿಸಿ ನಿರ್ವಹಣೆ ಮಾಡುತ್ತಿರುವ ಇನ್ಫೋಸಿಸ್‌ ಸಂಸ್ಥೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ನಂತರ ಮಾತನಾಡಿದ ಅವರು, ಜುಲೈ 1ರಿಂದ ಜಿಎಸ್‌ಟಿ ಜಾರಿಯಾದ ನಂತರ ಎರಡೂವರೆ ತಿಂಗಳಲ್ಲಿ ಸಾಕಷ್ಟು ತಾಂತ್ರಿಕ ಅಡಚಣೆ ನಿವಾರಿಸಲಾಗಿದೆ.

ಆದರೂ ಒಂದಷ್ಟು ಸಮಸ್ಯೆ ಇರುವುದು ನಿಜ ಎಂದು ಒಪ್ಪಿಕೊಂಡರು. ಇನ್ಫೋಸಿಸ್‌ ಸಂಸ್ಥೆ ಜಿಎಸ್‌ಟಿ ಸಾಫ್ಟ್ವೇರ್‌ ನಿರ್ವಹಣೆಯಲ್ಲಿ ಉತ್ತಮ ಕೆಲಸ ಮಾಡುತ್ತಿದೆ. ಎಲ್ಲ ರೀತಿಯ ಪ್ರಯತ್ನ ಮಾಡುತ್ತಿದೆ ಎಂದು ಮೋದಿ ಶ್ಲಾ ಸಿದರು.

ಜಿಎಸ್‌ಟಿ ರಿಟನ್ಸ್‌ ಸಲ್ಲಿಸಲು ಕೊನೆಯ ದಿನದವರೆಗೂ ಸುಮ್ಮನಿದ್ದು ಒಮ್ಮಿಂದೊಮ್ಮೆಲೇ ಗುಡುವು ಮುಗಿಯುವ ಕಡೆಯ ನಾಲ್ಕೈದು ದಿನಗಳಲ್ಲಿ ಸಲ್ಲಿಸಲು ವ್ಯಾಪಾರಸ್ಥರು ಮುಗಿಬೀಳುವುದರಿಂದ ಲೋಡ್‌ ಹೆಚ್ಚಾಗಿ ಸಮಸ್ಯೆಗಳು ಉದ್ಭವಿಸುತ್ತಿವೆ. ದಯವಿಟ್ಟು ಕೊನೆಯ ದಿನದವರೆಗೂ ಕಾಯದೆ ಶೀಘ್ರ ರಿಟರ್ನ್ ಸಲ್ಲಿಸಬೇಕೆಂದು ವ್ಯಾಪಾರಸ್ಥರು, ಉದ್ಯಮಿಗಳಲ್ಲಿ ಅವರು ಮನವಿ ಮಾಡಿಕೊಂಡರು.

ಯಾವುದೇ ಒಂದು ವ್ಯವಸ್ಥೆ ಜಾರಿಯಾದ ನಂತರ ಸರಿದಾರಿಗೆ ಬರಬೇಕಾದರೆ ಸಮಯ ಬೇಕಾಗುತ್ತದೆ. ಜಿಎಸ್‌ಟಿ ವಿಚಾರದಲ್ಲಿ ಎಲ್ಲವೂ ಶೇ.100ಕ್ಕೆ 100ರಷ್ಟು ತಾಂತ್ರಿಕ ಅಡಚಣೆ ಬಗೆಹರಿಸಲಾಗಿದೆ ಎಂದು ನಾವು ಹೇಳುತ್ತಿಲ್ಲ. ಆದರೆ, ಸಮಸ್ಯೆ ನಿವಾರಣೆಯ ಪ್ರಾಮಾಣಿಕ ಪ್ರಯತ್ನವಂತೂ ಆಗುತ್ತಿದೆ. ಅ.30ರೊಳಗೆ ಬಹುತೇಕ ಅಡಚಣೆಗಳು ನಿವಾರಣೆಯಾಗಲಿವೆ. ಇನ್ಫೋಸಿಸ್‌ ಸಹ ಈ ಕುರಿತು ಆಶ್ವಾಸನೆ ನೀಡಿದೆ ಎಂದರು.

Advertisement

ಉಪ ಸಮಿತಿಯು ಪ್ರತಿ 15 ದಿನಗಳಿಗೊಮ್ಮೆ ಸಭೆ ಸೇರಿ ತಾಂತ್ರಿಕ ಅಡಚಣೆಗಳ ಬಗ್ಗೆ ಪರಿಶೀಲಿಸಲಿದೆ. ವ್ಯಾಪಾರಸ್ಥರಿಂದ ವ್ಯಕ್ತವಾಗುವ ಅಭಿಪ್ರಾಯ, ಮಾರುಕಟ್ಟೆಯಲ್ಲಿನ ವಾಸ್ತವ ಸ್ಥಿತಿ, ಗ್ರಾಹಕರ ಸ್ಪಂದನೆ ಎಲ್ಲವನ್ನೂ ಅಧ್ಯಯನ ನಡೆಸಿ ಸೂಕ್ತ ಪರಿಹಾರ ಕಂಡುಕೊಳ್ಳಲಿದೆ ಎಂದು ತಿಳಿಸಿದರು.

ಜಿಎಸ್‌ಟಿ ಜಾರಿಯಾದ ನಂತರ 62.25 ಲಕ್ಷ ವ್ಯಾಪಾರಸ್ಥರು ಹಳೇ ವ್ಯವಸ್ಥೆಯಿಂದ ಜಿಎಸ್‌ಟಿಗೆ ವರ್ಗಾವಣೆಗೊಂಡಿದ್ದಾರೆ. 23.18 ಲಕ್ಷ ವ್ಯಾಪಾರಸ್ಥರು ಹೊಸದಾಗಿ ನೋಂದಣಿ ಮಾಡಿಕೊಂಡಿದ್ದಾರೆ. 85 ಲಕ್ಷದಷ್ಟು ಜಿಎಸ್‌ಟಿ ನೆಟ್‌ವರ್ಕ್‌ಗೆ ಬಂದಂತಾಗಿದೆ ಎಂದು ವಿವರಿಸಿದರು.

ಗಡುವು
ವಿಸ್ತರಿಸುವುದಿಲ್ಲ

ಕಂದಾಯ ಕಾರ್ಯದರ್ಶಿ ಹಸುಖ್‌ ಆಧಿಯಾ ಮಾತನಾಡಿ, ಜುಲೈ ವಹಿವಾಟಿಗೆ ಸಂಬಂಧಿಸಿದಂತೆ ರಿಟರ್ನ್ ಮತ್ತು ತೆರಿಗೆ
ಸಲ್ಲಿಕೆಗೆ ನೀಡಲಾಗಿರುವ ಅ.10ರ ಗುಡುವು ಮತ್ತೆ ಯಾವುದೇ ಕಾರಣಕ್ಕೂ ವಿಸ್ತರಿಸಲಾಗುವುದಿಲ್ಲ. ಆ ನಂತರ ತಿಂಗಳುಗಳಿಗೂ ನಿಗದಿತ ಕಾಲಮಿತಿಯಲ್ಲೇ ಸಲ್ಲಿಸಬೇಕಾಗುತ್ತದೆ. ಗುಡುವು ವಿಸ್ತರಿಸುವ ನಿರೀಕ್ಷೆ ಬೇಡ ಎಂದು ಹೇಳಿದರು. ಜುಲೈ ವಹಿವಾಟಿಗೆ ಸಂಬಂಧಿಸಿದಂತೆ 47 ಲಕ್ಷ ಡೀಲರ್‌ಗಳು 3 ಬಿ ರಿಟರ್ನ್ಸ್ ಸಲ್ಲಿಸಿದ್ದಾರೆ. ಕಡೆಯ ದಿನಕ್ಕಾಗಿ ಕಾಯುತ್ತಿರುವುದರಿಂದ ಸಮಸ್ಯೆ ಉಂಟಾಗಲಿದೆ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next