ನವದೆಹಲಿ:ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವು ಹೇಗೆ ಸಂಭವಿಸಿತ್ತು? ಸಾವಿನ ಹಿಂದಿನ ನಿಜವಾದ ಕಾರಣ ಏನು ಎಂಬುದನ್ನು ತಿಳಿಯುವ ಕುತೂಹಲ ಹೆಚ್ಚಾಗತೊಡಗಿದ್ದು, ಇದಕ್ಕೆ ಕಾರಣವಾಗಿದ್ದು ಏಮ್ಸ್ ತಂಡ ಸಿಬಿಐಗೆ ನೀಡಿರುವ ವರದಿ!
ಸೋಮವಾರ ಏಮ್ಸ್ ನ ವಿಧಿವಿಜ್ಞಾನ ತಂಡ, ಸಿಬಿಐ ಅಧಿಕಾರಿಗಳು ಹಾಗೂ ಕೇಂದ್ರ ವಿಧಿವಿಜ್ಞಾನ ಪ್ರಯೋಗಾಲಯ(ಸಿಎಫ್ ಎಸ್ ಎಲ್)ದ ತಜ್ಞರು ಎರಡು ಗಂಟೆಗಳ ಕಾಲ ಮಾತುಕತೆ ನಡೆಸಿದ್ದರು. ಏಮ್ಸ್ ವೈದ್ಯರು ಸಿಬಿಐಗೆ ಹಸ್ತಾಂತರಿಸಿರುವ ವಿಧಿವಿಜ್ಞಾನ ವರದಿಯ ಎಕ್ಸ್ ಕ್ಲೂಸಿವ್ ಮಾಹಿತಿ ಜೀ ಸುದ್ದಿ ನ್ಯೂಸ್ ಗೆ ಲಭ್ಯವಾಗಿರುವುದಾಗಿ ತಿಳಿಸಿದೆ.
ವಿಧಿವಿಜ್ಞಾನ ವರದಿಯ ಪ್ರಕಾರ, ದಿವಂಗತ ನಟ ಸುಶಾಂತ್ ಸಿಂಗ್ ರಜಪೂತ್ ಕರುಳಿನಲ್ಲಿ ಯಾವುದೇ ವಿಷದ ಅಂಶ ಪತ್ತೆಯಾಗಿಲ್ಲ. ಸಿಬಿಐ ತನಿಖೆ ಕೂಡಾ ಅಂತಿಮ ಹಂತದಲ್ಲಿದೆ. ಏಮ್ಸ್ ನ ವಿಧಿವಿಜ್ಞಾನ ಇಲಾಖೆ ಮತ್ತು ಸಿಎಫ್ ಎಸ್ ಎಲ್ ನ ಫಲಿತಾಂಶ ಕೂಡಾ ಒಂದೆಯಾಗಿದೆ. ಒಂದು ವೇಳೆ ಅಗತ್ಯವಿದ್ದರೆ ಸುಶಾಂತ್ ಕುಟುಂಬದ ಸದಸ್ಯರನ್ನು ಸಿಬಿಐ ತನಿಖೆಗೆ ಒಳಪಡಿಸಬಹುದು ಎಂದು ವರದಿ ವಿವರಿಸಿದೆ.
ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ
ಸುಶಾಂತ್ ಸಿಂಗ್ ಜತೆ ವಾಸವಾಗಿದ್ದವರು ತನಿಖೆಯ ವೇಳೆ ಅಧಿಕಾರಿಗಳಿಗೆ ಕೆಲವು ಅವಶ್ಯಕವಾದ ಮಾಹಿತಿಯನ್ನು ನೀಡಿದ್ದರು. ಎಫ್ ಐಆರ್ ನಲ್ಲಿ ಹೆಸರಿಸಲಾಗಿರುವ ಯಾರೊಬ್ಬರಿಗೂ ಸಿಬಿಐ ಈವರೆಗೂ ಕ್ಲೀನ್ ಚಿಟ್ ನೀಡಿಲ್ಲ. ಕೂಪರ್ ಆಸ್ಪತ್ರೆಯ ವೈದ್ಯರುಗಳಿಗೂ ಕೂಡಾ ಸಿಬಿಐ ಕ್ಲೀನ್ ಚಿಟ್ ನೀಡಿಲ್ಲ.
ಇದನ್ನೂ ಓದಿ:ಶಾಲೆ ತೆರೆಯದ ಕಾರಣ ಬಾಲ್ಯ ವಿವಾಹ, ಬಾಲ ಕಾರ್ಮಿಕರ ಸಂಖ್ಯೆ ಹೆಚ್ಚುತ್ತಿದೆ: ಸುರೇಶ್ ಕುಮಾರ್