Advertisement
ಸೆಮಿಫೈನಲ್‌ನಲ್ಲಿ ಸೂರ್ಯಕುಮಾರ್ ಪಾತ್ರ ನಿರ್ಣಾಯಕವಾಗಲಿದೆ ಎಂದೂ ಸೇರಿಸಿದರು. “ಸೂರ್ಯಕುಮಾರ್ ಯಾದವ್ ಅವರ ಪ್ರತಿಯೊಂದು ಇನ್ನಿಂಗ್ಸ್ ಕೂಡ ಅಮೋಘ, ಅದ್ಭುತ. ಅವರು ಹೇಗೆ ಬೇಕಾದರೂ ಹಾಗೆ, ಯಾವ ಶೈಲಿಯಲ್ಲಿ ಬೇಕಾದರೂ ಚೆಂಡನ್ನು ಬಡಿದಟ್ಟುತ್ತಿದ್ದಾರೆ. ಜಿಂಬಾಬ್ವೆ ವಿರುದ್ಧ ವಿಕೆಟ್ ಕೀಪರ್‌ನ ಎಡಕ್ಕೆ ಬಂದು ಬಾರಿಸಿದ ಆ ಒಂದು ಸಿಕ್ಸರ್ ಅತ್ಯಂತ ಮನಮೋಹಕವಾಗಿತ್ತು.
Related Articles
Advertisement
ರಾಹುಲ್ ಫಾರ್ಮ್ ನಿರ್ಣಾಯಕ“ನಾವೀಗ ಇಬ್ಬರು ಬ್ಯಾಟರ್ ಫಾರ್ಮ್ನ ಉತ್ತುಂಗದಲ್ಲಿರುವುದನ್ನು ಕಾಣುತ್ತಿದ್ದೇವೆ-ವಿರಾಟ್ ಕೊಹ್ಲಿ ಮತ್ತು ಸೂರ್ಯಕುಮಾರ್ ಯಾದವ್. ಇವರೊಂದಿಗೆ ಕೆ.ಎಲ್. ರಾಹುಲ್ ಕೂಡ ಮತ್ತೊಂದು ಅರ್ಧ ಶತಕ ಬಾರಿಸಿದ್ದು ಖುಷಿ ಕೊಡುವ ಸಂಗತಿ. ಅಕಸ್ಮಾತ್ ಸೂರ್ಯ ಸಿಡಿಯದೇ ಹೋದರೆ ಭಾರತಕ್ಕೆ ದೊಡ್ಡ ಮೊತ್ತ ಗಳಿಸಲಾಗದು. ಈ ಕಾರಣಕ್ಕಾಗಿ ಭಾರತಕ್ಕೆ ರಾಹುಲ್ ಫಾರ್ಮ್ ಕೂಡ ಬಹಳ ಮುಖ್ಯ’ ಎಂಬುದಾಗಿ ಗಾವಸ್ಕರ್ ಹೇಳಿದರು. ನಾಯಕ ರೋಹಿತ್ ಶರ್ಮ ಅವರ ಬ್ಯಾಟಿಂಗ್ ವೈಫಲ್ಯದತ್ತಲೂ ಸುನೀಲ್ ಗಾವಸ್ಕರ್ ಬೆಟ್ಟು ಮಾಡಿದರು. “ರೋಹಿತ್ ಮುಂದಿನೆರಡು ಪಂದ್ಯಗಳಿಗೆ ತಮ್ಮ ರನ್ನುಗಳನ್ನು ಸಂಗ್ರಹಿಸಿ ಇರಿಸಿದ್ದಾರೆಂದು ಭಾವಿಸೋಣ’ ಎಂದರು.