ಚನ್ನರಾಯಪಟ್ಟಣ: ತಾಲೂಕಿನ ಹಿರೀಸಾವೆ ಹೋಬಳಿದಿಡಗ-ಕಬ್ಬಳಿ,ದಿಂಡಗೂರು-ಗೂಡೆಹೊಸ ಹಳ್ಳಿ ವ್ಯಾಪ್ತಿಯ ಕೆರೆಗಳಿಗೆ ನೀರು ತುಂಬಿಸುವ ಯೋಜನಾ ವರದಿ ತಯಾರಿಸಲು ಸರ್ವೆ ಕಾರ್ಯಕ್ಕೆ ಶಾಸಕ ಸಿ.ಎನ್.ಬಾಲಕೃಷ್ಣ ಚಾಲನೆ ನೀಡಿದರು.
ಈ ವೇಳೆ ಅವರು ಮಾತನಾಡಿ, ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯಿಂದ ಸರ್ವೆ ಕಾರ್ಯ ನಡೆಸಲಾಗುತ್ತಿದೆ. ತಾಲೂಕಿನ ಬಾಗೂರು ಹೋಬಳಿಪಾಪನಘಟ್ಟ ಗ್ರಾಮದ ನಾಕನಕೆರೆ ಬಳಿ ದಿಡಗ ಹಾಗೂ ಕಬ್ಬಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ 22 ಕೆರೆಗಳಿಗೆ ನೀರು ತುಂಬಿಸುವ ದೃಷ್ಟಿಯಿದ ಈ ಏತನೀರಾವರಿ ಯೋಜನೆಗೆ ಪ್ರಾಮುಖ್ಯತೆ ನೀಡಲಾಗುತ್ತಿದೆ ಎಂದು ಹೇಳಿದರು.
ಹಸಿರು ನಿಶಾನೆ ತೋರಲಿ: ಈಗಾಗಲೇತಾಲೂಕಿನಲ್ಲಿ ಏಳು ಏತನೀರಾವರಿ ಯೋಜನೆಗಳು ಪ್ರಗತಿಯಲ್ಲಿವೆ, ಪೂರ್ಣಗೊಂಡಲ್ಲಿ ತಾಲೂಕಿನಲ್ಲಿ ನೀರಿನ ಸಮಸ್ಯೆ ಬಗೆ ಹರಿಸಲಿದೆ, ಇನ್ನು ಅಂಜರ್ತಲ ವೃದ್ಧಿಯಾಗಿ ರೈತರು ಸಮೃದ್ಧ ಜೀವನ ಮಾಡಬಹುದು, ಇನ್ನು ಕಬ್ಬಳಿ, ದಿಡಗ ಭಾಗಕ್ಕೆ ನೀರಿನ ಸಮಸ್ಯೆ ಹೆಚ್ಚಾಗಿ ಕಾಡುತ್ತಿದೆ. ಕಬ್ಬಳಿ ಏತ ನೀರಾವರಿ ಯೋಜನೆಗೆ ಸರ್ಕಾರ ಹಸಿರು ನಿಶಾನೆ ತೋರಿದರೆ ಇಲ್ಲಿನ ಸಮಸ್ಯೆಯೂ ಬಗೆಹರಿಯಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಶ್ರೀಗಳಿಂದಒತ್ತಾಯ:ಈ ಯೊಜನೆಯಿಂದದಿಡಗ- ಕಬ್ಬಳಿ ಗ್ರಾಪಂ ವ್ಯಾಪ್ತಿಯ 22 ಕೆರೆ, ದಿಂಡಗೂರು ಗ್ರಾಪಂ ವ್ಯಾಪ್ತಿಯ 11 ಕೆರೆ ತುಂಬಿಸಲಾಗುವುದು, ಇದಕ್ಕಾಗಿ ಆದಿಚುಂಚನಗಿರಿ ಶ್ರೀಗಳು ಹಲವು ವರ್ಷದಿಂದ ಮಂತ್ರಿಗಳ ಗಮನಕ್ಕೆ ತಂದಿದ್ದರು. ಹಾಗಾಗಿ ಯೋಜನೆಗೆ ಸರ್ಕಾರ ಅನುಮೋದನೆ ನೀಡಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. ಜನಿವಾರ ಅಮಾನಿಕೆರೆ ಹೇಮಾವತಿ ಎಡದಂಡೆ ನಾಲೆಯಲ್ಲಿ ನೀರು ಹರಿಯುವಾಗ ಮಾತ್ರ ತುಂಬಲಿದೆ, ಬೇಸಿಗೆ ವೇಳೆ ನೀರಿನ ಸಮಸ್ಯೆ ಉಂಟಾಗಿ ಹಿರೀಸಾವೆ ಜುಟ್ಟನಹಳ್ಳಿ ಏತನೀರಾವರಿಗೆ ಅನುಕೂಲವಾಗಲಿದೆ, ಹಾಗಾಗಿ ಗೂಡೆಹೊಸಹಳ್ಳಿ ಗ್ರಾಮದ ಬಳಿ ಹೇಮಾವತಿ ನದಿಯಿಂದ ನೀರನ್ನು ಎತ್ತಿ ಜನಿವಾರ ಕೆರೆಗೆ ತುಂಬಿಸುವ ಯೋಜನೆಗೆ ಯೋಜನಾ ವರದಿ ತಯಾರಿಸಲು 2020-21ನೇ ಸಾಲಿನಲ್ಲಿ ಸರ್ವೆ ಕೆಲಸ, ಯೋಜನೇತರ ಲೆಕ್ಕ ಶೀರ್ಷಿಕೆಯಡಿ 15 ಲಕ್ಷ ರೂ. ಅಂದಾಜು ಮೊತ್ತ ಹಾಗೂ 5 ಲಕ್ಷ ರೂ. ಅನುದಾನ ಲಭ್ಯವಾಗಿದೆ ಎಂದು ವಿವರಿಸಿದರು.
ಹಲವು ವರ್ಷಗಳ ಹೋರಾಟ ಹಾಗೂ ಪರಿ ಶ್ರಮಕ್ಕೆ ಸದ್ಯ ಪ್ರತಿಫಲ ಸಿಕ್ಕಿದೆ. ಡಿಪಿಆರ್ ಸಿದ್ಧಗೊಂಡ ತಕ್ಷಣ ಅನುಮೋದನೆಗೆ ಕಳುಹಿಸಲಾಗುವುದು, ಈ ಯೋಜನೆಯು ಕಲ್ಲಹಳ್ಳಿ ಗುಡ್ಡದಲ್ಲಿವಿಭಾಗಗೊಂಡು ಎಲ್ಲೂ ಕೆರೆಗಳಿಗೂ ಪೈಪ್‌ಲೈನ್ ಮೂಲಕವೇ ನೀರು ಹರಿಸಲಾಗುವುದು ಎಂದರು.
ತಾಪಂ ಸದಸ್ಯ ಎಂ.ಆರ್.ವಾಸು, ಮಾಜಿ ಸದಸ್ಯ ಪುಟ್ಟರಾಜು, ಎಪಿಎಂಸಿ ಮಾಜಿ ಅಧ್ಯಕ್ಷ ರಘುರಾಮ್, ಪಿಕಾರ್ಡ್ ಬ್ಯಾಂಕ್ ನಿರ್ದೇಶಕ ನಟೇಶ್, ಗುತ್ತಿಗೆದಾರ ರಾಮಚಂದ್ರ, ದಿಡಗ ಹಾಗೂ ಕಬ್ಬಳಿ ಗ್ರಾಪಂ ವ್ಯಾಪ್ತಿಯ ರೈತರು ಪಾಲ್ಗೊಂಡಿದ್ದರು.