Advertisement

ಸರ್ವೆ ವಿಳಂಬ: ಪ್ರತಿಭಟನೆಗೆ ನಿರ್ಧಾರ

12:17 PM Feb 27, 2021 | Team Udayavani |

ರಾಮನಗರ: ಸರ್ವೆ ಮಾಡಿಕೊಡ್ತೀವಿ ಅಂತ ರಾಮನಗರ ತಾಲೂಕಿನಲ್ಲಿ 3,413 ಅರ್ಜಿ ಸ್ವೀಕರಿಸಿದ್ದೀರಿ. ಆದರೆ, ಸರ್ವೆ ಮಾಡಲೇ ಇಲ್ಲ ಎಂದು ಸರ್ವೆ ಇಲಾಖೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ತಾಪಂ ಸದಸ್ಯರು, ಅರ್ಜಿ ವಿಲೇವಾರಿ ತಕ್ಷಣ ಆರಂಭಿಸದಿದ್ದರೆ ಮಾ.5ರಂದು ಸರ್ವೆ ಇಲಾಖೆ ಮುಂಭಾಗ ಧರಣಿ ಮಾಡುವುದಾಗಿ ಎಚ್ಚರಿಸಿದ್ದಾರೆ.

Advertisement

ನಗರದ ಮಿನಿ ವಿಧಾನಸೌಧದಲ್ಲಿರುವ ತಾಪಂ ಸಭಾಂಗಣದಲ್ಲಿ ನಡೆದ ತಾಪಂ ಸಾಮಾನ್ಯ ಸಭೆಯಲ್ಲಿ ಸರ್ವೆ ಇಲಾಖೆಯಲ್ಲಿ ಬಾಕಿ ಉಳಿದಿರುವ ಅರ್ಜಿಗಳ ಬಗ್ಗೆ ಸದಸ್ಯ ಗಾಣಕಲ್‌ ನಟರಾಜ್‌ ವಿಷಯ ಪ್ರಸ್ತಾಪಿಸಿದರು. ಶುಲ್ಕ ಅಂತ ರೈತರಿಂದ 40 ಲಕ್ಷ ರೂ. ವಸೂಲಿ ಮಾಡಿದ್ದೀರಿ. ಆದರೆ, ತಿಂಗಳು ಉರುಳುತ್ತಿದ್ದರೂ ಸರ್ವೆ ಕಾರ್ಯ ಮುಗಿಸಿಲ್ಲ. ಮೋಜಿಣಿ ಮುಂತಾದ ದಾಖಲೆ ಇಲ್ಲದೆ, ರೈತರು ತಮ್ಮ ಆಸ್ತಿಗೆ ಇ-ಖಾತೆ ಮಾಡಿಸಿಕೊಳ್ಳಲು ಆಗು ತ್ತಿಲ್ಲ ಎಂದು ಸರ್ವೆ ಇಲಾಖೆ ಅಧಿಕಾರಿಗಳ ವಿರುದ್ಧ ಹರಿಹಾಯ್ದರು.

ಸರ್ವೆದಾರರ ಮುಷ್ಕರ: ಸಭೆಯಲ್ಲಿ ಹಾಜರಿದ್ದ ಸರ್ವೆ ಇಲಾಖೆ ಅಧಿಕಾರಿ ಬಲರಾಂ ಪ್ರತಿಕ್ರಿಯಿಸಿ, ಪರವಾನಗಿ ಹೊಂದಿರುವ ಸರ್ವೆದಾರರು ಮುಷ್ಕರ ಹೂಡಿರುವುದರಿಂದ ಅರ್ಜಿ ವಿಲೇವಾರಿ ಸಾಧ್ಯವಾಗುತ್ತಿಲ್ಲ. ಇಲಾಖೆಯಲ್ಲಿರುವ 24 ಸರ್ವೆ ಅಧಿಕಾರಿಗಳು ಕೆರೆ ಸರ್ವೆ ಇತ್ಯಾದಿ ಕೆಲಸಗಳಿಗೆ ನಿಯೋಜಿತರಾಗಿದ್ದಾರೆ. 8 ಮಂದಿ ಸರ್ವೆ ಅಧಿಕಾರಿಗಳಿಗೆ ಅರ್ಜಿ ವಿಲೇವಾರಿ ವಹಿಸಲಾಗಿದೆ. ತಿಂಗಳಿಗೆ 550 ಅರ್ಜಿಗಳನ್ನು ವಿಲೇ ಮಾಡುವುದಾಗಿ ತಿಳಿಸಿದರು. ಇಲಾಖೆಯ ಆಯುಕ್ತರು ಇ-ಸ್ವತ್ತು ಕೆಲಸಕ್ಕೆ ನಿಯೋಜಿಸುವಂತೆ ತಿಳಿಸಿದರೆ ಮಾಡುತ್ತೇವೆ. ಈ ಬಗ್ಗೆ ತಾಪಂ ಸದಸ್ಯರು ಅವರ ಮೇಲೆ ಒತ್ತಡ ಹೇರಬೇಕು ಎಂದರು.

ಅರ್ಜಿ ಸ್ವೀಕರಿಸುವುದಿಲ್ಲ ಅಂತ ಬೋರ್ಡ್‌ ಹಾಕಿ ಬಿಡಿ: ಇದಕ್ಕೆ ಕುಪಿತರಾದ ಗಾಣಕಲ್‌ ನಟರಾಜ್‌, ರೈತರನ್ನು ವಿನಾಕಾರಣ  ಅಲೆಸುತ್ತಿರುವುದು ನೀವು ತಿಂಗಳಿಗೆ 300, 500 ಅರ್ಜಿ ವಿಲೇವಾರಿ ಅಂದರೆ ಎಲ್ಲಾ ಅರ್ಜಿ ವಿಲೇ ಆಗುವುದು ಇನ್ನು ಒಂದು ವರ್ಷವಾಗುತ್ತೆ. ನಿಮ್ಮ ಹಿರಿಯ ಅಧಿಕಾರಿಗಳಿಗೆ ವಿಷಯದ ಗಂಭೀರತೆಯನ್ನು ವಿವರಿಸಿ ತಿಳಿಸಿ ಕೆಲಸ ಮಾಡಿಸಿ ಕೊಡಿ, ಇಲ್ಲವೆ ಎಲ್ಲ 3,413 ಅರ್ಜಿಗಳು ವಿಲೇ ಆಗುವವರೆಗೂ ಮೋಜಿಣಿ ಮತ್ತು 11 ಇ-ಅರ್ಜಿಗಳನ್ನು ಸ್ವೀಕರಿಸುವುದಿಲ್ಲ ಎಂದು ಇಲಾಖೆಯಲ್ಲಿ ಫ‌ಲಕ ಪ್ರದರ್ಶಿಸಿ ಎಂದು ಖಾರವಾಗಿ ಪ್ರತಿಕ್ರಯಿಸಿದರು. ಇದಕ್ಕೆ ದನಿಗೂಡಿಸಿದ ಸದಸ್ಯ ಪ್ರಕಾಶ್‌ ಇಲಾಖೆಗೆ ಬೀಗ ಜಡಿದು ಬಿಡಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಅಂಗನವಾಡಿಗಳಿಗೆ ಜಮಖಾನ, ಚೇರು, ಬೆಡ್‌ಶೀಟ್‌ ವಿತರಣೆ ಮಾಡಿ ಅಂತ ಸದಸ್ಯರು ಸಿಡಿಪಿಒಗೆ ಸದಸ್ಯರು ಸೂಚನೆ ಕೊಟ್ಟರು, ಕೃಷಿ, ಕುಡಿಯುವ ನೀರು, ಆರೋಗ್ಯ ಮತ್ತು ಶಿಕ್ಷಣ ಇಲಾಖೆಯಲ್ಲಿ ಪ್ರಗತಿಯ ಬಗ್ಗೆ ಚರ್ಚೆಗಳು ನಡೆದವು. ತಾಪಂ ಉಪಾಧ್ಯಕ್ಷೆ ರಮಾಮಣಿ, ತಾಪಂ ಇಒ ಶಿವಕುಮಾರ್‌ ಹಾಜರಿದ್ದರು.

Advertisement

ಗ್ರಾಮಗಳು ಬಂದ್‌ ಆಚರಿಸಬೇಕೆ? :

ಸಭೆಯಲ್ಲಿ ಅಧ್ಯಕ್ಷತೆ ವಹಿಸಿದ್ದ ತಾಲೂಕು ಪಂಚಾಯ್ತಿ ಅಧ್ಯಕ್ಷ ಎಸ್‌.ಪಿ.ಜಗದೀಶ್‌ ಮಾತನಾಡಿ, ಇ-ಖಾತಾ ವಿಳಂಬದಿಂದ ಇತ್ತೀಚೆಗೆ ನಗರಸಭೆಯ ವಿರುದ್ಧ ಜನ ರಾಮನಗರ ಬಂದ್‌ ಆಚರಿಸಿದ್ದರು. ಗ್ರಾಮ, ಹೋಬಳಿ ಮಟ್ಟದಲ್ಲೂ ಬಂದ್‌ ಆಚರಿಸಬೇಕೆ ಎಂದು ಸರ್ವೆ ಇಲಾಖೆ ಅಧಿಕಾರಿಗಳನ್ನು ಪ್ರಶ್ನಿಸಿದರು.

ನಿಮ್ಮಿಂದ ವಸತಿ ಯೋಜನೆ ವಿಫ‌ಲ :

ಸರ್ವೆದಾರರ ಕೊರತೆ ಇದ್ದರೆ ಮೇಲಾಧಿಕಾರಿಗಳಿಗೆ ತಿಳಿಸಿ ಕೆಲಸ ಮಾಡಿಸಿಕೊಡಬೇಕಾದ್ದು ಇಲಾಖೆ ಕರ್ತವ್ಯ. ಸರ್ವೆ ಇಲ್ಲದ ಕಾರಣ ಅನೇಕ ಕುಟುಂಬ ಮನೆ ನಿರ್ಮಿಸಿಕೊಳ್ಳಲು ಆಗುತ್ತಿಲ್ಲ. ಮೋಜಿಣಿ ಇಲ್ಲದೆ ವಸತಿ ಯೋಜನೆಯಡಿ ಮಂಜೂರಾಗಿದ್ದ ಅನೇಕ ಕುಟುಂಬಗಳ ಅನುದಾನ ವಾಪಸ್‌ ಹೋಗಿದೆ. ನಿಮ್ಮಿಂದ ಜಿಲ್ಲೆಯಲ್ಲಿ ವಸತಿ ಯೋಜನೆಗಳು ವಿಫ‌ಲವಾಗು¤ದೆ ಎಂದು ತಾಪಂ ಸದಸ್ಯ ಲಕ್ಷ್ಮೀಕಾಂತ ದೂರಿದರು.

Advertisement

Udayavani is now on Telegram. Click here to join our channel and stay updated with the latest news.

Next