Advertisement

ಅನ್ನದಾತನ ಸಂಕಷ್ಟ ಅರಿಯಲು ದೇಶಾದ್ಯಂತ ಸರ್ವೇ: ಸರಕಾರ

12:30 AM Feb 06, 2019 | Team Udayavani |

ಹೊಸದಿಲ್ಲಿ: ದೇಶಾದ್ಯಂತ ರೈತರ ಸಂಕಷ್ಟಗಳನ್ನು ಅರಿಯುವ ಸಲುವಾಗಿ ಕೇಂದ್ರ ಸರಕಾರ ಪ್ರಸಕ್ತ ವರ್ಷವೇ ಸರ್ವೇಯೊಂದನ್ನು ನಡೆಸಲು ನಿರ್ಧರಿಸಿದೆ ಎಂದು ಕೇಂದ್ರ ಕೃಷಿ ಖಾತೆ ಸಹಾಯಕ ಸಚಿವ ಗಜೇಂದ್ರ ಸಿಂಗ್‌ ತಿಳಿಸಿದ್ದಾರೆ.

Advertisement

 ನ್ಯಾಷನಲ್‌ ಸ್ಯಾಂಪಲ್‌ ಸರ್ವೇಯ 77ನೇ ಸುತ್ತಿನಲ್ಲಿ ದೇಶಾದ್ಯಂತ ಕೃಷಿಕರ ಕುಟುಂಬಗಳ ಸ್ಥಿತಿ, ಅವರ ಆದಾಯ, ವೆಚ್ಚ, ಸಾಲ ಸೇರಿದಂತೆ ಹಲವು ವಿವರಗಳನ್ನು ಸಂಗ್ರಹಿಸಲಾಗುತ್ತದೆ ಎಂದು ಅವರು ರಾಜ್ಯಸಭೆಗೆ ಮಾಹಿತಿ ನೀಡಿದ್ದಾರೆ. ಈ ನಡುವೆ, ದೇಶದಲ್ಲಿ ಸೆಲ್ಫಿ ದುರಂತಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಪ್ರವಾಸಿ ತಾಣಗಳಲ್ಲಿನ ಅಪಾಯಕಾರಿ ಸೆಲ್ಫಿ ಸ್ಪಾಟ್‌ಗಳನ್ನು ಗುರುತಿಸುವಂತೆ ಎಲ್ಲ ರಾಜ್ಯಗಳಿಗೂ ಸೂಚಿಸಲಾಗಿದೆ ಎಂದು ಸಚಿವ ಹನ್ಸರಾಜ್‌ ಅಹಿರ್‌ ಮಾಹಿತಿ ನೀಡಿದ್ದಾರೆ.

102 ಕೋಟಿ ರೂ. ಬಿಲ್‌: ಕಳೆದ ವರ್ಷ ಉಂಟಾದ ಭಾರೀ ಪ್ರವಾಹದ ವೇಳೆ ರಕ್ಷಣಾ ಕಾರ್ಯಾಚರಣೆ ನಡೆಸಲು ಭಾರತೀಯ ವಾಯುಪಡೆಯ ವಿಮಾನಗಳು ಮತ್ತು ಹೆಲಿಕಾಪ್ಟರ್‌ಗಳನ್ನು ಬಳಸಿಕೊಂಡಿದ್ದಕ್ಕೆ ಕೇಂದ್ರ ಸರಕಾರವು 102 ಕೋಟಿ ರೂ.ಗಳ ಬಿಲ್‌ ಅನ್ನು ಕೇರಳ ಸರಕಾರಕ್ಕೆ ಕಳುಹಿಸಿದೆ. ಹೀಗೆಂದು ರಕ್ಷಣಾ ಇಲಾಖೆ ಸಹಾಯಕ ಸಚಿವ ಸುಭಾಷ್‌ ಭಾಮ್ರೆ ಅವರು ರಾಜ್ಯಸಭೆಗೆ ಲಿಖೀತ ಮಾಹಿತಿ ನೀಡಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next