Advertisement

ತ್ರಿಪುರ ಭೈರವಿ ಮಠದ ಪ್ರಸಾದಕ್ಕೆ ಕಣ್ಗಾವಲು 

11:25 AM Dec 22, 2018 | |

ಮೈಸೂರು: ಸುಳವಾಡಿ ಕಿಚ್ಚುಗುತ್ತಿ ಮಾರಮ್ಮ ದೇವಸ್ಥಾನದ ಪ್ರಸಾದ ಸೇವನೆಯಿಂದ ಸಂಭವಿಸಿದ ಅವಘಡದ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ನಗರದ ಐತಿಹಾಸಿಕ ಶ್ರೀ ತ್ರಿಪುರ ಭೈರವಿ ಮಠದಲ್ಲಿ ಅನ್ನಸಂತರ್ಪಣೆ ಹಾಗೂ ಅಡುಗೆ ತಯಾರಿಸುವ ಸ್ಥಳದಲ್ಲಿ ಸಿಸಿಟಿವಿ ಅಳವಡಿಸಲಾಗಿದೆ. 

Advertisement

ಹನುಮ ಜಯಂತಿ ಪ್ರಯುಕ್ತ ಪ್ರತಿವರ್ಷ ತ್ರಿಪುರ ಭೈರವಿ ಮಠದಲ್ಲಿ ಅನ್ನಸಂತರ್ಪಣೆ ನಡೆಸಲಾಗುತ್ತದೆ. ಈ ವೇಳೆ ಯಾವುದೇ ದುರ್ಘ‌ಟನೆ ನಡೆಯದಂತೆ ಎಚ್ಚರವಹಿಸಿರುವ ದೇವಸ್ಥಾನದ ಆಡಳಿತ ಮಂಡಳಿ, ಭೈರವಿ ಮಠ, ಅಡುಗೆ ಮಾಡುವ ಸ್ಥಳ ಹಾಗೂ ಭಕ್ತಾಧಿಗಳು ಊಟಕ್ಕೆ ಕೂರುವ ಸ್ಥಳದಲ್ಲಿ ಸಿಸಿ ಕ್ಯಾಮರಾ ಅಳವಡಿಸಿ ಮುಂಜಾಗ್ರತೆವಹಿಸಲಾಗಿದೆ.

ಅಲ್ಲದೇ ಅಡುಗೆ ಮಾಡುವ ಸ್ಥಳಕ್ಕೆ ಕೇವಲ ಅಡುಗೆ ಭಟ್ಟರು ಹಾಗೂ ಪರಿಚಿತ ವ್ಯಕ್ತಿಗಳಿಗೆ ಮಾತ್ರ ಅವಕಾಶ ನೀಡಲಾಗಿದೆ. ಸಿಸಿ ಕ್ಯಾಮರಾದಲ್ಲಿ ದಾಖಲಾಗುವ ದೃಶ್ಯಾವಳಿಯನ್ನು ಮಠದ ಸ್ವಾಮೀಜಿ ಅವರೇ ಖುದ್ದಾಗಿ ಪರಿಶೀಲಿಸಲಿದ್ದಾರೆ. ದೇವಸ್ಥಾನದಲ್ಲಿ ನಡೆದ ಅನ್ನಸಂತರ್ಪಣೆಯಲ್ಲಿ ನೂರಾರು ಭಕ್ತಾಧಿಗಳು ಪಾಲ್ಗೊಂಡಿದ್ದರು, ಭಕ್ತರಿಗೆ ಬಾತ್‌, ಅನ್ನಸಾಂಬಾರ್‌, ಪಲ್ಯ, ಮೈಸೂರು ಪಾಕ್‌, ಉಪ್ಪಿನಕಾಯಿ, ಹಪ್ಪಳ ನೀಡಲಾಯಿತು. 

Advertisement

Udayavani is now on Telegram. Click here to join our channel and stay updated with the latest news.

Next