Advertisement

ಅಸಮಾನತೆ ವಿರುದ್ಧ ಹೋರಾಡಿದ ಶರಣ

12:19 PM Jul 28, 2018 | Team Udayavani |

ಎಚ್‌.ಡಿ.ಕೋಟೆ: 12ನೇ ಶತಮಾನದಲ್ಲಿ ವಚನಕ್ರಾಂತಿ ಮಾಡಿದ ಬಸವಣ್ಣನವರ ಸಮಕಾಲಿನರಾದ ಶಿವಶರಣ ನಿಜಲಿಂಗಯೋಗಿ ಹಡಪದ ಅಪ್ಪಣ್ಣ ವಚನಗಳು ಸಮಾಜದಲ್ಲಿ ತಾಂಡವವಾಡುತ್ತಿದ್ದ ಅಸಮಾನತೆ, ಅಶ³ƒಶ್ಯತೆ ವಿರುದ್ಧ ಹೋರಾಟ ಮಾಡಿದ ಮಹಾ ಶಿವಶರಣ ಎಂದು ಶಾಸಕ ಅನಿಲ್‌ಕುಮಾರ್‌ ಹೇಳಿದರು.

Advertisement

ಪಟ್ಟಣದ ಜೆಎಸ್‌ಎಸ್‌ ಮಂಗಳ ಮಂಟಪದಲ್ಲಿ ತಾಲೂಕು ಸವಿತಾ ಸಮಾಜ ಏರ್ಪಡಿಸಿದ್ದ ಶಿವಶರಣ ನಿಜಲಿಂಗಯೋಗಿ ಹಡಪದ ಅಪ್ಪಣ್ಣನವರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಹಡಪದ ಅಪ್ಪಣ್ಣ ರಚಿಸಿದ 250ಕ್ಕೂ ಹೆಚ್ಚು ವಚನಗಳ ಸಾರವನ್ನು ಪ್ರತಿಯೊಬ್ಬರು ಅಧ್ಯಯನ ಮಾಡುವ ಮೂಲಕ ಅವರ ತತ್ವಾದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು. ಅನುಭವ ಮಂಟಪದ ಅಧ್ಯಕ್ಷ ಅಲ್ಲಮಪ್ರಭು ಮತ್ತು ಬಸವಣ್ಣನವರ ಬಾಂಧವ್ಯ ವೃದ್ಧಿಗೆ ಹಡಪದ ಅಪ್ಪಣ್ಣ ಸೇತುವೆಯಂತೆ ಕೆಲಸ ಮಾಡಿದ್ದರು ಎಂದು ಹೇಳಿದರು. 

ಕಾರ್ಯಕ್ರಮದಲ್ಲಿ ಶ್ರೀ ಚನ್ನಬಸವ ಸ್ವಾಮೀಜಿ, ಶ್ರೀ ನಂದೀಶ ಸ್ವಾಮೀಜಿ, ಜಿಪಂ ಅಧ್ಯಕ್ಷೆ ನಯಿಮಾ ಸುಲ್ತಾನ್‌, ಮಾಜಿ ಸದಸ್ಯ ಮಂಜುನಾಥ್‌, ತಾಪಂ ಅಧ್ಯಕ್ಷೆ ಮಂಜುಳಾ, ಪುರಸಭಾಧ್ಯಕ್ಷೆ ಮಂಜುಳಾ, ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್‌ ನರಸಿಂಹಮೂರ್ತಿ, ಸರಗೂರು ಪಪಂ ಸ್ಥಾಯಿ ಸಮಿತಿ ಅಧ್ಯಕ್ಷ ಹನುಮನಾಯಕ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next