Advertisement

Sandeshkhali ವೀಡಿಯೋ ಬಹಿರಂಗ: ಬಿಜೆಪಿ-ಟಿಎಂಸಿ ನಡುವೆ ತೀವ್ರ ವಾಗ್ಯುದ್ಧ

01:00 AM May 06, 2024 | Team Udayavani |

ಕೋಲ್ಕತಾ: ಸಂದೇಶ್‌ಖಾಲಿ ಲೈಂಗಿಕ ಕಿರುಕುಳ ಪ್ರಕರಣಕ್ಕೆ ಸಂಬಂಧಿಸಿದ ಸ್ಟಿಂಗ್‌ ವೀಡಿಯೋ ಬಹಿರಂಗವಾದ ಬೆನ್ನಲ್ಲೇ ಬಿಜೆಪಿ ಮತ್ತು ಟಿಎಂಸಿ ನಡುವೆ ಭಾರೀ ವಾಕ್ಸಮರ ಆರಂಭವಾಗಿದೆ. ಕೃತಕ ಬುದ್ಧಿಮತ್ತೆ ತಂತ್ರಜ್ಞಾನ, ಡೀಪ್‌ಫೇಕ್‌ ಬಳಸಿ ವೀಡಿಯೋ ಸೃಷ್ಟಿಸಲಾಗಿದೆ ಎಂದು ಬಿಜೆಪಿ ಸ್ಥಳೀಯ ನಾಯಕ ಗಂಗಾಧರ್‌ ಕಾಯ್ಲ ಆರೋಪಿಸಿದ್ದು, ಈ ಕುರಿತು ಸಿಬಿಐಗೆ ದೂರು ನೀಡುವುದಾಗಿ ರವಿವಾರ ಹೇಳಿದ್ದಾರೆ.

Advertisement

ಇನ್ನೊಂದೆಡೆ ಬಿಜೆಪಿ ವಿರುದ್ಧ ಕಿಡಿಕಾರಿರುವ ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ, “ಇಡೀ ಸಂದೇಶ್‌ಖಾಲಿ ಪ್ರಕರಣವು ಬಿಜೆಪಿ ಕೃಪಾಪೋಷಿತ ನಾಟಕ ಎಂಬುವುದು ಈಗ ಸ್ಪಷ್ಟವಾಗಿದೆ. ಜನರಿಗೆ ಹಣ ನೀಡಿ ಬಿಜೆಪಿ ಸುಳ್ಳನ್ನು ಹಬ್ಬಿಸಿದೆ. ನರೇಂದ್ರ ಮೋದಿಯವರೇ ಇನ್ನಾದರೂ ಮೊಸಳೆ ಕಣ್ಣೀರು ಸುರಿಸುವುದನ್ನು ನಿಲ್ಲಿಸಿ. ನಿಜ ಏನೆಂದು ವಿಡಿಯೋವೇ ಬಹಿರಂಗಪಡಿಸಿದೆ’ ಎಂದಿದ್ದಾರೆ. “ಸಂದೇಶ್‌ಖಾಲಿಯಲ್ಲಿ ಲೈಂಗಿಕ ದೌರ್ಜನ್ಯವೇ ನಡೆದಿಲ್ಲ. ಬಿಜೆಪಿ ನಾಯಕ ಸುವೇಂದು ಅಧಿಕಾರಿಯ ಸೂಚನೆ ಮೇರೆಗೆ ಟಿಎಂಸಿ ನಾಯಕರ ವಿರುದ್ಧ ಸುಳ್ಳು ಅತ್ಯಾಚಾರ ಕೇಸು ದಾಖಲಿಸಲಾಗಿತ್ತು’ ಎಂದು ಬಿಜೆಪಿಯ ಗಂಗಾಧರ್‌ ಹೇಳಿದ್ದಾರೆ ಎನ್ನಲಾದ ವೀಡಿಯೋ ಶನಿವಾರ ಬಹಿರಂಗವಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next