Advertisement

ಬದಲಾವಣೆಗಾಗಿ ಶರಣರು ಮರಣಕ್ಕಂಜಿಲ್ಲ

11:46 AM Oct 22, 2018 | |

ಅಫಜಲಪುರ: 12ನೇ ಶತಮಾನದಲ್ಲಿ ಬಸವಾದಿ ಶರಣರು ಸಮಾಜದಲ್ಲಿ ಕ್ರಾಂತಿಕಾರಕ ಬದಲಾವಣೆ ತರಲು ಮರಣಕ್ಕಂಜಿಲ್ಲ ಎಂದು ಭಾರತೀಯ ಬಸವ ಬಳಗದ ಅಧ್ಯಕ್ಷ ಶಂಕರರಾವ್‌ ಹುಲ್ಲೂರ ಹೇಳಿದರು.

Advertisement

ಪಟ್ಟಣದ ಬಸವ ಮಂಟಪದಲ್ಲಿ ತಾಲೂಕು ಶರಣ ಸಾಹಿತ್ಯ ಪರಿಷತ್ತು ಹಾಗೂ ಭಾರತೀಯ ಬಸವ ಬಳಗ ಮತ್ತು ಬಸವ ಮಾರ್ಗ ಪ್ರತಿಷ್ಠಾನ, ಲಿಂಗಾಯತ ಮಹಾಸಭಾ ಸಹಯೋಗಲ್ಲಿ ಮರಣವೇ ಮಹಾನವಮಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಶರಣ ಹರಳಯ್ಯನವರ ಮಗ ಮತ್ತು ಬ್ರಾಹ್ಮಣ ಮದುವರಸನ ಮಗಳು ಲಾವಣ್ಯವತಿ ಮದುವೆ ಕಲ್ಯಾಣ ಕಾಂತ್ರಿಗೆ ನೆಪ ಮಾತ್ರ ಆಗಿತ್ತು. ಬಸವಾದಿ ಶರಣರ ಪ್ರತಿಯೊಂದು ಕಾರ್ಯಗಳು ಕ್ರಾಂತಿಯಾಗಿದ್ದವೆಂದು ಹೇಳಿದರು. ಜಾತೀಯತೆಗಾಗಿ ಮತ್ತು ಶ್ರೀಮಂತ, ಬಡವರೆನ್ನುವ ಬೇಧಕ್ಕಾಗಿ, ಮೂಢನಂಬಿಕೆಗಾಗಿ, ಸ್ತ್ರೀ ಸಮಾನತೆಗಾಗಿ ಹೀಗೆ ಸದಾ ಹೋರಾಟದಲ್ಲಿ ತೊಡಿಗಿರುವಾಗ ಅಂತರ್ಜಾತಿ ಮದುವೆ ಮುಂದಿಟ್ಟುಕೊಂಡು ಜಾತಿವಾದಿಗಳ ಅರಸ ಬಿಜ್ಜಳನ ಕಿವಿ ಊದಿ ಕ್ರಾಂತಿಗೆ ಏರ್ಪಾಡು ಮಾಡಿದರು. ಬಸವಣ್ಣನವರನ್ನು ಗಡಿಪಾರು ಮಾಡಿಸಿದರು. ಈ ಕಡೆ ಎರಡು
ಕುಂಟುಬದ ಶರಣ ಹರಳಯ್ಯನವರ ಮತ್ತು ಮದುವರಸರ ಎಲ್ಲರನ್ನು ಆನೆ ಕಾಲಿಗೆ ಕಟ್ಟಿ ಎಳೆಸಿ ಕೊಲ್ಲಿದರು. ಶರಣರು ಮರಣಕ್ಕಂಜದೆ ಈ ವ್ಯವಸ್ಥೆ ಬದಲಿಸಲು ಹುತಾತ್ಮರಾದರು ಎಂದು ಹೇಳಿದರು.

ಅಮೃತರಾವ್‌ ಪಾಟೀಲ, ಬಸವರಾಜ ಚಾಂದಕವಟೆ, ಡಾ| ಸಿ.ವಿ. ಟಕ್ಕಳಕಿ, ಸಿದ್ದು ಶಿವಣಗಿ ಮಾತನಾಡಿ, ಬಸವಣ್ಣನವರು ಗಡಿಪಾರಾಗಿ ಕೂಡಲಸಂಗಮಕ್ಕೆ ಹೋದಾಗ ಕಲ್ಯಾಣದಲ್ಲಿ ಬಹುದೊಡ್ಡ ಕ್ರಾಂತಿ ನಡೆದು ಹೋಯಿತು. ಅದರಲ್ಲಿ ಮಡಿವಾಳ ಮಾಚಿದೇವ, ಅಂಬಿಗರ ಚೌಡಯ್ಯನವರು ದೊಡ್ಡ ಹೋರಾಟವನ್ನೇ ಮಾಡಿದರು.  ಬಿಜ್ಜಳನ ಕೊಲೆಯಾದ ನಂತರ ಮರಿ ಅರಸ ಸೋಹಿ ದೇವನನ್ನು ಮಡಿವಾಳ ಮಾಚಿ ದೇವರು ತಮ್ಮ ಮೇಲೆ ದಾಳಿ ಮಾಡಲು ಬಂದಾಗ ಕೊಲೆ ಮಾಡಿದರು. ನಂತರ ವಚನ ಸಾಹಿತ್ಯ ಉಳವಿ ಗುಹೆಯಲ್ಲಿ ಬಚ್ಚಿಟ್ಟರು ಎಂದು ಹೇಳಿದರು.

ಮುಖಂಡರಾದ ಸದಾಶಿವ ಮೇತ್ರೆ, ಶರಣು ಮೇತ್ರೆ, ಗೋಪಾಲ ಹಳಾಳ, ಶಂಕರಪ್ಪ ಮಣೂರ, ಡಾ| ಭೀಮರಾಯ ಚಿಂಚೋಳಿ, ಸಿದ್ದಣಗೌಡ ಮಾಲಿಪಾಟೀಲ, ಬಸವರಾಜ ಉಪ್ಪಾರ ಇದ್ದರು. ಜಿ.ಎಸ್‌. ಬಾಳಿಕಾಯಿ ಸ್ವಾಗತಿಸಿದರು. ಬಸವರಾಜ ಕೆಂಗನಾಳ ನಿರೂಪಿಸಿದರು. ಬಸವರಾಜ
ನಿಂಬರ್ಗಿ ವಂದಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next