Advertisement

ಚುನಾವಣೆಯಲ್ಲಿ ಅಚ್ಚರಿಯ ಫ‌ಲಿತಾಂಶ

11:07 PM Dec 30, 2021 | Team Udayavani |

ರಾಜ್ಯದ ಐದು ನಗರಸಭೆ, 19 ಪುರಸಭೆ ಹಾಗೂ 34 ಪಟ್ಟಣ ಪಂಚಾಯತ್‌ಗಳಿಗೆ ನಡೆದ ಚುನಾವಣೆಯ ಫ‌ಲಿತಾಂಶ ಗುರುವಾರ ಪ್ರಕಟವಾಗಿದೆ. ಸ್ಥಳೀಯ ಸಂಸ್ಥೆಗಳಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಬೇಕೆಂಬ ಅಭ್ಯರ್ಥಿಗಳ ಕಸರತ್ತಿಗೆ ಮತದಾರ ಸ್ಪಷ್ಟ ಉತ್ತರ ನೀಡಿದ್ದಾನೆ. ಈ ನಡುವೆ ಹಲವು ವಿಶೇಷ, ಅಚ್ಚರಿಗಳಿಗೂ ಫ‌ಲಿತಾಂಶ ಸಾಕ್ಷಿಯಾಗಿದೆ.

Advertisement

ಸೊಸೆ ವಿರುದ್ಧ ಅತ್ತೆಗೆ ಗೆಲುವು :

ದಾವಣಗೆರೆ: ತೀವ್ರ ಕುತೂಹಲ ಮೂಡಿಸಿದ್ದ ಚನ್ನಗಿರಿ ತಾಲೂಕಿನ ಕರೇಕಟ್ಟೆ ಗ್ರಾ.ಪಂ. 2ನೇ ವಾರ್ಡ್‌ನ ಉಪ ಚುನಾವಣೆಯಲ್ಲಿ ಸೊಸೆ ವಿರುದ್ಧ ಅತ್ತೆ ಗೆಲುವು ಸಾಧಿಸಿದ್ದಾರೆ. ಗ್ರಾ.ಪಂ.ನ 2ನೇ ವಾರ್ಡ್‌ನಿಂದ ಆಯ್ಕೆಯಾಗಿದ್ದ ಸದಸ್ಯರು ಮೃತಪಟ್ಟ ಹಿನ್ನೆಲೆಯಲ್ಲಿ ತೆರವಾಗಿದ್ದ ಸ್ಥಾನಕ್ಕೆ ನಡೆದ ಉಪ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಅತ್ತೆ-ಸೊಸೆಯಲ್ಲಿ ಅತ್ತೆ ಪಾರ್ವತಮ್ಮ 502 ಮತ ಪಡೆದರೆ, ಸೊಸೆ ಲಕ್ಷ್ಮಮ್ಮ 412 ಮತ ಪಡೆದರು. ಪಾರ್ವತಮ್ಮ 91 ಮತಗಳ ಅಂತರದಲ್ಲಿ ಗ್ರಾ.ಪಂ.ಗೆ ಆಯ್ಕೆಯಾಗಿದ್ದಾರೆ.

ಸಿಎಂ ತವರಲ್ಲೇ ಬಿಜೆಪಿಗೆ ಮುಖಭಂಗ :

ಹಾವೇರಿ: ಜಿಲ್ಲೆಯ ಶಿಗ್ಗಾವಿ ತಾಲೂಕಿನ ಬಂಕಾಪುರ ಪುರಸಭೆ ಹಾಗೂ ಹಾವೇರಿ ತಾಲೂಕಿನ ಗುತ್ತಲ ಪಪಂ ಚುನಾವಣೆಯಲ್ಲಿ ಕಾಂಗ್ರೆಸ್‌ ಮೇಲುಗೈ ಸಾಧಿಸಿದ್ದು, ಸಿಎಂ ತವರಲ್ಲೇ ಬಿಜೆಪಿ ಹಿನ್ನಡೆ ಅನುಭವಿಸಿದೆ. ಬಂಕಾಪುರ ಪುರಸಭೆ 23 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ 14, ಬಿಜೆಪಿಗೆ 7 ಹಾಗೂ ಪಕ್ಷೇತರರಿಗೆ ಎರಡು ಸ್ಥಾನ ಲಭಿಸಿದ್ದು, ಕಾಂಗ್ರೆಸ್‌ ಅ ಧಿಕಾರದ ಗದ್ದುಗೆ ಏರಿದೆ. ಗುತ್ತಲ ಪ.ಪಂ.ನ 18 ಸ್ಥಾನಗಳಲ್ಲಿ ಕಾಂಗ್ರೆಸ್‌ 11, ಬಿಜೆಪಿಗೆ 6 ಸ್ಥಾನ ಹಾಗೂ ಪಕ್ಷೇತರರಿಗೆ ಒಂದು ಸ್ಥಾನ ಲಭಿಸಿದ್ದು, ಕಾಂಗ್ರೆಸ್‌ ಅಧಿ ಕಾರದ ಗದ್ದುಗೆ ಏರಿದೆ. ಕಳೆದ ಅವ ಧಿಯಲ್ಲಿ ಸಹ ಬಂಕಾಪುರ ಪುರಸಭೆ ಹಾಗೂ ಗುತ್ತಲ ಪ.ಪಂ.ಗಳಲ್ಲಿ ಕಾಂಗ್ರೆಸ್‌ ಅಧಿ ಕಾರದಲ್ಲಿತ್ತು. ಹಾನಗಲ್ಲ ಪುರಸಭೆಯ 19ನೇ ವಾರ್ಡ್‌ಗೆ ನಡೆದ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿ ಚುನಾಯಿತರಾಗಿದ್ದಾರೆ.

Advertisement

ಒಂದು ಮತ ಅಂತರದಲ್ಲಿ ಗೆಲುವು :

ಮರಿಯಮ್ಮನಹಳ್ಳಿ: ವಿಜಯನಗರ ಜಿಲ್ಲೆ ಮರಿಯಮ್ಮನಹಳ್ಳಿ ಪ.ಪಂ. ಚುನಾವಣೆಯಲ್ಲಿ 1ನೇ ವಾರ್ಡ್‌ನ ಕಾಂಗ್ರೆಸ್‌ ಅಭ್ಯರ್ಥಿ ಎಲ್‌. ವಸಂತ (166) ಒಂದು ಮತದ ಅಂತರದಲ್ಲಿ ಗೆಲುವು ದಾಖಲಿಸಿದ್ದಾರೆ. ಅವರಿಗೆ ಪೈಪೋಟಿ ನೀಡಿದ್ದ ಪಕ್ಷೇತರ ಅಭ್ಯರ್ಥಿ ಎಂ. ವಿರೂಪಾಕ್ಷ 165 ಮತ ಪಡೆದಿದ್ದಾರೆ. ಮತ ಎಣಿಕೆ ಸಂದರ್ಭ ಈ ಅಂತರವನ್ನು ಒಪ್ಪದ ಅಭ್ಯರ್ಥಿಗಳು ಮರು ಎಣಿಕೆಗೆ ಮನವಿ ಮಾಡಿಕೊಂಡಿದ್ದರು. ಮರು ಎಣಿಕೆಯಲ್ಲೂ ಇದೇ ಫಲಿತಾಂಶ ಬಂದಿದೆ. ಈ ಚುನಾವಣೆಯಲ್ಲಿ ಯಾವ ಅಭ್ಯರ್ಥಿಗಳೂ ಸರಿಯಿಲ್ಲ ಎಂದು 93 ಮಂದಿ ನೋಟಾ ಚಲಾಯಿಸಿದ್ದಾರೆ.

ಗಂಡನಿಗೆ ಸೋಲು, ಹೆಂಡತಿಗೆ ಗೆಲುವು :

ಹೊಸಪೇಟೆ: ವಿಜಯನಗರ ಜಿಲ್ಲೆ ಹೊಸಪೇಟೆ ನಗರಸಭೆ ಚುನಾವಣೆಯಲ್ಲಿ ಪತಿ ಸೋತು ಪತ್ನಿ ಗೆಲುವು ಸಾಧಿಸಿದ್ದಾರೆ. 24ನೇ ವಾರ್ಡ್‌ನಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಮಾಜಿ ಸದಸ್ಯ ಕೆ. ಮಲ್ಲಪ್ಪ ಸೋಲನುಭವಿಸಿದರೆ, ಅವರ ಪತ್ನಿ ಕೆ. ಶಾಂತಾ ಅವರು 19ನೇ ವಾರ್ಡ್‌ನಿಂದ ಪಕ್ಷೇತರರಾಗಿ ಜಯ ಸಾಧಿ ಸಿದ್ದಾರೆ.

ರಾಜ್ಯದಲ್ಲಿ ಕಾಂಗ್ರೆಸ್‌ ಪರವಾದ ಅಲೆ ಬೀಸುತ್ತಿದೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷ ಸ್ಪಷ್ಟ ಬಹುಮತ ಪಡೆದು ಅಧಿಕಾರ ಹಿಡಿಯುವುದು ನೂರಕ್ಕೆ ನೂರು ಖಚಿತ. 1,187 ಸ್ಥಾನಗಳ ಪೈಕಿ 500ಕ್ಕೂ ಅಧಿಕ ಸ್ಥಾನಗಳನ್ನು ಕಾಂಗ್ರೆಸ್‌ ಪಕ್ಷ ಗೆದ್ದಿದೆ. ಫಲಿತಾಂಶದಿಂದ ಜನಾಭಿಪ್ರಾಯ ನಮ್ಮ ಪರವಾಗಿದೆ.- ಸಿದ್ದರಾಮಯ್ಯ,  ಮಾಜಿ ಸಿಎಂ

ಪುರಸಭೆ, ನಗರಸಭೆ, ಪಟ್ಟಣ ಪಂಚಾಯತ್‌ ಕ್ಷೇತ್ರಗಳ ಸ್ಥಳೀಯ ಸಂಸ್ಥೆಗಳಿಗೆ ನಡೆದ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಬೆಂಬಲಿಸಿದ ಮತದಾರ ಬಂಧುಗಳಿಗೆ ಹೃತೂ³ರ್ವಕ ಕೃತಜ್ಞತೆಗಳು. ಹಾಗೆಯೇ, ಗೆಲುವು ಸಾಧಿಸಿದ ಪಕ್ಷದ ಎಲ್ಲ ಅಭ್ಯರ್ಥಿಗಳಿಗೂ, ಎಲ್ಲ ನಾಯಕರಿಗೂ, ಪದಾಧಿಕಾರಿಗಳಿಗೂ ಹಾಗೂ ನಮ್ಮ ಎಲ್ಲ ನಿಷ್ಠಾವಂತ ಕಾರ್ಯಕರ್ತರಿಗೂ ಅಭಿನಂದನೆಗಳು.ಬಿ.ಎಸ್‌. ಯಡಿಯೂರಪ್ಪ,  ಮಾಜಿ ಮುಖ್ಯಮಂತ್ರಿ

ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಕಾಂಗ್ರೆಸ್‌  ಮೇಲೆ ನಂಬಿಕೆ ಇಟ್ಟು ನಮಗೆ ಆಶೀರ್ವಾದ ಮಾಡಿದ ಎಲ್ಲ ಕನ್ನಡಿಗ ಸಹೋದರ ಸಹೋದರಿಯರಿಗೆ ಕಾಂಗ್ರೆಸ್‌ ಪಕ್ಷ ಹೃತೂ³ರ್ವಕ ಕೃತಜ್ಞತೆಯನ್ನು ಸಲ್ಲಿಸುತ್ತದೆ.  ಜನಸಾಮಾನ್ಯರನ್ನು ತಲುಪಿ, ಪಕ್ಷದ ಅಭ್ಯರ್ಥಿಗಳ ಗೆಲುವಿಗಾಗಿ ಶ್ರಮಿಸಿದ ಎಲ್ಲ ಕಾಂಗ್ರೆಸ್‌ ಕಾರ್ಯಕರ್ತರು ಮತ್ತು ಮುಖಂಡರ ಕಾರ್ಯ ವೈಖರಿಯನ್ನು ಪಕ್ಷವು ವಿಶೇಷವಾಗಿ ಶ್ಲಾ ಸುತ್ತದೆ.ರಣದೀಪ್‌ ಸಿಂಗ್‌ ಸುಜೇìವಾಲಾ, ರಾಜ್ಯ ಕಾಂಗ್ರೆಸ್‌ ಉಸ್ತುವಾರಿ

ನಾನು ಅಧ್ಯಕ್ಷನಾದ ಮೇಲೆ ಮಾತ್ರ ಕಾಂಗ್ರೆಸ್‌ ಚುನಾವಣೆಗಳನ್ನು ಗೆಲ್ಲುತ್ತಿಲ್ಲ. ಕಾಂಗ್ರೆಸ್‌ ಪಕ್ಷ ಗೆಲ್ಲುವುದರ ಹಿಂದೆ ರಾಜ್ಯದ ಜನರ ಅಭಿಪ್ರಾಯ ಅಡಗಿದೆ. ಅದರಲ್ಲೂ ನಗರವಾಸಿಗಳು, ಪಟ್ಟಣವಾಸಿಗಳ ಅಭಿಪ್ರಾಯ ಕಾಂಗ್ರೆಸ್‌ ಪರ ವಾಲುತ್ತಿದೆ ಎಂಬುದು ಸ್ಪಷ್ಟವಾಗಿದೆ. ಮತದಾರರಿಗೆ ಈ ಸಂದರ್ಭದಲ್ಲಿ ಧನ್ಯವಾದ ಸಲ್ಲಿಸುತ್ತೇನೆ.ಡಿ.ಕೆ.ಶಿವಕುಮಾರ್‌, ಕೆಪಿಸಿಸಿ ಅಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next