Advertisement
ಮಂಡ್ಯ ಹಾಗೂ ರಾಮನಗರ ಕ್ಷೇತ್ರದ ಚುನಾವಣೆ ಫಲಿತಾಂಶದ ಬಗ್ಗೆ ಯಾರೂ ತಲೆಕೆಡಿಸಿಕೊಂಡಿಲ್ಲ. ಒಂದೊಮ್ಮೆ ಬಳ್ಳಾರಿ, ಶಿವಮೊಗ್ಗ, ಜಮಖಂಡಿ ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸಿದರೆ ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟಕ್ಕೆ ಮತದಾರರ ಒಪ್ಪಿಗೆಯಿಲ್ಲ ಎಂಬ ಸಂದೇಶ ರವಾನೆಯಾಗಲಿದ್ದು, ಮುಂದಿನ ಲೋಕಸಭೆ ಚುನಾವಣೆಯಲ್ಲಿ ಎರಡೂ ಪಕ್ಷಗಳು ಒಟ್ಟಿಗೆ ಹೋಗುವ “ಕನಸು’ಭಗ್ನವಾಗಿ ಪ್ರತ್ಯೇಕವಾಗಿ ಸ್ಪರ್ಧೆಗಿಳಿಯಲಿದೆ. ಮತ್ತೂಂದೆಡೆ ಸ್ಥಗಿತಗೊಂಡಿರುವ ಆಪರೇಷನ್ ಕಮಲ ಮತ್ತೆ ಪ್ರಾರಂಭವಾಗಿ ಸರ್ಕಾರದ ಅಸ್ತಿತ್ವಕ್ಕೆ ಸಂಚಕಾರ ತಂದೊಡ್ಡಬಹುದು ಎಂದು ಹೇಳಲಾಗುತ್ತಿದೆ. ಮೂರೂ ಕ್ಷೇತ್ರಗಳು ಕಾಂಗ್ರೆಸ್-ಜೆಡಿಎಸ್ಪಾಲಾ ದರೆ ಬಿಜೆಪಿಯ ರಾಜ್ಯ ನಾಯಕತ್ವಕ್ಕೆ ಸಂಚಕಾರ ಒದಗುವ ಸಾಧ್ಯತೆ ಇದೆ. ಹೊಸ ನಾಯಕತ್ವದಡಿ ಲೋಕಸಭಾ ಚುನಾವಣೆ ಎದುರಿಸುವಲೆಕ್ಕಾಚಾರ ಬಿಜೆಪಿ ದೆಹಲಿ ನಾಯಕರ ಮಟ್ಟದಲ್ಲಿ ನಡೆಯುತ್ತಿದೆ ಎಂದು ತಿಳಿದುಬಂದಿದೆ.
ನಗಳು ಮರುಕಳಿಸಬಹುದು ಎಂಬ ವಿಶ್ಲೇಷಣೆಗಳೂ ರಾಜಕೀಯ ವಲಯದಲ್ಲಿ ಕೇಳಿಬರುತ್ತಿವೆ. ಮ್ಯಾಜಿಕ್ ಆಶಾಭಾವನೆ: ಮೆಲ್ನೋಟಕ್ಕೆ ಅಬ್ಬರದ ಪ್ರಚಾರ ನಡೆಯುತ್ತಿದ್ದರೂ ಆಂತರಿಕವಾಗಿ ಈ ಹಂತದವರೆಗಿನ ಮಾಹಿತಿ ಪ್ರಕಾರ ಮೂರೂ ಕ್ಷೇತ್ರಗಳಲ್ಲಿ ಬಿಜೆಪಿಯನ್ನು ಹಿಂದಿಕ್ಕುವ ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟದ ಪ್ರಯತ್ನಕ್ಕೆ ಪೂರ್ಣ ಪ್ರಮಾಣದ ಯಶಸ್ಸು ಸಿಕ್ಕಿಲ್ಲ. ಇನ್ನೂ ಜಂಟಿ ಪ್ರಚಾರವೂ ಪ್ರಾರಂಭವಾಗದ ಕಾರಣ ಕೊನೆಯ ಮೂರ್‍ನಾಲ್ಕು ದಿನಗಳಲ್ಲಿ “ಮ್ಯಾಜಿಕ್’ ನಡೆಯುವ ಆಶಾಭಾವನೆಯಲ್ಲಿ ಎರಡೂ ಪಕ್ಷದ ನಾಯಕರಿದ್ದಾರೆ.
Related Articles
Advertisement
ಶಿವಮೊಗ್ಗದಲ್ಲಿ ಜೆಡಿಎಸ್ ಅಭ್ಯರ್ಥಿ ಗೆದ್ದರೆ ತಮ್ಮ ಅಸ್ತಿತ್ವಕ್ಕೆ ಸಂಚಕಾರ ಬರುವ ಆತಂಕದಿಂದ ಪ್ರಮುಖ ನಾಯಕರು ಮೇಲ್ನೋಟಕ್ಕೆ ಪ್ರಚಾರದಲ್ಲಿ ತೊಡಗಿದ್ದರೂ ಆಂತರಿಕವಾಗಿ ಬೇರೆಯೇ ಉದ್ದೇಶ ಹೊಂದಿದ್ದಾರೆ ಎನ್ನಲಾಗಿದೆ. ಹೀಗಾಗಿ, ಉಪ ಚುನಾವಣೆಯಲ್ಲಿ ಮೂರು ಪಕ್ಷಗಳ ನಾಯಕರು “ಮುಗುಂ’ ಲೆಕ್ಕಾಚಾರ ಇರುವುದರಿಂದ ಫಲಿತಾಂಶದ ನಂತರ ಒಂದಷ್ಟು ರಾಜಕೀಯ ವಿದ್ಯಮಾನಗಳು ನಡೆಯುವ ಸಾಧ್ಯತೆಗಳು ಕಂಡುಬರುತ್ತಿವೆ.
ಬಳ್ಳಾರಿ, ಜಮಖಂಡಿ ಪ್ರಚಾರಕ್ಕೆ ಕುಮಾರಸ್ವಾಮಿ ಡೌಟ್?ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಸ್ಪರ್ಧೆ ಮಾಡಿರುವ ಬಳ್ಳಾರಿ ಹಾಗೂ ಜಮಖಂಡಿಯಲ್ಲಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಪ್ರಚಾರ ನಡೆಸುವುದು ಅನುಮಾನವಾಗಿದೆ. ಮಂಡ್ಯಶಿವಮೊಗ್ಗ ಲೋಕಸಭೆ ಕ್ಷೇತ್ರಗಳಲ್ಲಿ ಪ್ರಚಾರಕ್ಕೆ ದಿನ ನಿಗದಿಪಡಿಸಿರುವ ಸಿಎಂ ಬಳ್ಳಾರಿ, ಜಮಖಂಡಿಗೆ ದಿನ ನಿಗದಿಪಡಿಸಿಲ್ಲ. ನ.1ರಂದು ಬಹಿರಂಗ ಪ್ರಚಾರಕ್ಕೆ ಕೊನೆಯ ದಿನ. ಶನಿವಾರವೂ ಮಂಡ್ಯದಲ್ಲಿ ಪ್ರಚಾರ ನಡೆಸಲಿರುವ ಸಿಎಂ ಅ.28 ರಿಂದ 31 ರವರೆಗೆ ಶಿವಮೊಗ್ಗದಲ್ಲಿರಲಿದ್ದಾರೆ. ಬಳ್ಳಾರಿ ಅಭ್ಯರ್ಥಿ ವಿ.ಎಸ್.ಉಗ್ರಪ್ಪ ಈ ಹಿಂದೆ ದೇವೇಗೌಡರ ಕುಟುಂಬದ ವಿರುದ್ಧ ವಾಗ್ದಾಳಿ ನಡೆಸಿದ್ದು ಇದಕ್ಕೆ ಕಾರಣವಿರಬಹುದು ಎನ್ನಲಾಗಿದೆ. ● ಎಸ್. ಲಕ್ಷ್ಮಿನಾರಾಯಣ