Advertisement

ಸುಪ್ರಜಿತ್‌ ಫೌಂಡೇಶನ್‌: 30.82 ಲಕ್ಷ ರೂ. ವಿದ್ಯಾರ್ಥಿವೇತನ ವಿತರಣೆ

08:35 AM Aug 06, 2017 | Team Udayavani |

ವಿಟ್ಲ: ಬೆಂಗಳೂರು ಸುಪ್ರಜಿತ್‌ ಫೌಂಡೇಶನ್‌ ವತಿಯಿಂದ ವಿಟ್ಲ ವಿಠಲ ಪದವಿಪೂರ್ವ ಕಾಲೇಜಿನ ಸುವರ್ಣ ರಂಗ ಮಂದಿರದಲ್ಲಿ ಬಂಟ್ವಾಳ ತಾಲೂ ಕಿನ 516 ವಿದ್ಯಾರ್ಥಿಗಳಿಗೆ 30.82 ಲಕ್ಷ ರೂ. ವಿದ್ಯಾರ್ಥಿವೇತನವನ್ನು ಶನಿವಾರ ವಿತರಿಸಲಾಯಿತು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಅಧ್ಯಕ್ಷ ಅಜಿತ್‌ ಕುಮಾರ್‌ ರೈ ಅವರು ವಿದ್ಯಾರ್ಥಿವೇತನ ವಿತರಿಸಿ,ವಿದ್ಯಾರ್ಥಿ ಗಳೆಲ್ಲರೂ ತಮ್ಮ ತಮ್ಮ ಕ್ಷೇತ್ರಗಳಲ್ಲಿ ಕಟಿಬದ್ಧರಾಗಿ, ಮುಂದೆ ಬರಬೇಕು. ಅವಕಾಶಗಳನ್ನು ಸದುಪಯೋಗ   ಪಡಿಸಿಕೊಂಡು, ಹೆಚ್ಚು ಪ್ರತಿಭಾವಂತ  ರಾಗಿ ಜೀವನದಲ್ಲಿ ಯಶಸ್ವಿಯಾಗ ಬೇಕು ಎಂದರು.

Advertisement

ಮುಂದಿನ ದಿನಗಳಲ್ಲಿವಿದ್ಯಾರ್ಥಿ ಗಳೆಲ್ಲರನ್ನೂ ಸಾಮಾಜಿಕ ಜಾಲತಾಣ ಗಳಲ್ಲಿ ಒಟ್ಟು ಸೇರಿಸಿ, ಸಂಪರ್ಕವನ್ನು ಸಾಧಿಸಿಕೊಂಡು ಅವರಿಗೆ ಉದ್ಯೋಗ, ಇನ್ನಿತರ ವಿಚಾರಗಳಲ್ಲಿ ತತ್‌ಕ್ಷಣ ಸ್ಪಂದಿಸುವ ಯೋಜನೆಯನ್ನು ರೂಪಿಸ ಲಾಗಿದೆ ಎಂದು ತಿಳಿಸಿದರು.

ವಿಠಲ ವಿದ್ಯಾ ಸಂಘದ ಸಂಚಾಲಕ ಎಲ್‌.ಎನ್‌. ಕೂಡೂರು ಅವರು ಮಾತನಾಡಿ ಪ್ರಾಮಾಣಿಕತೆ, ಬದ್ಧತೆ, ಉತ್ತಮ ನಡೆ ನುಡಿಯಿಂದ ಯಾವತ್ತೂ ಜಯವಿದೆ. ವಿದ್ಯಾರ್ಥಿಗಳೆಲ್ಲರೂ ಉತ್ತಮ ಮಾರ್ಗಸೂಚಿಗಳನ್ನು ರೂಢಿಸಿಕೊಳ್ಳ ಬೇಕು ಎಂದರು.
ವಿಠಲ ಸುಪ್ರಜಿತ್‌ ಐಟಿಐ ಸಂಚಾಲಕ ಸುಬ್ರಾಯ ಪೈ ಅವರು ಮಾತನಾಡಿ, ಸ್ಕಾಲರ್‌ಶಿಪ್‌ ಅಗಾಧವಾಗಿ ಬೆಳೆದಿದೆ. ಬಂಟ್ವಾಳದ ವಿದ್ಯಾರ್ಥಿಗಳಿಗೆ ಅತ್ಯಂತ ಫಲ ನೀಡಿದೆ ಎಂದರು.

ಒಟ್ಟು 1.01 ಕೋ.ರೂ. ವಿತರಣೆ
ಸ್ಕಾಲರ್‌ಶಿಪ್‌ ಕಮಿಟಿಯ ಅಧ್ಯಕ್ಷ ಎಂ. ಅನಂತಕೃಷ್ಣ ಹೆಬ್ಟಾರ್‌ ಪ್ರಸ್ತಾವ ನೆಗೈದು, ಸುಪ್ರಜಿತ್‌ ಫೌಂಡೇಶನ್‌ 2012ರಲ್ಲಿ ಆರಂಭಿಸಿದ ವಿದ್ಯಾರ್ಥಿ ವೇತನ ವಿತರಣೆಯಲ್ಲಿ ಇದುವರೆಗೆ ಒಟ್ಟು    839 ವಿದ್ಯಾರ್ಥಿಗಳಿಗೆ  1.01 ಕೋ. ರೂ.ಗಳನ್ನು ಒದಗಿಸಲಾಗಿದೆ. ಇದರಲ್ಲಿ ವಿಶೇಷವಾಗಿ 520 ವಿದ್ಯಾರ್ಥಿನಿಯರು ಫಲಾನುಭವಿಗಳಾಗಿದ್ದಾರೆ ಎಂದರು.

ವಿಠಲ ಪ.ಪೂ. ಕಾಲೆಜುಪ್ರಾಂಶು ಪಾಲ ಆದರ್ಶ ಎ.ಎಸ್‌. ಸ್ವಾಗತಿಸಿ ದರು. ಉಪನ್ಯಾಸಕ ಅಣ್ಣಪ್ಪ ಸಾಸ್ತಾನ  ನಿರೂಪಿಸಿದರು. ಅಧ್ಯಾಪಕ ಸಿ.ಎಚ್‌. ಸುಬ್ರಹ್ಮಣ್ಯ ಭಟ್‌ ವಂದಿಸಿದರು. ಉಪನ್ಯಾಸಕ ವೃಂದ ದವರು ವಿವಿಧ ವಿದ್ಯಾರ್ಥಿಗಳ ಪಟ್ಟಿ ವಾಚಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next