Advertisement

ಮೋದಿ ವಿರುದ್ಧ ಸುರ್ಜೇವಾಲಾ ವಾಗ್ಧಾಳಿ

11:41 PM Jul 06, 2019 | Team Udayavani |

ನವದೆಹಲಿ: ಕರ್ನಾಟಕದಲ್ಲಿ ಶಾಸಕರ ರಾಜೀನಾಮೆ ಕುರಿತು ಪ್ರತಿಕ್ರಿಯಿಸಿರುವ ಕಾಂಗ್ರೆಸ್‌ ವಕ್ತಾರ ರಣದೀಪ್‌ ಸುರ್ಜೆವಾಲಾ, “ಮೋದಿ ಎಂದರೆ ಭಾರತದಲ್ಲಿ ದುರುದ್ದೇಶಪೂರಿತವಾಗಿ ಯೋಜಿಸಿದ ಪಕ್ಷಾಂತರ’ ಎಂಬುದಾಗಿ ಆರೋಪಿಸಿದ್ದಾರೆ.

Advertisement

ಮೋದಿ ಎಂಬ ಪದಕ್ಕೆ ಅವರು ಈ ರೀತಿಯ ವ್ಯಾಖ್ಯಾನ ಮಾಡಿದ್ದು, ಹಣ ಮತ್ತು ಅಧಿಕಾರದ ಆಸೆ ತೋರಿಸಿ ಜನರಿಂದ ಆಯ್ಕೆಯಾದ ಸರ್ಕಾರವನ್ನು ಕೆಡವಲು ಯತ್ನಿಸುತ್ತಿರುವುದು ದುರದೃಷ್ಟಕರ ಸಂಗತಿಯಾಗಿದೆ. ಹಾಡಹಗಲಿನಲ್ಲೇ ಪ್ರಜಾಪ್ರಭುತ್ವದ ಕಗ್ಗೊಲೆಯಾಗುತ್ತಿದೆ ಎಂದು ಸುರ್ಜೇವಾಲಾ ಆರೋಪಿಸಿದ್ದಾರೆ.

ಈವರೆಗೆ 12 ಬಾರಿ ಸರ್ಕಾರವನ್ನು ಉರುಳಿಸಲು ಯತ್ನಿಸಲಾಗಿದೆ. ಅರುಣಾಚಲದಲ್ಲಿ ಇದು ಶುರುವಾಗಿದೆ. ಅಸ್ಸಾಂ, ತ್ರಿಪುರಾ, ಗೋವಾ, ಉತ್ತರಾಖಂಡ ಮತ್ತು ಮಹಾರಾಷ್ಟ್ರದಲ್ಲೂ ಸರ್ಕಾರ ಉರುಳಿಸಲು ಬಿಜೆಪಿ ಯತ್ನಿಸಿದೆ. ಪಶ್ಚಿಮ ಬಂಗಾಳದಲ್ಲಿ 30 ಶಾಸಕರು ಸಂಪರ್ಕದಲ್ಲಿದ್ದಾರೆ ಎಂದು ಪ್ರಧಾನಿ ಮೋದಿಯವರೇ ಹೇಳಿದ್ದಾರೆ. ಪ್ರಧಾನಿಯೇ ಇಂಥ ಕೃತ್ಯಕ್ಕೆ ಇಳಿದರೆ ನಾವು ಏನು ಮಾಡಲು ಸಾಧ್ಯ ಎಂದು ಸುರ್ಜೇವಾಲಾ ಪ್ರಶ್ನಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next