Advertisement

ತಡರಾತ್ರಿ ಸುರ್ಜೇವಾಲಾ ಸಂಧಾನ: ಕೆ.ಎಚ್.ಮುನಿಯಪ್ಪ ಮುನಿಸು ಶಮನ

11:30 AM Aug 29, 2022 | Team Udayavani |

ಬೆಂಗಳೂರು: ಕಾಂಗ್ರೆಸ್ ನಾಯಕತ್ವದ ವಿರುದ್ಧ ಮುನಿಸಿಕೊಂಡಿದ್ದ ಮಾಜಿ ಸಂಸದ ಕೆ.ಎಚ್.ಮುನಿಯಪ್ಪ ಅವರ ಜತೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ನಡೆಸಿದ ಸಂಧಾನ ಸಭೆ ಯಶಸ್ವಿಯಾಗಿದೆ.

Advertisement

ಇದನ್ನೂ ಓದಿ:ಟಿಎಂಸಿ ಪಕ್ಷದ ಕೆಲವು ಸಂಸದರು, ಶಾಸಕರು ದೊಡ್ಡ ಲೂಟಿಕೋರರು: ಟಿಎಂಸಿ ಶಾಸಕ

ಭಾನುವಾರ ತಡರಾತ್ರಿ ಮುನಿಯಪ್ಪ ನಿವಾಸಕ್ಕೆ ತೆರಳಿದ ಸುರ್ಜೇವಾಲಾ, ಪಕ್ಷದೊಳಗಿನ ವಿದ್ಯಮಾನಗಳನ್ನು ಬಗೆಹರಿಸಲಾಗುವುದು. ನೀವು ಯಾವುದೇ ಕಾರಣಕ್ಕೂ ಪಕ್ಷ ತೊರೆಯಬಾರದು ಎಂದು ಮನವರಿಕೆ ಮಾಡಿದ್ದರು. ಮಾತ್ರವಲ್ಲ ಭಾರತ ಜೋಡೋ ಯಾತ್ರೆಯಲ್ಲಿ ಭಾಗವಹಿಸುವಂತೆ ಮನವಿ ಮಾಡಿದ್ದರು. ಗುಲಾಂ ನಬಿ ಆಜಾದ್ ಪಕ್ಷ ತ್ಯಾಗದ ಬೆನ್ನಲ್ಲಿ ಕರ್ನಾಟಕದಲ್ಲಿ ಮುನಿಯಪ್ಪ ಈ ಹಾದಿ ತುಳಿಯಬಹುದೆಂಬ ಮಾತುಗಳ ಕೇಳಿ ಬಂದಿತ್ತು. ಆದರೆ ಸುರ್ಜೇವಾಲಾ ಅವರ ತಡರಾತ್ರಿಯ ಸಂಧಾನಸಭೆ ಯಶಸ್ವಿಯಾಗಿದೆ ಎಂದು ತಿಳಿದು ಬಂದಿದೆ.

ಹಿನ್ನೆಲೆ ಏನು ? :
ವಿಪಕ್ಷ ನಾಯಕ‌ ಸಿದ್ದರಾಮಯ್ಯ , ಮಾಜಿ ಸ್ಪೀಕರ್ ರಮೇಶ್ ಕುಮಾರ್ ವಿರುದ್ಧ‌‌  ಮುನಿಯಪ್ಪ ಮುನಿಸಿಕೊಂಡು ಐದು ವರ್ಷಗಳಾಯ್ತು. ಮೂವರ ಜತೆ ಹೊಂದಾಣಿಕೆ ಅಸಾಧ್ಯ ಎಂಬ ಸ್ಥಿತಿ ನಿರ್ಮಾಣವಾಗಿತ್ತು. ಕೆಲ ದಿನಗಳ ಹಿಂದೆ ಕೆ.ಎಚ್.ಮುನಿಯಪ್ಪ ಸಿಎಂ ಬಸವರಾಜ್ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದರು.

ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಮನೆಗೆ ಮೊದಲು ಭೇಟಿ ನೀಡಿ ಮಾತುಕತೆ ನಡೆಸಿದ ಮುನಿಯಪ್ಪ ನಂತರ ಸಿಎಂ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದರು. ಹೀಗಾಗಿ ಮುನಿಯಪ್ಪ ಪಕ್ಷ ತೊರೆದು ಬಿಜೆಪಿ ಸೇರುತ್ತಾರೆಂಬ ಮಾತು ದಟ್ಟವಾಗಿತ್ತು.

Advertisement

ಜೆಡಿಎಸ್ ಸಂಪರ್ಕ :
ತಾತ್ಕಾಲಿಕ ಮುನಿಸು ಶಮನವಾಗಿದ್ದರೂ ಮುನಿಯಪ್ಪ ಅವರ ರಾಜಕೀಯ ನಡೆ ಇನ್ನೂ ನಿಗೂಢವಾಗಿಯೇ ಉಳಿದಿದೆ. ದಲಿತ ಎಡಗೈ ಸಮುದಾಯದ ಪ್ರಬಲ ನಾಯಕರಾಗಿರುವ ಮುನಿಯಪ್ಪ ಜತೆ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಯಾರೊಬ್ಬರೂ ಸೌಹಾರ್ದಯುತ ಸಂಬಂಧ ಹೊಂದಿಲ್ಲ. ರಮೇಶ್ ಕುಮಾರ್ ಹಾಗೂ ಸಿದ್ದರಾಮಯ್ಯ ಜತೆಗಿನ ವಿವಾದ ಶಮನವಾಗುವ ಯಾವ ಲಕ್ಷಣವೂ ಇಲ್ಲ. ಆದರೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಜತೆಗೆ ಮುನಿಯಪ್ಪ ಅತ್ಯುತ್ತಮ ಬಾಂಧವ್ಯ ಹೊಂದಿದ್ದಾರೆ. ಹೀಗಾಗಿ ಚುನಾವಣೆ ಹೊಸ್ತಿಲಲ್ಲಿ ಮುನಿಯಪ್ಪ ಜೆಡಿಎಸ್ ಸೇರಿದರೂ ಆಶ್ಚರ್ಯವಿಲ್ಲ ಎಂಬ ಮಾತುಗಳು ಕಾಂಗ್ರೆಸ್ ವಲಯದಿಂದಲೇ ಕೇಳಿ ಬರುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next