Advertisement
ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆಯು ದೇಶದಲ್ಲಿ ಒಟ್ಟು 172 ಶಾಲೆಗಳಿಗೆ ರಾಷ್ಟ್ರ ಪ್ರಶಸ್ತಿ ಘೋಷಿಸಿದ್ದು, ಕರ್ನಾಟಕದಲ್ಲಿ 8 ಶಾಲೆಗಳಿಗೆ ಹಾಗೂ ಬಂಟ್ವಾಳ ತಾಲೂಕಿನ 1 ಶಾಲೆಗೆ ಈ ಪ್ರಶಸ್ತಿಯನ್ನು ಘೋಷಿಸಿದೆ. ರಾಜ್ಯದಲ್ಲೇ ವಿವಿಧ ರೀತಿಯಲ್ಲಿ ವಿಶಿಷ್ಟ ಸಾಧನೆ ಮಾಡಿದ ಸರಕಾರಿ ಶಾಲೆಗಳಲ್ಲಿ ಇದು ಒಂದನೇ ಸ್ಥಾನ ಪಡೆದುಕೊಂಡಿದೆ.
ಈ ಶಾಲೆಯನ್ನು 1960ರಲ್ಲಿ ಸ್ಥಾಪಿಸಲಾಗಿತ್ತು. 1ರಿಂದ 10ನೇ ತರಗತಿವರೆಗೆ ಒಟ್ಟು 500ಕ್ಕಿಂತಲೂ ಅಧಿಕ ವಿದ್ಯಾರ್ಥಿ ಗಳು ಇಲ್ಲಿ ಓದುತ್ತಿದ್ದಾರೆ. ಸ್ವತ್ಛತೆ, ಶಿಸ್ತು, ಪರಿಸರದ ಬಗ್ಗೆ ವಿಶೇಷ ಕಾಳಜಿ ವಹಿಸಲಾಗಿದ್ದು, ಈ ನಿಟ್ಟಿನಲ್ಲಿಯೂ ಮಕ್ಕಳಿಗೆ ವಿಶೇಷ ತರಬೇತಿ ನೀಡಲಾಗುತ್ತಿದೆ. ಗ್ರಾಮೀಣ ಕೃಷಿ ಜೀವನದ ಪರಿಚಯ ಮಾಡಲಾಗುತ್ತಿದೆ. ತೋಟಗಾರಿಕೆಯ ಬಗ್ಗೆ ಮಕ್ಕಳಲ್ಲಿ ಹೆಚ್ಚಿನ ಆಸಕ್ತಿ ಹುಟ್ಟಿಸಲಾಗುತ್ತಿದೆ. ಒಂದೂವರೆ ಎಕರೆಯಲ್ಲಿ ಅಡಿಕೆ ಬೆಳೆ
ಹತ್ತು ವರ್ಷಗಳ ಹಿಂದೆ ಶಾಲೆಯ ಸಮೀಪದ ಒಂದೂವರೆ ಎಕರೆ ಜಾಗದಲ್ಲಿ ಅಡಿಕೆ ಗಿಡ ನೆಡಲಾಗಿತ್ತು. ಕಳೆದ ನಾಲ್ಕು ವರ್ಷಗಳಿಂದ ಅಡಿಕೆ ಫಲ ನೀಡುತ್ತಿದೆ. ಸುಮಾರು 500 ಅಡಿಕೆ ಮರಗಳು ಸುಂದರವಾಗಿ ಬೆಳೆದು ನಿಂತು ಫಲ ನೀಡುತ್ತಿವೆ.
Related Articles
Advertisement
ಸ್ವತ್ಛತೆಯ ಮಾಪನ ಧ್ವಜ ಶಾಲೆಯ ಸುತ್ತ ಸ್ವತ್ಛತೆಯಾಗಿದೆಯೆಂದು ನಿರ್ಧರಿ ಸುವುದಕ್ಕೆ ಒಂದು ತಂಡವನ್ನು ನಿರ್ಮಿಸಲಾಗಿದೆ. ಆ ತಂಡ ಪ್ರತಿದಿನ ಇಡೀ ಶಾಲೆ ಪರಿಸರವನ್ನು ಪರೀಕ್ಷಿಸಿ, ಸಂಬಂಧಪಟ್ಟ ಶಿಕ್ಷಕರಿಗೆ ವರದಿ ಒಪ್ಪಿಸುತ್ತದೆ. ಆಮೇಲೆ ಶಿಕ್ಷಕರು ಪರಿಸರವನ್ನು ಮತ್ತೂಮ್ಮೆ ಪರೀಕ್ಷಿಸಿ, ಪರಿಸರ ಸ್ವತ್ಛತೆಯನ್ನು ಕಾಪಾಡಲಾಗಿದ್ದರೆ ಬಿಳಿ ಧ್ವಜ ವನ್ನು ಹಾರಿಸುತ್ತದೆ. ಪರೀಕ್ಷಿಸುವ ಸಂದರ್ಭ ಕಸ ಗಮ ನಿ ಸಲ್ಪಟ್ಟರೆ ಸ್ವತ್ಛತೆಯನ್ನು ಕಾಪಾಡಲಿಲ್ಲ ಎಂದು ಕಂದು ಬಣ್ಣದ ಧ್ವಜ ಹಾರಿಸಲಾಗುತ್ತದೆ.